ನೀರಜ್​ ಚೋಪ್ರಾಗೆ XUV-700 ಕಾರ್ ಕೊಡಿ ಎಂದ ಅಭಿಮಾನಿ; ಕೊಟ್ಟೇ ಬಿಡ್ತೀನಿ ಎಂದ ಆನಂದ್​​​ ಮಹೀಂದ್ರಾ

ನೀರಜ್​ ಚೋಪ್ರಾಗೆ XUV-700 ಕಾರ್ ಕೊಡಿ ಎಂದ ಅಭಿಮಾನಿ; ಕೊಟ್ಟೇ ಬಿಡ್ತೀನಿ ಎಂದ ಆನಂದ್​​​ ಮಹೀಂದ್ರಾ

ಟೋಕಿಯೋ ಒಲಿಂಪಿಕ್ಸ್​ನಲ್ಲಿ ಜಾವೆಲಿನ್ ಥ್ರೋ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಭಾರತದ ನೀರಜ್ ಚೋಪ್ರಾಗೆ ಮಹೀಂದ್ರಾ ಕಂಪನಿ ಮಾಲೀಕ ಆನಂದ್ ಮಹೀಂದ್ರಾ ಭರ್ಜರಿ ಗಿಪ್ಟ್​​​ ಘೋಷಿಸಿದ್ದಾರೆ. ಸದ್ಯದಲ್ಲೇ ನೀರಜ್ ಛೋಪ್ರಾಗೆ XUV 700 ಕಾರು ಗಿಫ್ಟ್ ನೀಡುವುದಾಗಿ ಆನಂದ್ ಮಹೀಂದ್ರಾ ತಿಳಿಸಿದ್ದಾರೆ.

ಜಾವೆಲಿನ್ ಥ್ರೋ ವಿಭಾಗದಲ್ಲಿ ಚಿನ್ನ ಗೆಲ್ಲುವ ಮೂಲಕ ಮಹತ್ತರ ಸಾಧನೆ ಮಾಡಿದ ನೀರಜ್​​ಗೆ ಆನಂದ್​​ ಮಹೀಂದ್ರಾ ಮೊದಲಿಗೆ ಅಭಿನಂದನೆಗಳನ್ನು ತಿಳಿಸಿ ಟ್ವೀಟ್​​ ಮಾಡಿದ್ದರು. ಈ ಟ್ವೀಟ್​​ಗೆ ರೀಪ್ಲೆ ಮಾಡಿದ್ದ ಅಭಿಮಾನಿಯೋರ್ವ ನೀರಜ್​ ಚೋಪ್ರಾಗೆ XUV 700 ಕಾರ್ ಕೊಡಿ ಎಂದಿದ್ದಾರೆ. ಇದಕ್ಕೆ ಯೆಸ್​ ಎಂದ ಆನಂದ್​ ಮಹೀಂದ್ರಾ ನೀರಜ್ ಚೋಪ್ರಾಗೂ XUV 700 ಕಾರ್ ಕೊಡುಗೆ ನೀಡುವುದಾಗಿ ಹೇಳಿದ್ದಾರೆ.

blank

ಇದನ್ನೂ ಓದಿ: ಸೇನೆಗೆ ಸೇರುವಾಗ ಸಾಮಾನ್ಯ ಹುಡುಗ; ಇಂದು ಇಡೀ ವಿಶ್ವವನ್ನೇ ಗೆದ್ದ ನೀರಜ್​​ ಚೋಪ್ರಾ

ಇನ್ನು, ಹರಿಯಾಣ ಸರ್ಕಾರ ನೀರಜ್ ಚೋಪ್ರಾಗೆ 6 ಕೋಟಿ ರೂಪಾಯಿ ನಗದು ಬಹುಮಾನವನ್ನು ಘೋಷಿಸಿದೆ. ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ 6 ಕೋಟಿ ರೂಪಾಯಿ ಘೋಷಿಸಿದ ಬೆನ್ನಲ್ಲೇ ಆನಂದ್ರ ಮಹೀಂದ್ರಾ ನೀರಜ್​​ಗೆ ಭಾರೀ ಮೊತ್ತದ ಕಾರು ಗಿಫ್ಟ್​ ಕೊಡೋದಾಗಿ ಟ್ವೀಟ್​​ ಮಾಡಿದ್ದಾರೆ.

Source: newsfirstlive.com Source link