‘ನಾನು ಅವನಿಗೆ ಅಡ್ವಾನ್ಸ್ ಶುಭಾಶಯ ಹೇಳಿದ್ದೆ’ -ನೀರಜ್​ಗೆ ಕೋಚ್ ಆಗಿದ್ದ ಕರ್ನಾಟಕದ ಕಾಶಿನಾಥ್ ಖುಷಿ

‘ನಾನು ಅವನಿಗೆ ಅಡ್ವಾನ್ಸ್ ಶುಭಾಶಯ ಹೇಳಿದ್ದೆ’ -ನೀರಜ್​ಗೆ ಕೋಚ್ ಆಗಿದ್ದ ಕರ್ನಾಟಕದ ಕಾಶಿನಾಥ್ ಖುಷಿ

ಬೆಂಗಳೂರು: ಜಾವೆಲಿನ್ ಥ್ರೋ ಮೂಲಕ ಟೋಕಿಯೋ ಒಲಿಂಪಿಕ್ಸ್​ನಲ್ಲಿ ನೀರಜ್ ಚೋಪ್ರಾ ಚಿನ್ನ ಗೆದ್ದಿದ್ದಾರೆ. ನೀರಜ್ ಚೋಪ್ರಾಗೆ ಈ ಹಿಂದೆ ಕೋಚ್ ಆಗಿದ್ದ ಶಿರಸಿಯ ಕಾಶಿನಾಥ್ ನಾಯಕ್ ನೀರಜ್ ಚೋಪ್ರಾ ಗೆಲುವಿನ ಸಂಭ್ರಮವನ್ನ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಚಿನ್ನ ಗೆದ್ದ ಇಂಡಿಯನ್​​ ಆರ್ಮಿ ಸುಬೇದಾರ್​​​ ನೀರಜ್​​ ಚೋಪ್ರಾಗೆ ₹6 ಕೋಟಿ ಬಹುಮಾನ

ಕಾಶಿನಾಥ್ ನಾಯಕ್ ಮಾತನಾಡಿ.. ನನಗೆ ನೀರಜ್ ಚೋಪ್ರಾ ಚಿನ್ನ ಗೆದ್ದಿದ್ದು ಬಹಳ ಖುಷಿಯಾಗಿದೆ. ನನ್ನ ಕನಸನ್ನ ಆತ ನನಸು ಮಾಡಿದ್ದಾನೆ. ಮೊದಲ ಬಾರಿಗೆ ಗೋಲ್ಡ್ ಗೆದ್ದಿರುವುದು ಇತಿಹಾಸವೇ ಸರಿ. 2015 ರಲ್ಲಿ ಅವರಿಗೆ ಇನ್ನೂ 17 ವರ್ಷ ಆಗಿತ್ತು. ನನಗೆ ಆಗಲೇ ಆತ ಸಾಧನೆ ಮಾಡ್ತಾನೆ ಅಂತ ಗೊತ್ತಿತ್ತು. ಅವರ ಅಂಕಲ್​ಗೆ ನಿಮ್ಮ ಹುಡುಗ 100 ಪರ್ಸೆಂಟ್ ಗೋಲ್ಡ್ ಮೆಡಲ್ ತರ್ತಾನೆ ಅಂತ ನಾನು ಹೇಳಿದ್ದೆ.

ಇದನ್ನೂ ಓದಿ: BIG BREAKING: ಒಲಿಂಪಿಕ್ಸ್​ನಲ್ಲಿ ಚಿನ್ನ ಗೆದ್ದ ನೀರಜ್‌ ಚೋಪ್ರಾ

ಇವತ್ತು ಮೆಡಲ್ ತರ್ತಾನೆ ಅಂತ ನನಗೆ ಗೊತ್ತಾಗಿತ್ತು. ನಾನು ಅವನಿಗೆ ಮೊದಲೇ ಕಂಗ್ರಾಜುಲೇಷನ್ಸ್ ಹೇಳಿ ಮೆಸೇಜ್ ಕಳುಹಿಸಿದ್ದೆ. ನಾನು 2.5 ವರ್ಷ ಅವನಿಗೆ ಕೋಚ್ ಆಗಿ ಕೆಲಸ ಮಾಡಿದ್ದೆ. ಈಗಲೂ ಅವನು ನನ್ನ ಕಾಂಟ್ಯಾಕ್ಟ್​ನಲ್ಲೇ ಇದ್ದಾನೆ. ಆಫೀಸ್ ಕೆಲಸ ಇದ್ರೆ ಈಗಲೂ ಬಂದು ಹೋಗ್ತಾನೆ. ಕಳೆದ ಎರಡು ತಿಂಗಳ ಹಿಂದೆ ಅವನು ನಮ್ಮ ಮನೆಗೆ ಬಂದು ಹೋಗಿದ್ದ ಎಂದಿದ್ದಾರೆ. ಕರ್ನಾಟಕದಿಂದಲೂ ಹೀಗೆ ಸಪೋರ್ಟ್ ಸಿಕ್ಕರೆ ಅವರೂ ಮೆಡಲ್ ತರ್ತಾರೆ. ಕೆಳಮಟ್ಟದಲ್ಲಿ ಪ್ರೋತ್ಸಾಹ ಸಿಗಬೇಕಿದೆ. ಸದ್ಯ ನನ್ನ ಗರಡಿಯಲ್ಲಿ 7-8 ಹುಡುಗರು ಇದ್ದಾರೆ ಎಂದು ಕಾಶಿನಾತ್ ಚೋಪ್ರಾ ಹೇಳಿದ್ದಾರೆ.

Source: newsfirstlive.com Source link