ಮೊದಲು ಜೇಟ್ಲಿ, ಮೋದಿ ಹೆಸರು ಚೇಂಜ್ ಮಾಡ್ಲಿ.. ಆಮೇಲೆ ಕ್ಯಾಂಟೀನ್ ಹೆಸರು ಬದಲಿಸಲಿ- ಸಿದ್ದರಾಮಯ್ಯ

ಮೊದಲು ಜೇಟ್ಲಿ, ಮೋದಿ ಹೆಸರು ಚೇಂಜ್ ಮಾಡ್ಲಿ.. ಆಮೇಲೆ ಕ್ಯಾಂಟೀನ್ ಹೆಸರು ಬದಲಿಸಲಿ- ಸಿದ್ದರಾಮಯ್ಯ

ಬೆಂಗಳೂರು: ಇಂದಿರಾ ಕ್ಯಾಂಟೀನ್ ಹೆಸರು ಬದಲಿಸುವಂತೆ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ. ರವಿ ಮುಖ್ಯಮಂತ್ರಿಗಳಿಗೆ ಸಲಹೆ ನೀಡಿದ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಇದೊಂದು ದ್ವೇಷದ ರಾಜಕಾರಣ, ಗರೀಬಿ ಹಟಾವೋ ಮಾಡಿದ್ದು ಇಂದಿರಾ ಗಾಂಧಿ ಅದಕ್ಕೋಸ್ಕರ ಇಂದಿರಾ ಕ್ಯಾಂಟೀನ್​ಗೆ ಅವರ ಹೆಸರಿಟ್ಟಿದ್ದೇವೆ ಅವರು ಹೆಸರು ಬದಲಾವಣೆ ಮಾಡಲಿ ಆಮೇಲೆ ನೋಡೋಣ ಎಂದು ಎಚ್ಚರಿಕೆ ನೀಡಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಇಂದಿರಾ ಕ್ಯಾಂಟಿನ್​ ಹೆಸರು ಬದಲಾಯಿಸುವ ವಿಚಾರ ಕುರಿತು ಮಾತನಾಡಿದ ಅವರು ಬಿಜೆಪಿಯವರು ಇಂದೀರಾ ಕ್ಯಾಂಟಿನ್​ ಹೆಸರು ಬದಲಾವಣೆ ಮಾಡುವದಾದರೆ, ಅವರೇ ಇಟ್ಟ ಅರುಣ್ ಜೇಟ್ಲಿ ಹೆಸರನ್ನು, ಗುಜರಾತ್ ನಲ್ಲಿ ಕ್ರೀಡಾಂಗಣಕ್ಕೆ ಇಟ್ಟ ಮೋದಿ ಹೆಸರನ್ನು ಮೊದಲು ಬದಲಾಯಿಸಲಿ ಎಂದಿದ್ದಾರೆ.

ಧ್ಯಾನ್ ಚಂದ್ ದೇಶ ಕಂಡ ಹೆಸರಾಂತ ಹಾಕಿ ಪಟು. ಅವರ ಹೆಸರನ್ನು ಬೇರೆ ಪ್ರಶಸ್ತಿಗಳಿಗೆ ಇಡಲಿ ಅದಕ್ಕೆ ನನ್ನ ಅಭ್ಯಂತರವಿಲ್ಲ, ಆದರೆ ರಾಜೀವ್ ಗಾಂಧಿ ಹೆಸರನ್ನು ಯಾಕೆ ಚೇಂಜ್ ಮಾಡಿದ್ದೀರಾ ಎಂದು ಕಿಡಿ ಕಾರಿದ್ದಾರೆ, ನಿಮ್ಮ ಸರ್ಕಾರ ಬಂದಾಗ ನೀವು ಹೆಸರು ಬದಲಾಯಿಸೋದು, ನಮ್ಮ ಸರ್ಕಾರ ಬಂದಾಗ ನಾವು ಬದಲಾಯಿಸೋದು ಸರಿಯಲ್ಲ ಎಂದಿದ್ದಾರೆ.

ಸಿಟಿ ರವಿ ಹೇಳಿದ ತಕ್ಷಣ ಹೆಸರು ಚೇಂಜ್​ ಮಾಡಲ್ಲ. ನಾವು ಬದಲಾವಣೆ ಮಾಡಬಾರದು ಎಂದು ಒತ್ತಾಯಿಸುತ್ತೇವೆ, ಸರ್ಕಾರ ಏನ್ ತೀರ್ಮಾನ ಮಾಡುತ್ತೋ ನೋಡೋಣ, ಎಂದಿದ್ದಾರೆ. ಬಿಜೆಪಿಯವರಿಗೆ ಬಡವರ ಬಗ್ಗೆ ಕಾಳಜಿ‌ ಇಲ್ಲ, ಬಂಡವಾಳ ಶಾಹಿ, ಕಾರ್ಪೊರೇಟ್ ಪರ ಇದ್ದವರಿಗೆ ಇದ್ದವರಿಗೆ ದಲಿತ, ಬಡವರ ಬಗ್ಗೆ ಕಾಳಜಿ ಬರಲು ಹೇಗೆ ಸಾಧ್ಯ ಎಂದು ಅವರು ವಾಗ್ದಾಳಿ ಮಾಡಿದ್ದಾರೆ.

Source: newsfirstlive.com Source link