BIG BREAKING; ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವಿಟರ್ ಅಕೌಂಟ್ ಸಸ್ಪೆಂಡ್

BIG BREAKING; ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವಿಟರ್ ಅಕೌಂಟ್ ಸಸ್ಪೆಂಡ್

ನವದೆಹಲಿ: ಮೈಕ್ರೋ ಬ್ಲಾಗಿಂಗ್ ವೆಬ್​ಸೈಟ್​ಗಳಲ್ಲಿ ಒಂದಾದ ಟ್ವಿಟರ್ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಟ್ವಿಟರ್ ಅಕೌಂಟ್​ನ್ನು ಸಸ್ಪೆಂಡ್ ಮಾಡಿದೆ. ಈ ವಿಚಾರವಾಗಿ ಸ್ವತಃ ಕಾಂಗ್ರೆಸ್ ಖಾತೆಯಿಂದ ಮಾಹಿತಿ ಹೊರಬಿದ್ದಿದೆ.

ಕಾಂಗ್ರೆಸ್ ತನ್ನ ಅಧಿಕೃತ ಟ್ವಿಟರ್ ಅಕೌಂಟ್​ನಲ್ಲಿ ರಾಹುಲ್ ಗಾಂಧಿ ಟ್ವಿಟರ್ ಅಕೌಂಟ್ ಸಸ್ಪೆಂಡ್ ಆಗಿರೋದಾಗಿ ಹೇಳಿದೆ. ‘ರಾಹುಲ್ ಗಾಂಧಿಯವರ ಟ್ವಿಟರ್ ಅಕೌಂಟ್​ ತಾತ್ಕಾಲಿಕವಾಗಿ ಸಸ್ಪೆಂಡ್ ಆಗಿದೆ. ಅವರ ಟ್ವಿಟರ್ ಖಾತೆಯನ್ನ ಪುನರ್ ಸ್ಥಾಪಿಸಲು ಪ್ರಯತ್ನಗಳು ನಡೆಯುತ್ತಿವೆ. ಅಲ್ಲಿಯವರೆಗೆ ಉಳಿದ ಸೋಷಿಯಲ್ ಮೀಡಿಯಾ ಅಕೌಂಟ್​ಗಳ ಮೂಲಕ ರಾಹುಲ್ ಗಾಂಧಿ ಜನರಿಗೆ ಧ್ವನಿಯಾಗಲಿದ್ದಾರೆ. ಜನರಿಗಾಗಿ ಹೋರಾಟ ನಡೆಸಲಿದ್ದಾರೆ’ ಎಂದು ಹೇಳಿದೆ.

 

Source: newsfirstlive.com Source link