ಉತ್ತಮ ಖಾತೆಗಾಗಿ ಮನವಿ ಮಾಡ್ತೇನೆ.. ಸಿಗದಿದ್ದರೆ ಮುಂದಿನ ನಿರ್ಧಾರ; ಆನಂದ್ ಸಿಂಗ್ ಅಸಮಾಧಾನ

ಉತ್ತಮ ಖಾತೆಗಾಗಿ ಮನವಿ ಮಾಡ್ತೇನೆ.. ಸಿಗದಿದ್ದರೆ ಮುಂದಿನ ನಿರ್ಧಾರ; ಆನಂದ್ ಸಿಂಗ್ ಅಸಮಾಧಾನ

ಬಳ್ಳಾರಿ: ಸಿಎಂ ಬಸವರಾಜ ಬೊಮ್ಮಾಯಿ ಅವರು ಕೊನೆಗೂ ನೂತನ ಸಚಿವರಿಗೆ ಜವಾಬ್ದಾರಿಯನ್ನ ನೀಡಿದ್ದಾರೆ. ಆಗಸ್ಟ್ 4 ರಂದು ಸಚಿವ ಸಂಪುಟ ರಚನೆ ಮಾಡಿದ್ದ ಸಿಎಂ ಬೊಮ್ಮಾಯಿ ಈ ವೇಳೆ ಪ್ರಮಾಣವಚನ ಸ್ವೀಕಾರ ಮಾಡಿದ 29 ಮಂದಿಗೂ ಇದೀಗ ಖಾತೆಗಳನ್ನ ಹಂಚಿಕೆ ಮಾಡಿದ್ದು ಅಲ್ಲಲ್ಲಿ ಅಸಮಾಧಾನದ ಹೊಗೆ ಏಳಲು ಆರಂಭಿಸಿದೆ.

ಇದರ ಬೆನ್ನಲ್ಲೇ ಸಚಿವ ಆನಂದ್​ಸಿಂಗ್​ ಬಹಿರಂಗವಾಗಿ ತಮಗೆ ದೊರೆತ ಸಚಿವ ಸ್ಥಾನದ ವಿರುದ್ಧ ಅಸಮಾಧಾನ ಹೊರಹಾಕಿದ್ದು, ಸರ್ಕಾರ ರಚನೆಯಾಗಲು ನನ್ನ ಪಾತ್ರ ಬಹಳ ಮಹತ್ತರವಾಗಿದ್ದು, ಮೊದಲು ನಾನು ರಾಜೀನಾಮೆ ನೀಡಿದ ಬಳಿಕ ಉಳಿದ ಶಾಸಕರು ರಾಜೀನಾಮೆ ನೀಡಿ ಪಕ್ಷದ ಜೊತೆ ಕೈ ಜೋಡಿಸಿದ್ದರು, ನನಗೆ ದೊಡ್ಡ ಖಾತೆ ಕೊಡದೇ ಇರಲು ಕಾರಣವೇನು? ನನ್ನಲ್ಲಿ ಏನು ಕಡಿಮೆಯಿದೇ? ನಾನೇನು ಭ್ರಷ್ಟಾಚಾರ ಮಾಡಿದ್ದೇನಾ..? ನಾನೇನು ಕಳಂಕಿತನೇ..? ನಾನೇನು ಮಹತ್ತರವಾದ ಖಾತೆ ನಿಭಾಯಿಸಲು ಅಸಮರ್ಥನೇ? ಎಂದು ತಮ್ಮ ಅಸಮಾಧಾನ ಸ್ಫೋಟಿಸಿದ್ದಾರೆ.

ಇದನ್ನೂ ಓದಿ: BREAKING ನೂತನ ಸಚಿವರಿಗೆ ಖಾತೆ ಹಂಚಿಕೆ; ಯಾರಿಗೆ ಯಾವ ಜವಾಬ್ದಾರಿ..?

ನನ್ನ ತ್ಯಾಗಕ್ಕೆ ಈಗ ಕೊಟ್ಟಿರುವ ಖಾತೆಯೇ ಲಾಯಕ್ಕೂ ದೊಡ್ಡ ಖಾತೆ ನಿಭಾಯಿಸಲು ನೀನು ಅಸಮರ್ಥ ಎಂದು ಸಕಾರಣ ಕೊಟ್ರೆ ಶಿರಬಾಗಿ ಅದನ್ನು ಒಪ್ಪಿಕೊಳ್ಳುವೆ. ನನಗೆ ಇಂತಹದೇ ಖಾತೆ ಕೊಡಿ ಎನ್ನುತ್ತಿಲ್ಲ, ನನಗೆ ಸರಿಸಮಾನಾದ ಸ್ಥಾನ ಕೊಡಿ ಎನ್ನುತ್ತಿರುವೆ, ಬ್ಲ್ಯಾಕ್​ಮೇಲ್ ತಂತ್ರ ಅನುಸರಿಸುವ ರಾಜಕಾರಣಿ ನಾನಲ್ಲ. ನಾಳೆ ಸಿಎಂ ಭೇಟಿಯಾಗಲಿದ್ದು, ಭೇಟಿಯ ಬಳಿಕ ಮುಖ್ಯಮಂತ್ರಿಗಳು ನನ್ನ ನೋವನ್ನು ಅರ್ಥ ಮಾಡಿಕೊಂಡು ಒಳ್ಳೆಯ ಖಾತೆ ಕೊಡಬಹುದೆನ್ನುವ‌ ನಿರೀಕ್ಷೆ ಇದೆ ಎಂದಿದ್ದಾರೆ.

ನಾಳೆ ಸಿಎಂ ಜೊತೆ ಮಾತನಾಡಿ ಮನವಿ ಮಾಡುತ್ತೇನೆ ನನ್ನ ಮನವಿಯನ್ನೂ ಅವರು ಪರಿಗಣಿಸಲಿಲ್ಲವೆಂದರೆ ಮುಂದಿನ ತೀರ್ಮಾನ ತೆಗೆದುಕೊಳ್ಳುವುದಾಗಿ ಹೇಳಿದ ಅವರು. ನನಗೆ ಈಗ ನೀಡಿರುವ ಖಾತೆ ನಿರಾಸೆ ಮಾಡಿರುವದಂತೂ ನಿಜ ಎಂದಿದ್ದಾರೆ.

ಇದನ್ನೂ ಓದಿ: ಬದಲಾವಣೆ ದೃಷ್ಟಿಯಿಂದ ಹೊಸಬರಿಗೆ ಕೆಲವು ಮಹತ್ವದ ಖಾತೆ -ಬೊಮ್ಮಾಯಿ ಸ್ಪಷ್ಟನೆ

Source: newsfirstlive.com Source link