ಪಾಕ್​​ನಲ್ಲಿ ದೇವಸ್ಥಾನ ಧ್ವಂಸ ಪ್ರಕರಣ; 150 ಜನರ ವಿರುದ್ಧ ಕೇಸ್​​​, 20 ಮಂದಿ ಅರೆಸ್ಟ್​

ಪಾಕ್​​ನಲ್ಲಿ ದೇವಸ್ಥಾನ ಧ್ವಂಸ ಪ್ರಕರಣ; 150 ಜನರ ವಿರುದ್ಧ ಕೇಸ್​​​, 20 ಮಂದಿ ಅರೆಸ್ಟ್​

ಪಾಕಿಸ್ತಾನದಲ್ಲಿ ಹಿಂದು ದೇವಸ್ಥಾನದ ಮೇಲೆ ದಾಳಿ ಮಾಡಿ ದೇವರ ಪ್ರತಿಮೆಗಳನ್ನು ಧ್ವಂಸಗೊಳಿಸಿದ ಪ್ರಕರಣವೀಗ ತಿರುವು ಪಡೆದುಕೊಳ್ಳುತ್ತಿದೆ. ಪಾಕ್​​ ಸುಪ್ರೀಂಕೋರ್ಟ್​ ಆದೇಶದ ಮೇರೆಗೆ ಸ್ಥಳೀಯ ಪೊಲೀಸರು ಪ್ರಕರಣ ಸಂಬಂಧ 150 ಮಂದಿ ವಿರುದ್ಧ ಮೊಕದ್ದಮೆ ದಾಖಲಿಸಿದ್ದಾರೆ. ಅಲ್ಲದೇ 20 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.

ಕಿಡಿಗೇಡಿಗಳ ಗುಂಪೊಂದು ಪಾಕ್​​​ ಪಂಜಾಬ್ ಪ್ರಾಂತ್ಯದ ರಹಿಮ್ಯಾರ್ ಖಾನ್ ಜಿಲ್ಲೆಯ ಬೋಂಗ್ ಪ್ರದೇಶದಲ್ಲಿ ಹಿಂದು ದೇವಸ್ಥಾನದ ಮೇಲೆ ದಾಳಿ ನಡೆಸಿದ್ದರು. ಹಿಂದು ದೇವಸ್ಥಾನದ ಮೇಲೆ ದಾಳಿ ನಡೆಸಿದ ಕಿಡಿಗೇಡಿಗಳು ದೊಣ್ಣೆ, ಲಾಠಿಗಳು ಹಾಗೂ ಕಲ್ಲುಗಳಿಂದ ದೇವರ ಪ್ರತಿಮೆಗಳನ್ನು ಧ್ವಂಸ ಮಾಡಿದ್ದಾರೆ.

ಪವಿತ್ರ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡಿದ ಆರೋಪ ಪ್ರಕರಣ ಒಂದಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಕೋರ್ಟ್​ ಹಿಂದೂ ಕುಟುಂಬದ ಅಪ್ರಾಪ್ತ ಬಾಲಕನಿಗೆ ಜಾಮೀನು ನೀಡಿತ್ತು. ಇದರಿಂದ ಆಕ್ರೋಶಗೊಂಡ ಅಲ್ಲಿನ ಬಹುಸಂಖ್ಯಾತರ ಗುಂಪು, ಭೋಂಗ್​​ ಟೌನ್​​ನಲ್ಲಿರುವ ಗಣೇಶ ದೇವಾಲಯದ ಮೇಲೆ ದಾಳಿ ಮಾಡಿ ಧ್ವಂಸ ಮಾಡಿತ್ತು. ಮಾತ್ರವಲ್ಲ ಚೀನಾ-ಪಾಕಿಸ್ತಾನ ಎಕಾನಿಮಿಕ್ ಕಾರಿಡಾರ್​ನ ಪ್ರಮುಖ ಎಂ-5 (Sukkur-Multan Motorway) ರಸ್ತೆಯನ್ನ ತಡೆದು ಪ್ರತಿಭಟನೆ ನಡೆಸಿರುವ ವರದಿಯಾಗಿತ್ತು.

ಇದನ್ನೂ ಓದಿ: ಪಾಕಿಸ್ತಾನದಲ್ಲಿ ಸಿದ್ಧಿ ವಿನಾಯಕ ಮಂದಿರ ಧ್ವಂಸ ಮಾಡಿದ ಉದ್ರಿಕ್ತ ಗುಂಪು

ಬಳಿಕ ದುಷ್ಕರ್ಮಿಗಳ ಈ ಕೃತ್ಯವನ್ನು ಖಂಡಿಸಿದ್ದ ಸುಪ್ರೀಂಕೋರ್ಟ್​ ನ್ಯಾಯಮೂರ್ತಿ ಗುಲ್ಜರ್ ಅಹಮದ್ ಅವರು, ತಪ್ಪಿತಸ್ಥರನ್ನು ಬಂಧಿಸುವಂತೆ ಆದೇಶ ಹೊರಡಿಸಿದ್ದರು. ಅಲ್ಲದೇ ದೇವಸ್ಥಾನಕ್ಕೆ ರಕ್ಷಣೆ ನೀಡುವಲ್ಲಿ ವಿಫಲರಾದ ಪೊಲೀಸರಿಗೆ ಚಾಟೀ ಬೀಸಿತ್ತು. ಈ ಕೃತ್ಯವೂ ಅಂತರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನಕ್ಕೆ ಅಗೌರವ ತರಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿತ್ತು.

Source: newsfirstlive.com Source link