ಗೃಹಖಾತೆ ಸಿಕ್ಕ ಬೆನ್ನಲ್ಲೇ ಅವಧೂತ ವಿನಯ್ ಗುರೂಜಿ ಆಶೀರ್ವಾದ ಪಡೆದ ಆರಗ ಜ್ಞಾನೇಂದ್ರ

ಗೃಹಖಾತೆ ಸಿಕ್ಕ ಬೆನ್ನಲ್ಲೇ ಅವಧೂತ ವಿನಯ್ ಗುರೂಜಿ ಆಶೀರ್ವಾದ ಪಡೆದ ಆರಗ ಜ್ಞಾನೇಂದ್ರ

ಚಿಕ್ಕಮಗಳೂರು: ಬಸವರಾಜ ಬೊಮ್ಮಾಯಿಯವರ ನೂತನ ಸಂಪುಟದಲ್ಲಿ ರಾಜ್ಯದ ಗೃಹ ಮಂತ್ರಿಯಾಗಿ ಹೆಸರು ಘೋಷಣೆಯಾದ ಬೆನ್ನಲ್ಲೇ ಸಚಿವ ಆರಗ ಜ್ಞಾನೇಂದ್ರ, ಅವಧೂತ ವಿನಯ್​ ಗೂರೂಜಿ ಅವರ ಆಶ್ರಮಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ದಾರೆ.

blank

 

ಜಿಲ್ಲೆಯಲ್ಲಿ ಮಳೆ ಹಾನಿ ಪ್ರದೇಶಗಳ ವೀಕ್ಷಣೆ ಕೈಗೊಂಡಿದ್ದ ಅವರು ಗೃಹ ಮಂತ್ರಿಯಾಗಿ ಅವರ ಹೆಸರು ಅಂತಿಮವಾಗುತ್ತಿದ್ದಂತೆ ಕೊಪ್ಪ ತಾಲೂಕಿನ ಗೌರಿಗದ್ದೆ ಆಶ್ರಮಕ್ಕೆ ಭೇಟಿ ನೀಡಿದ್ದು ಈ ವೇಳೆಯಲ್ಲಿ ದೇವರಿಗೆ ಆರತಿ ಮಾಡಿದ ಕೆಲ ಕ್ಷಣಗಳಲ್ಲೇ ದೇವರ ಮೇಲಿನ ಹೂವೊಂದು ಬಿದ್ದಿದ್ದು, ಅದನ್ನು ಗೂರೂಜಿ ಸಚಿವರ ಕೊರಳಿಗೆ ಹಾಕಿ ಆಶೀರ್ವದಿಸಿದ್ದಾರೆ. ಬಳಿಕ ಕೆಲ ಹೊತ್ತು ಗೂರೂಜಿಗಳ ಜೊತೆ ಮಾತುಕತೆ ನಡೆಸಿದ ಸಚಿವರಿಗೆ ಮಾಜಿ ಸಚಿವ ಜೀವರಾಜ್​ ಸಾಥ್​ ನೀಡಿದ್ದಾರೆ.

ಇದನ್ನೂ ಓದಿ: ಖಾತೆ ನಿಭಾಯಿಸುವ ವ್ಯಕ್ತಿಯ ಮೇಲೆ ನಿರ್ಧಾರವಾಗುತ್ತೆ -ಆರಗ ಜ್ಞಾನೇಂದ್ರ

Source: newsfirstlive.com Source link