ರಾಹುಲ್ ಗಾಂಧಿ ಟ್ವಿಟರ್ ಅಕೌಂಟ್ ಸಸ್ಪೆಂಡ್ ಆಗಿದ್ದೇಕೆ..?

ರಾಹುಲ್ ಗಾಂಧಿ ಟ್ವಿಟರ್ ಅಕೌಂಟ್ ಸಸ್ಪೆಂಡ್ ಆಗಿದ್ದೇಕೆ..?

ನವದೆಹಲಿ: ಮೈಕ್ರೋ ಬ್ಲಾಗಿಂಗ್ ವೆಬ್​ಸೈಟ್ ಟ್ವಿಟರ್ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಟ್ವಿಟರ್ ಖಾತೆಯನ್ನ ಸಸ್ಪೆಂಡ್ ಮಾಡುವ ಮೂಲಕ ಶಾಕ್ ಕೊಟ್ಟಿದೆ. ಹೀಗೆ ಇದ್ದಕ್ಕಿದ್ದಂತೆ ರಾಹುಲ್ ಗಾಂಧಿ ಖಾತೆಯನ್ನ ಸಸ್ಪೆಂಡ್ ಮಾಡೋದರ ಹಿಂದೆ ಒಂದು ಗಂಭೀರ ಕಾರಣವೂ ಇದೆ.

ಇದನ್ನೂ ಓದಿ: BIG BREAKING; ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವಿಟರ್ ಅಕೌಂಟ್ ಸಸ್ಪೆಂಡ್

ಇತ್ತೀಚೆಗೆ ದೆಹಲಿಯಲ್ಲಿ 9 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಬಲವಂತವಾಗಿ ಕೊಲೆ ಮಾಡಿದ ಪ್ರಕರಣವೊಂದು ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅತ್ಯಾಚಾರ ಸಂತ್ರಸ್ತೆಯ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದರು.
ಅಲ್ಲದೇ ಸೋಷಿಯಲ್ ಮೀಡಿಯಾ ಟ್ವಿಟರ್​ನಲ್ಲಿ ಅತ್ಯಾಚಾರ ಸಂತ್ರಸ್ತೆಯ ಪೋಷಕರಿಗೆ ಸಾಂತ್ವನ ಹೇಳುತ್ತಿರುವ ಫೋಟೋಗಳನ್ನ ಸಹ ಶೇರ್ ಮಾಡಿಕೊಂಡಿದ್ದರು. ಈ ಹೆಣ್ಣುಮಗಳ ಸಾವಿಗೆ ನ್ಯಾಯ ಬೇಕು.. ನ್ಯಾಯ ಸಿಗುವವರೆಗೂ ಇವರೊಂದಿಗೆ ನಿಲ್ಲುತ್ತೇನೆ ಎಂದಿದ್ದರು.

ಇದನ್ನೂ ಓದಿ: ಬಾಲಕಿ ಮೇಲೆ ಅತ್ಯಾಚಾರ; ಸಂತ್ರಸ್ತೆ ಮನೆಗೆ ಭೇಟಿ ನೀಡಿದ್ದ ರಾಹುಲ್​​ ಗಾಂಧಿ ಹೇಳಿದ್ದೇನು?

ರಾಹುಲ್ ಗಾಂಧಿ ಸಂತ್ರಸ್ತೆಯ ಫೋಟೋ ಹಂಚಿಕೊಂಡ ಬೆನ್ನಲ್ಲೇ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಟ್ವಿಟರ್​​ಗೆ ನೋಟಿಸ್ ನೀಡುವ ಮೂಲಕ ರಾಹುಲ್ ಗಾಂಧಿ ಸಂತ್ರಸ್ತೆಯ ಪೋಷಕರ ಐಡೆಂಟಿಟಿಯನ್ನು ರಿವೀಲ್ ಮಾಡಿದ್ದಾರೆ ಎಂದು ಹೇಳಿತ್ತು. ಅಲ್ಲದೇ ಖಾತೆಯನ್ನ ಹ್ಯಾಂಡಲ್​ ಮಾಡುತ್ತಿರುವವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿತ್ತು. ಈ ಬೆನ್ನಲ್ಲೇ ರಾಹುಲ್ ಗಾಂಧಿ ಟ್ವಿಟರ್ ಖಾತೆಯಿಂದ ತಾವು ಟ್ವೀಟ್ ಮಾಡಿದ್ದ ಸಂತ್ರಸ್ತೆಯ ಫೋಟೋವನ್ನ ಡಿಲೀಟ್ ಮಾಡಿದ್ದರು.

ಇನ್ನು ರಾಹುಲ್ ಗಾಂಧಿ ಟ್ವೀಟ್ ಬೆನ್ನಲ್ಲೇ ದೆಹಲಿ ಪೊಲೀಸರು ಪೋಕ್ಸೋ ಕಾಯ್ದೆಯಡಿ ರಾಹುಲ್ ಗಾಂಧಿ ವಿರುದ್ಧ ಕೇಸ್ ಕೂಡ ದಾಖಲಾಗಿತ್ತು. ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಇದೀಗ ರಾಹುಲ್ ಗಾಂಧಿಯವರ ಟ್ವಿಟರ್ ಖಾತೆಯನ್ನ ಟ್ವಿಟರ್ ಸಸ್ಪೆಂಡ್ ಮಾಡಿದೆ. ಮಕ್ಕಳ ಹಕ್ಕು ರಕ್ಷಣಾ ಆಯೋಗ ಕಳುಹಿಸಿದ್ದ ನೋಟಿಸ್ ಆಧಾರದ ಮೇಲೆ ಇದೀಗ ರಾಹುಲ್ ಗಾಂಧಿ ಅಕೌಂಟ್ ಸಸ್ಪೆಂಡ್ ಆಗಿರುವ ಸಾಧ್ಯತೆ ಇದೆ. ನಿಖರ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

Source: newsfirstlive.com Source link