ನಮ್ಮ ನಡುವೆಯೇ ಇದ್ದು ಬಾಂಬ್ ಹಾಕುವ ಕಾಲ ಮುಗಿದಿದೆ.. ಇದು ಮೋದಿಯವರ ಜಮಾನ -ಆರಗ ಜ್ಞಾನೇಂದ್ರ

ನಮ್ಮ ನಡುವೆಯೇ ಇದ್ದು ಬಾಂಬ್ ಹಾಕುವ ಕಾಲ ಮುಗಿದಿದೆ.. ಇದು ಮೋದಿಯವರ ಜಮಾನ -ಆರಗ ಜ್ಞಾನೇಂದ್ರ

ಚಿಕ್ಮಮಗಳೂರು: ಎಲ್ಲಿಂದಲೋ ಬಂದು ನಮ್ಮ ನಡುವೆಯೇ ಇದ್ದು ಬಾಂಬ್ ಹಾಕುವ ಕಾಲ ಮುಗಿದಿದೆ. ಇದು ನರೇಂದ್ರ ಮೋದಿಯವರ ಜಮಾನ, ಯಾರನ್ನೂ ಸರ್ಕಾರ ಬಿಡುವುದಿಲ್ಲ ಅಂತ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ.

ಚಿಕ್ಕಮಗಳೂರಿನಲ್ಲಿ ಭಟ್ಕಳ ಪ್ರಕರಣ ಸರ್ಕಾರಕ್ಕೆ ಗೊತ್ತಾಗಿದೆ. ಪೊಲೀಸರು ಪ್ರಕರಣವನ್ನ ಅಂತಿಮಕ್ಕೆ ತೆಗೆದುಕೊಂಡು ಹೋಗಿ ಮುಟ್ಟಿಸುತ್ತಾರೆ. ಸ್ಯಾಟಲೈಟ್ ಕಾಲ್ ಎಲ್ಲಿಂದ ಬಂದರೂ ಎನ್​ಐಎ ಬಂದು ಪ್ರಕರಣವನ್ನ ಭೇದಿಸುತ್ತಾರೆ. ಮೊದಲು ಈ ರೀತಿ ಆಗುತ್ತಿರಲಿಲ್ಲ, ಈಗ ಎಲ್ಲಾ ಬದಲಾಗಿದೆ. ಎಲ್ಲಾ ತಂತ್ರ ಮುಗಿಸುವಂತಾ ಕಾರ್ಯ ಆಗುತ್ತೆ. ಪೊಲೀಸರನ್ನ ಇನ್ನಷ್ಟು ಅಲರ್ಟ್ ಮಾಡ್ತೇವೆ, ಯಾವುದೇ ವಿದ್ವಂಸಕ ಕೃತ್ಯ ನಡೆಯಲು ಬಿಡುವುದಿಲ್ಲ ಅಂತ ಹೇಳಿದ್ದಾರೆ. ಅಲ್ಲದೇ, ಎಲ್ಲರಿಗೂ ಆಪೇಕ್ಷೆಯಂತೆ ಖಾತೆ ಹಂಚಲು ಸಾಧ್ಯವಿಲ್ಲ. ಇದರ ಬಗ್ಗೆ ಸಿಎಂ ಗಮನಕೊಟ್ಟು ಸಮಸ್ಯೆ ಬಗೆಹರಿಸುತ್ತಾರೆ ಅಂತ ಹೇಳಿದ್ದಾರೆ.

Source: newsfirstlive.com Source link