ಬಿಗ್‍ಬಾಸ್ ಟಾಪ್ 5 ಕಂಟೆಸ್ಟೆಂಟ್ ಸಂಬರ್ಗಿ ಔಟ್

ಬಿಗ್‍ಬಾಸ್ ಫಿನಾಲೆಯಲ್ಲಿ ಟಾಪ್ 5 ಕಂಟೆಸ್ಟೆಂಟ್ ಆಗಿರುವ ಪ್ರಶಾಂತ್ ಸಂಬರ್ಗಿ ಔಟ್ ಆಗಿದ್ದಾರೆ. ಈ ಮೂಲಕವಾಗಿ ಮನೆಯಲ್ಲಿ ನಾಲ್ವರ ಮಧ್ಯೆ ವೀನ್ನರ್ ಪಟ್ಟಕ್ಕೆ ಸ್ಪರ್ಧೆ ಉಂಟಾಗಿದೆ.

ಬಿಗ್‍ಬಾಸ್ ಮನೆಯಲ್ಲಿ ಮನರಂಜನೆ, ಗೇಮ್, ಮಾತುಗಾರಿ, ವಾದ, ವಿವಾದಗಳಿಂದ ಹೆಚ್ಚು ಸುದ್ದಿಯಾಗುತ್ತಿದ್ದ ಪ್ರಶಾಂತ್ ಅವರು ಟಾಪ್ 5 ಕಂಟೆಸ್ಟೆಂಟ್‍ಗಳಲ್ಲಿ ಒಬ್ಬರಾಗಿದ್ದರು. ಇದೀಗ ಅವರು ಮನೆಯಿಂದ ಆಚೆ ಬಂದಿದ್ದಾರೆ. ಐದನೇ ಸ್ಥಾನವನ್ನು ಪಡೆದು ಆಚೆ ಬಂದಿರುವ ಸಂಬರಗಿ ಅವರಿಗೆ 2.5 ಲಕ್ಷ ರೂಪಾಯಿ ಬಹುಮಾನವನ್ನು ತಮ್ಮದಾಗಿಸಿಕೊಂಡಿದ್ದಾರೆ. 6,69,020 ವೋಟ್ ಪಡೆದು ಮನೆಯಿಂದ ಆಚೆ ಬಂದಿದ್ದಾರೆ.

ಪ್ರಶಾಂತ್ ಅವರು ತಮ್ಮದೇ ಆಗಿರುವ ವಿತ್ತಂಡ ವಾದಗಳ ಮೂಲಕವಾಗಿ ಕೆಲವೊಮ್ಮಗೆ ಸ್ಪರ್ಧಿಗಳ ಕೆಂಗಣ್ಣಿಗೆ ಗುರಿಯಾಗುತ್ತಿದ್ದರು. ಸಂಬರಗಿ ಇದ್ದರೆ ಎಂದರೆ ಅಲ್ಲಿ ಮುನಿಸು, ಜಗಳ, ಮಾತು ಇದ್ದೇ ಇರುತ್ತದೆ ಎನ್ನುವಷ್ಟರ ಮಟ್ಟಿಗೆ ಬಿಗ್‍ಬಾಸ್ ಮನೆಯಲ್ಲಿ ಗುರುತಿಸಿಕೊಂಡಿದ್ದರು. ಆದರೆ ಎಲ್ಲೋ ಒಂದು ಕಡೆ ಬಿಗ್‍ಬಾಸ್ ಮನೆಯಲ್ಲಿ ಅವರು ಹೇಳುತ್ತೀರುವ ಮಾತುಗಳು ವೀಕ್ಷಕರಿಗೆ ಇಷ್ಟವಾಗುತ್ತಿದ್ದವು. ಹೀಗಾಗಿ ಇವರು ಟಾಪ್ 5 ಸ್ಪರ್ಧಿಗಳಲ್ಲಿ ಒಬ್ಬರಾಗಿ ಉಳಿಯಲು ಸಾಧ್ಯವಾಯಿತ್ತು ಎಂದು ಹೇಳಿದರೆ ತಪ್ಪಾಗಲಾರದು. ಆದರೆ ಇದೀಗ ಸ್ವಲ್ಪದರಲ್ಲಿಯೆ ಬಿಗ್‍ಬಾಸ್ ಪಟ್ಟವನ್ನು ಮಿಸ್ ಮಾಡಿಕೊಂಡಿದ್ದಾರೆ.

Source: publictv.in Source link