ರೈತರ ಮಕ್ಕಳ ವಾರ್ಷಿಕ ವಿದ್ಯಾರ್ಥಿವೇತನ ಪ್ರಕಟ

ಬೆಂಗಳೂರು: ರೈತರ ಮಕ್ಕಳ ಉನ್ನತ ಶಿಕ್ಷಣಕ್ಕೆ ರಾಜ್ಯ ಸರ್ಕಾರ ವಾರ್ಷಿಕ ಶಿಷ್ಯವೇತನ ಪ್ರಕಟಿಸಿದೆ. ಕೋರ್ಸ್‍ಗಳಿಗೆ ಅನುಸಾರವಾಗಿ ಶಿಷ್ಯವೇತನದ ಹಣವನ್ನು ನಿಗದಿಪಡಿಸಲಾಗಿದೆ.

ಪಿಯುಸಿ, ಐಟಿಐ, ಡಿಪ್ಲೋಮಾ ಕೋರ್ಸ್‍ಗಳ ವಿದ್ಯಾರ್ಥಿಗಳಿಗೆ 2,500, ವಿದ್ಯಾರ್ಥಿನಿಯರಿಗೆ 3,000 ರೂಪಾಯಿ ಸ್ಕಾಲರ್‍ಶಿಪ್ ಸಿಗಲಿದೆ. ಬಿಎ, ಬಿಎಸ್ಸಿ, ಬಿಕಾಂ ಕೋರ್ಸ್‍ಗಳ ವಿದ್ಯಾರ್ಥಿಗಳಿಗೆ 5,000, ವಿದ್ಯಾರ್ಥಿನಿಯರಿಗೆ 5,500 ರೂಪಾಯಿ ಶಿಷ್ಯವೇತನ ಸಿಗಲಿದೆ.

ಎಲ್‍ಎಲ್‍ಬಿ, ಪ್ಯಾರಾ ಮೆಡಿಕಲ್, ನರ್ಸಿಂಗ್, ಬಿ ಫಾರ್ಮಾ ಕೋರ್ಸುಗಳ ವಿದ್ಯಾರ್ಥಿಗಳಿಗೆ 7,500, ವಿದ್ಯಾರ್ಥಿನಿಯರಿಗೆ 8,000 ರೂಪಾಯಿ ಸ್ಕಾಲರ್‍ಶಿಪ್ ಸಿಗಲಿದೆ. ಎಂಬಿಬಿಎಸ್, ಬಿಟೆಕ್, ಬಿಇ ಮತ್ತು ಎಲ್ಲ ಪಿಜಿ ಕೋರ್ಸ್‍ಗಳನ್ನು ಮಾಡುವ ವಿದ್ಯಾರ್ಥಿಗಳಿಗೆ ವಾರ್ಷಿಕ 10,000, ವಿದ್ಯಾರ್ಥಿನಿಯರಿಗೆ 11,000 ರೂಪಾಯಿ ಸಿಗಲಿದೆ ಎಂದು ಸರ್ಕಾರ ತಿಳಿಸಿದೆ.

Source: publictv.in Source link