ಪಿಯುಸಿ ಫೇಲಾದವ ಐಸಿಸ್ ಸೇರಿ ಉಗ್ರನಾದ ಮಾದೇಶ್ ಪೆರುಮಾಳ್

ಪಿಯುಸಿ ಫೇಲಾದವ ಐಸಿಸ್ ಸೇರಿ ಉಗ್ರನಾದ ಮಾದೇಶ್ ಪೆರುಮಾಳ್

ಬೆಂಗಳೂರು: ಉಗ್ರ ಸಂಘಟನೆಗೆ ಸೇರಿ ಭಾರತದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಜ್ಜಾಗುತ್ತಿದ್ದ ಶಂಕಿತ ಉಗ್ರನನ್ನ ಎನ್​ಐಎ ಅಧಿಕಾರಿಗಳು ಬಂಧಿಸಿದ್ದಾರೆ. ಪಿಯುಸಿ ಫೇಲ್ ಆಗಿ, ಉಗ್ರ ಸಂಘಟನೆಯಲ್ಲಿ ತೊಡಗಿಕೊಂಡಿದ್ದವನ ಕಥೆ ಇದು. ಮಾದೇಶ್ ಪೆರುಮಾಳ್(26) ಬಂಧಿತ ಉಗ್ರ. ಮೂಲತಹ ವೈಟ್​ಫೀಲ್ಡ್​ ನಿವಾಸಿಯಾಗಿದ್ದು, ಐಎಸ್​ಕೆಪಿ ಸೇರಲು ಸಾಮಾಜಿಕ ಜಾಲತಾಣ ಬಳಕೆ ಮಾಡಿಕೊಂಡಿದ್ದ ಎಂದು ತಿಳಿದುಬಂದಿದೆ. ಪ್ರಾಥಮಿಕ ತನಿಖೆಗಳ ಪ್ರಕಾರ ಮಾದೇಶ್ ಪೆರುಮಾಳ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಆ್ಯಕ್ಟಿವ್ ಆಗಿದ್ದ. ಟೆಲಿಗ್ರಾಂ, ಸಿಗ್ನಲ್, ಯ್ಯೂಟ್ಯೂಬ್ ಆ್ಯಪ್‌ ಬಳಕೆಯಲ್ಲಿ ಆ್ಯಕ್ಟೀವ್ ಆಗಿದ್ದ. ಈ ಆ್ಯಪ್​ಗಳ ಸಹಾಯದಿಂದಲೇ ಐಸಿಸ್ ಉಗ್ರರ ಕಾಂಟ್ಯಾಕ್ಟ್​ಗೆ ಮುಂದಾಗಿ ಉಗ್ರ ಸಂಘದ ಸದಸ್ಯರಿಗೆ ಮೆಸೇಜ್ ಮಾಡಿದ್ದ ಎನ್ನಲಾಗಿದೆ.

ಐಸಿಸ್​ ಸೇರಲು ದುಂಬಾಲು

ಆಫ್ಘಾನ್ ಮೂಲದ ‘ಇಸ್ಲಾಮಿಕ್ ಸ್ಟೇಟ್ ಕೊರಸನ್ ಪ್ರಿವಟ್’ ಸಂಘಟನೆ ಸೇರಲು ಮುಂದಾಗಿದ್ದ. ಈ ಸಂಘಟನೆಯ ಸಿದ್ಧಾಂತವನ್ನ ತಿಳಿದು ಅರ್ಥೈಸಿಕೊಂಡು ನೇರವಾಗಿ ಸದಸ್ಯರಿಗೆ ನಿಮ್ಮ ಸಿದ್ಧಾಂತ ನನಗೆ ಇಷ್ಟವಾಗಿದೆ. ಹೀಗಾಗಿ ನಿಮ್ಮಲ್ಲಿ ನನ್ನನ್ನ ಸದಸ್ಯನಾಗಿ ಸೇರಿಸಿಕೊಳ್ಳಿ ಎಂದು ಬೇಡಿಕೊಂಡಿದ್ದ ಅಂತಾ ಹೇಳಲಾಗಿದೆ.

ಆದರೆ ಹಿಂದೂ ಆಗಿ ಯಾಕೆ ಒಲವು ತೋರುತ್ತಿದ್ದಾನೆ ಅಂತಾ ಸಂಘಟನೆಯ ಸದಸ್ಯರು ಅನುಮಾನ ವ್ಯಕ್ತಪಡಿಸಿದ್ದರು. ಇದರಿಂದ ಆತನನ್ನ ಸಂಘಟನೆ ಜೊತೆ ಅಥವಾ ಅಧ್ಯಕ್ಷರ ಭೇಟಿಗೆ ನಿರಾಕರಿಸಿದ್ದರು. ಇದಾದ ಬಳಿಕ ಈತನೇ ಮತ್ತೆ ಮೆಸೇಜ್ ಮಾಡಿ, ನಾನು ವಿಧ್ವಂಸಕ ಕೃತ್ಯ ಎಸಗಲು ಸಿದ್ಧನಿದ್ದೇನೆ. ಯಾವುದೇ ಕೆಲಸ ಕೊಟ್ಟರೂ ನಾನು ನಿಭಾಯಿಸುತ್ತೇನೆ. ಹೀಗಂತ ಸದಸ್ಯರೊಬ್ಬರಿಗೆ ರಿಕ್ಚೆಸ್ಟ್ ಮಾಡಿ ಮೆಸೇಜ್ ಮಾಡಿದ್ದ ಎನ್ನಲಾಗಿದೆ.

ಅಷ್ಟೇ ಅಲ್ಲದೇ ನಾನು ಇಂತದ್ದೊಂದು ಸಂಘಟನೆ ಸೇರಿ ಹಣ ಮಾಡುತ್ತೇನೆ. ನಾನು ಅಲ್ಲಿ ಸೇರಲು ದಯವಿಟ್ಟು ಹಣ ಕೊಡಿ ಎಂದು ತಂದೆ ಬಳಿಯೂ ಕೇಳಿದ್ದ. ತಂದೆ ಯಾವಾಗ ಹಣ ಕೊಡಲಿಲ್ಲವೋ, ಆಗ ಸದಸ್ಯರಿಗೆ ಮತ್ತೆ ಮೆಸೇಜ್‌ ಮಾಡಿದ್ದ. ಆಫ್ಘಾನಿಸ್ತಾನ, ಸಿರಿಯಾಗೆ ಬರಲು ನನಗೆ ಹಣ ಸಹಾಯ ಮಾಡಿ ಎಂದು ಕೇಳಿಕೊಂಡಿದ್ದ ಎನ್ನಲಾಗಿದೆ. ಇದಕ್ಕೆ ಹಣ ಸಹಾಯ ಮಾಡದ ಶಂಕಿತರು ನೀನಿದ್ದಲ್ಲಿಯೇ ಇರು. ನಿನಗೆ ಅಲ್ಲಿಯೇ ಟಾಸ್ಕ್ ಕೊಡುತ್ತೇವೆ ಎಂದು ಉಗ್ರರು ತಿಳಿಸಿದ್ದರು ಅನ್ನೋ ಮಾಹಿತಿಯನ್ನ ತನಿಖೆ ವೇಳೆ ಎನ್​ಐಎ ಕಲೆ ಹಾಕಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಶಂಕಿತ ಭಯೋತ್ಪಾದಕನನ್ನು ಇಂದು ನ್ಯಾಯಾಲಯಕ್ಕೆ ಹಾಜರು ಪಡಿಸಲಿರುವ ಎನ್​ಐಎ

Source: newsfirstlive.com Source link