ಚೀನಾ ಗಡಿಯಲ್ಲಿ ಭಾರತೀಯರ ಕೈ ಸೇರಿವೆ ಅತ್ಯಾಧುನಿಕ ರೈಫಲ್ಸ್.. ಚೀನಾಗೆ ಹೆಚ್ಚಿದ ಆತಂಕ

ಚೀನಾ ಗಡಿಯಲ್ಲಿ ಭಾರತೀಯರ ಕೈ ಸೇರಿವೆ ಅತ್ಯಾಧುನಿಕ ರೈಫಲ್ಸ್.. ಚೀನಾಗೆ ಹೆಚ್ಚಿದ ಆತಂಕ

ನವದೆಹಲಿ: ಚೀನಾ ಗಡಿಯಲ್ಲಿ ನಿಯೋಜನೆಗೊಂಡಿರುವ ಭಾರತೀಯ ಸೈನಿಕರಿಗೆ ಭಾರತ ಸರ್ಕಾರ ಅತ್ಯಾಧುನಿಕ ಅಮೆರಿಕನ್ ಸಿಗ್ ಸವೆರ್-716 ಹಾಗೂ ಸ್ವಿಸ್​ ಎಂಪಿ-9 ಪಿಸ್ತೂಲ್​ಗಳನ್ನ ಹಸ್ತಾಂತರಿಸಿದೆ.

ಅಮೆರಿಕನ್ ಸಿಗ್​ ಸವೆರ್- 716 ಅಸಾಲ್ಟ್ ರೈಫಲ್​ 500 ಮೀಟರ್ ರೇಂಜ್ ಹೊಂದಿದ್ದು ಪರ್ವತ ಪ್ರದೇಶಕ್ಕೆ ತಕ್ಕನಾದ ಆಯುಧವಾಗಿದೆ. ಚೀನಾ ಗಡಿಯಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ಘರ್ಷಣೆ ಏರ್ಪಟ್ಟ ಸಂದರ್ಭದಲ್ಲಿ ಭಾರತೀಯ ಸೇನೆ 1.5 ಲಕ್ಷ ರೈಫಲ್​ಗಳಿಗೆ ಆರ್ಡರ್ ಮಾಡಿತ್ತು. ಇದೀಗ 1.5 ಲಕ್ಷ ರೈಫಲ್​ಗಳ ಪೈಕಿ ಬಹುತೇಕ ಆಯುಧಗಳನ್ನ ಸೈನಿಕರಿಗೆ ನೀಡಲಾಗಿದೆ ಎಂಬ ಮಾಹಿತಿ ಇದೆ.

ಈ ಮಧ್ಯೆ ಇತ್ತೀಚೆಗೆ ನಡೆದ ಕಮಾಂಡರ್​ ಮಟ್ಟದ ಮಾತುಕತೆಯ ನಂತರ ಚೀನಾ ಗೊರ್ಗಾ ಹೈಟ್ಸ್ ಏರಿಯಾದಲ್ಲಿ ತನ್ನ ಟ್ರೂಪ್ಸ್​ಗಳನ್ನ ವಾಪಸ್ ಕರೆಸಿಕೊಂಡಿದೆ.

Source: newsfirstlive.com Source link