ವಾಕಿಂಗ್ ಮಾಡುವ ವೇಳೆ ತ್ರಿಪುರ ಸಿಎಂ ಮೇಲೆ ಕಾರ್ ಹರಿಸಲು ಯತ್ನ; ಜಂಪ್ ಮಾಡಿ ಬಚಾವ್

ವಾಕಿಂಗ್ ಮಾಡುವ ವೇಳೆ ತ್ರಿಪುರ ಸಿಎಂ ಮೇಲೆ ಕಾರ್ ಹರಿಸಲು ಯತ್ನ; ಜಂಪ್ ಮಾಡಿ ಬಚಾವ್

ತ್ರಿಪುರ: ತ್ರಿಪುರ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್ ಅವರ ಮೇಲೆ ಮೂವರು ಶಂಕಿತರು ಕಾರ್ ಹರಿಸಲು ಯತ್ನಿಸಿರುವ ಘಟನೆ ನಡೆದಿದೆ. ಮೊನ್ನೆ ತಾನೆ ಜಾರ್ಖಂಡ್​ ನ್ಯಾಯಾಧೀಶರೊಬ್ಬರಿಗೆ ಗಾಡಿ ಹಾಯಿಸಿ ಸಾವಿಗೆ ಕಾರಣವಾದ ಮಾದರಿಯಲ್ಲಿಯೇ ನಿನ್ನೆ ಸಂಜೆ ಬಿಪ್ಲವ್​ ಕುಮಾರ್​ ಮೇಳೆ ಕಾರು ಹತ್ತಿಸಲು ಯತ್ನಿಸಿದ ಘಟನೆ ನಡೆದಿದೆ.

ಬಿಪ್ಲಬ್ ಕುಮಾರ್ ದೇಬ್ ಅವರು ಸಂಜೆಯ ವಾಕಿಂಗ್ ಮಾಡುತ್ತಿದ್ದ ವೇಳೆ ಅವರ ಸೆಕ್ಯೂರಿಟಿಯನ್ನೂ ಉಲ್ಲಂಘಿಸಿ ಅವರ ಮೇಲೆ ಕಾರ್ ಹರಿಸಲು ಯತ್ನಿಸಿದ್ದಾರೆ. ಈ ವೇಳೆ ಬಿಪ್ಲಬ್ ಕುಮಾರ್ ದೇಬ್ ಪಕ್ಕಕ್ಕೆ ಜಿಗಿದು ಅಪಾಯದಿಂದ ಪಾರಾಗಿದ್ದಾರೆ. ಘಟನೆಯಲ್ಲಿ ಮುಖ್ಯಮಂತ್ರಿಯ ಭದ್ರತಾ ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿರುವ ಬಗ್ಗೆ ವರದಿಯಾಗಿದೆ. ಭದ್ರತಾ ಸಿಬ್ಬಂದಿ ಕಾರ್ ತಡೆಯಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ ಎನ್ನಲಾಗಿದೆ.

ಇದನ್ನೂ ಓದಿ: ‘ಆ. 15 ರಂದು ತ್ರಿವರ್ಣ ಧ್ವಜ ಹಾರಿಸಲು ಬಿಡಲ್ಲ’ ಯೋಗಿಗೆ ನಿಷೇಧಿತ ‘ಸಿಖ್ ಫಾರ್ ಜಸ್ಟೀಸ್’ ಬೆದರಿಕೆ

ಇನ್ನು ಕಾರ್ ಹರಿಸಲು ಯತ್ನಿಸಿದ ಮೂವರು ಆರೋಪಿಗಳನ್ನ ಬಂಧಿಸಿರುವ ಪೊಲೀಸರು ಅವರ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಿದ್ದಾರೆ. ಇನ್ನು ಆರೋಪಿಗಳು ಬಳಸಿದ್ದ ಕಾರ್​ನ್ನೂ ಸಹ ಸೀಜ್ ಮಾಡಲಾಗಿದೆ. ಆರೋಪಿಗಳನ್ನ ಕೋರ್ಟ್ ಮುಂದೆ ಹಾಜರುಪಡಿಸಲಾಗಿದ್ದು ಅವರನ್ನ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಆರೋಪಿಗಳೆಲ್ಲರೂ 20 ವರ್ಷ ವಯಸ್ಸಿನ ಆಸುಪಾಸಿನವರು ಎನ್ನಲಾಗಿದೆ.

Source: newsfirstlive.com Source link