‘ಏನೇ ತೊಂದ್ರೆ ಆದ್ರೂ ಆರ್ಮಿಯೇ ಸಹಾಯಕ್ಕೆ ಬೇಕು; ಈಗ ಚಿನ್ನದ ಪದಕ ತಂದಿದ್ದೂ ಆರ್ಮಿನೇ’

‘ಏನೇ ತೊಂದ್ರೆ ಆದ್ರೂ ಆರ್ಮಿಯೇ ಸಹಾಯಕ್ಕೆ ಬೇಕು; ಈಗ ಚಿನ್ನದ ಪದಕ ತಂದಿದ್ದೂ ಆರ್ಮಿನೇ’

ಟೋಕಿಯೋ ಒಲಂಪಿಕ್ಸ್​ನಲ್ಲಿ ಭಾರತಕ್ಕೆ ನೀರಜ್​ ಚೋಪ್ರಾ ಚಿನ್ನದ ಪದಕ ತಂದುಕೊಟ್ಟಿದ್ದಾರೆ. ಪುರುಷರ ಜಾವೆಲಿನ್​ ಥ್ರೋನಲ್ಲಿ ಭಾರತಕ್ಕೆ ಚಿನ್ನದ ಪದಕವನ್ನ ಗೆದ್ದು ತಂದಿದ್ದಾರೆ ಈ ಸೈನಿಕ. ಸೇನೆಯಲ್ಲಿದ್ದ ಇವ್ರು ಭಾರತಕ್ಕೆ ಹೆಮ್ಮ ಪಡುವಂಥ ಕೆಲಸ ಮಾಡ್ಲೇಬೇಕು ಅಂಥ ಹಠಕ್ಕೆ ಬಿದ್ದ ಈ ಯುವಕ ಇಡೀ, ದೇಶಕ್ಕೆ ಈಗ ‘ಚಿನ್ನದ’ ಹುಡುಗನಾಗಿದ್ದಾರೆ.

ನೀರಜ್​ ಚೋಪ್ರಾ ಭಾರತೀಯ ಸೇನೆಯ ಕಿರಿಯ ನಿಯೋಜಿತ ಅಧಿಕಾರಿಯಾಗಿರೋರು. ಇನ್ನೊಂದು ತುಂಬಾ ಗಮನಿಸಬೇಕಾದ ವಿಷಯ ಅಂದ್ರೆ, ನಾವು ಇಲ್ಲಿ ಕೂತು ನೆಮ್ಮದಿಯಿಂದ ಇದ್ದೀವಿ ಅಂದ್ರೆ ಅದಕ್ಕೆ ಕಾರಣ ಗಡಿಯಲ್ಲಿ ನಿಂತಿರೋ ಭಾರತದ ಸೇನೆ.. ಅಲ್ಲಿರೋ ಸೈನಿಕರು. ಅವ್ರ, ಕಣ್ಗಾವಲಿನಲ್ಲಿ ನಾವೆಲ್ಲರೂ ಬದುಕುತ್ತಿದ್ದೀವಿ. ಚಳಿ, ಗಾಳಿ, ಮಳೆ, ಬಿಸಿಲು, ಪ್ರಾಣ ಅನ್ನೋದನ್ನ ಲೆಕ್ಕಿಸದೇ ಅವ್ರು ಕೆಲಸವನ್ನ ಮಾಡ್ತಾರೆ. ಇದೇ ಮಾದರಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಜನರು ಭಾರತೀಯ ಆರ್ಮಿಯನ್ನ ಕೊಂಡಾಡಿದ್ದಾರೆ.

ಇಡೀ ದೇಶಕ್ಕೆ ಸೇನೇಯೇ ಮುಖ್ಯ!

ಭಾರತೀಯ ಆರ್ಮಿ ಯೋಧ ಸುಬೇದಾರ್ ನೀರಜ್ ಚೋಪ್ರಾ ಒಲಿಂಪಿಕ್​ನಲ್ಲಿ ಚಿನ್ನ ಗೆದ್ದ ಬೆನ್ನಲ್ಲೇ ಸೋಶಿಯಲ್​ ಮೀಡಿಯಾದಲ್ಲಿ ಹಲವು ರೀತಿಯ ಪೋಸ್ಟ್​​ಗಳು ಟ್ರೆಂಡ್​ಗಳಾಗ್ತಿವೆ. ಕೆಲವರು, ನಮಗೆ ಪ್ರವಾಹ ಬರಲಿ, ಕಾಳ್ಗಿಚ್ಚು ಹಬ್ಬಿಕೊಳ್ಳಲಿ, ಬಿಸಿಲಿನ ಬೇಗೆಯಲ್ಲಿ ಜನ ತತ್ತರಿಸುತ್ತಿದ್ದಾರೆ ಅಂದ್ರೆ, ನಾವು ಮೊದಲು ಹೇಳೋದು, ದಯವಿಟ್ಟು ನಮ್ಮನ್ನ ರಕ್ಷಿಸಿ ಅಂತ. ರಕ್ಷಿಸಿ ಅಂತ ಕೇಳಿದಾಗ ಅಲ್ಲಿ ಬರೋರು ಭಾರತೀಯ ಸೇನೆಯವರೇ. ನಾವು ನೆಮ್ಮದಿಯಿಂದ ಇದ್ದರೂ ಅವ್ರೇ ಕಾರಣ, ನಮಗೆ ತೊಂದರೆಯಾದ್ರೂ ನಮ್ಮನ್ನ ಕಾಪಾಡಲು ಬರೋರು ಇದೇ ಸೈನಿಕರೇ. ಇದೀಗ, ಭಾರತಕ್ಕೆ ಚಿನ್ನ ಗೆದ್ದು ಕೊಡಲೂ ಆರ್ಮಿಯೇ ಬರಬೇಕಾಯ್ತು ಅಂತ ಹೇಳ್ತಿದ್ದಾರೆ. ಜೊತೆಗೆ ದೇಶಕ್ಕೆ ಇಂಡಿಯನ್​ ಆರ್ಮಿ ಮತ್ತೊಂದು ಸಂತಸದ ಘಳಿಗೆ ಹೊತ್ತು ತಂದಿದೆ ಅಂತಲೂ ಹೇಳ್ತಿದ್ದಾರೆ.

 

Source: newsfirstlive.com Source link