ಚಿನ್ನಕ್ಕೆ ಮುತ್ತಿಟ್ಟ ನೀರಜ್​ಗೆ ಸಿಎಂ ಶುಭಾಶಯ -ಟಾಪ್​ 10 ಸುದ್ದಿಗಳ ಕ್ವಿಕ್​ ರೌಂಡಪ್

ಚಿನ್ನಕ್ಕೆ ಮುತ್ತಿಟ್ಟ ನೀರಜ್​ಗೆ ಸಿಎಂ ಶುಭಾಶಯ -ಟಾಪ್​ 10 ಸುದ್ದಿಗಳ ಕ್ವಿಕ್​ ರೌಂಡಪ್

ನೀರಜ್ ಚೋಪ್ರಾಗೆ ಸಿಎಂ ಬೊಮ್ಮಾಯಿ ಅಭಿನಂದನೆ
ಜಾವೆಲಿನ್ ಎಸೆತದಲ್ಲಿ ಭಾರತಕ್ಕೆ ಚಿನ್ನ ಪದಕ ಗೆದ್ದಿರುವ ನೀರಜ್ ಚೋಪ್ರಾಗೆ ಸಿಎಂ ಬಸವರಾಜ್ ಬೊಮ್ಮಾಯಿ ಅಭಿನಂದನೆ ತಿಳಿಸಿದ್ದಾರೆ. ಭಾರತದ ಕ್ರೀಡಾ ಜಗತ್ತಿನಲ್ಲಿ ಈ ದಿನವನ್ನ ಸುವರ್ಣಾಕ್ಷರಗಳಲ್ಲಿ ಬರೆಯುವಂತ ದಿನ. ಟೋಕಿಯೋ ಒಲಿಂಪಿಕ್ಸ್​ನಲ್ಲಿ ಭಾರತ ಮೊದಲ ಚಿನ್ನದ ಪದಕವನ್ನ ಪಡೆದಿದೆ. ಇದು ಭಾರತದ ಕ್ರೀಡಾಪಟುಗಳಿಗೆ ಬರುವಂತಹ ದಿನಗಳಲ್ಲಿ ದೊಡ್ಡ ಪ್ರೇರಣಾ ಶಕ್ತಿಯಾಗಲಿದೆ. ಈ ನಿಟ್ಟಿನಲ್ಲಿ ಕರ್ನಾಟಕದಲ್ಲಿ ಕ್ರೀಡಾ ಮೂಲಸೌಕರ್ಯಗಳನ್ನು ಹೆಚ್ಚಿಸಲು ಪ್ರಯತ್ನಿಸಲಾಗುವುದು ಅಂತಾ ಬೊಮ್ಮಾಯಿ ಹೇಳಿದ್ದಾರೆ.

ಶೆಟ್ಟರ್ ಭೇಟಿಯಾದ ರಮೇಶ್​ ಜಾರಕಿಹೊಳಿ
ಹುಬ್ಬಳ್ಳಿಯಲ್ಲಿ ಜಗದೀಶ್​ ಶೆಟ್ಟರ್​​ ಹಾಗೂ ರಮೇಶ್ ಜಾರಕಿಹೊಳಿ ಭೇಟಿಯಾಗಿರುವುದು ಕುತೂಹಲ ಮೂಡಿಸಿದೆ. ತಮ್ಮ ಬೆಂಬಲಿಗರಿಗೆ ಖಾತೆ ಕೈ ತಪ್ಪುತ್ತಿದ್ದಂತೆ ರಮೇಶ್ ಅಲರ್ಟ್ ಆಗಿದ್ದು, ಶೆಟ್ಟರ್ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ಇನ್ನು ಪ್ರಕಾಶ್ ಹುಕ್ಕೇರಿ ಕೂಡಾ ಭೇಟಿ ನೀಡಿ ರಮೇಶ್ ಜೊತೆ ಚರ್ಚೆ ನಡೆಸಿದ್ದಾರೆ. ಈ ಮೊದಲು ಬೆಂಗಳೂರಿನಲ್ಲಿ ಅತೃಪ್ತ ಶಾಸಕರ ಸಭೆ ನಡೆಸಿದ್ದ ಜಾರಕಿಹೊಳಿ ಸದ್ಯ ಶೆಟ್ಟರ್ ಜೊತೆ ಸುಮಾರು ಒಂದೂವರ ಗಂಟೆ ಮಾತುಕತೆ ನಡೆಸಿರುವುದು ರಾಜಕೀಯ ವಲಯದಲ್ಲಿ ಚರ್ಚೆ ಹುಟ್ಟುಹಾಕಿದೆ.

ಆ. 11, 12ರಂದು ಮೈಸೂರು ರಸ್ತೆ ಮೆಟ್ರೋ ಸೇವೆ ಸ್ಥಗಿತ
ವಿಜಯನಗರದಿಂದ ಮೈಸೂರು ರಸ್ತೆ ಮಾರ್ಗದ ಮೆಟ್ರೋ ಸೇವೆ ಎರಡು ದಿನಗಳ ಕಾಲ ಸ್ಥಗಿತವಾಗಲಿದೆ. ಮೈಸೂರು ರಸ್ತೆಯಿಂದ ಕೆಂಗೇರಿವರೆಗಿನ ನೂತನ ಮಾರ್ಗದಲ್ಲಿ ಕಾಮಗಾರಿ ನಡೆಯುತ್ತಿರುವ ಕಾರಣ ಆಗಸ್ಟ್ 11 ಮತ್ತು 12ರಂದು ಮೆಟ್ರೋ ಸೇವೆಯನ್ನು ಸ್ಥಗಿತಗೊಳಿಸುವುದಾಗಿ BMRCL ಮಾಹಿತಿ ನೀಡಿದೆ. ಈ ಹಿನ್ನೆಲೆ ಪ್ರಯಾಣಿಕರು ಸಂಚಾರಕ್ಕಾಗಿ ಬೇರೆ ವ್ಯವಸ್ಥೆ ಮಾಡಿಕೊಳ್ಳುವಂತೆ BMRCL ಮನವಿ ಮಾಡಿದೆ.

ನಾಳೆ ಮಧ್ಯಾಹ್ನ 3.30ಕ್ಕೆ ಎಸ್​ಎಸ್​ಎಲ್​ಸಿ ಫಲಿತಾಂಶ
ನಾಳೆ ಮಧ್ಯಾಹ್ನ 3.30ಕ್ಕೆ ಎಸ್​​ಎಸ್​​ಎಲ್​​ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಲಿದ್ದು, ವಿದ್ಯಾರ್ಥಿಗಳ ಮೊಬೈಲ್​​ಗೆ ಫಲಿತಾಂಶ ಬರಲಿದೆ ಎಂದು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ತಿಳಿಸಿದೆ. ಇನ್ನು ನೂತನ ಶಿಕ್ಷಣ ಸಚಿವ ಬಿ.ಸಿ. ನಾಗೇಶ್​​ ನೇತೃತ್ವದಲ್ಲಿ ಫಲಿತಾಂಶ ಪ್ರಕಟವಾಗಲಿದ್ದು, ಸಚಿವರಿಗೆ ಇಲಾಖೆಯ ನಿರ್ದೇಶಕರು, ಕಾರ್ಯದರ್ಶಿಗಳು ಸಾಥ್ ನೀಡಲಿದ್ದಾರೆ. ಶಿಕ್ಷಣ ಇಲಾಖೆ ಜುಲೈ 19 ಹಾಗೂ 22ರಂದು ರಾಜ್ಯಾದ್ಯಂತ SSLC ಪರೀಕ್ಷೆ ನಡೆಸಿತ್ತು.

ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೆಚ್ಚಿದ ಭಕ್ತರ ದಂಡು
ಶ್ರೀಮಂತ ದೇಗುಲ ಎಂದು ಹೆಸರಾಗಿರುವ ತಿರುಪತಿ ವೆಂಕಟೇಶ್ವರನ ವಿಶೇಷ ದರ್ಶನಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸುತ್ತಿದ್ದು, ಆನ್‌ಲೈನ್‌ ಮೂಲಕ ಪ್ರತಿ ದಿನ ವಿತರಿಸುವ ಆಗಸ್ಟ್‌ ತಿಂಗಳ ಟಿಕೆಟ್‌ಗಳ ಸಂಖ್ಯೆಯನ್ನು 5,000 ದಿಂದ 8,000ಕ್ಕೆ ಹೆಚ್ಚಿಸಲಾಗಿದೆ. ಕೋವಿಡ್‌–19 ಸೋಂಕಿನ ತೀವ್ರತೆಯನ್ನು ಆಧರಿಸಿ ಟಿಕೆಟ್‌ಗಳ ಸಂಖ್ಯೆಯನ್ನು ಪರಿಷ್ಕರಿಸಲಾಗುವುದ್ದು, ತಿರುಪತಿಗೆ ಬರುವ ಭಕ್ತರರು ಕಡ್ಡಾಯವಾಗಿ ಕೋವಿಡ್‌ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ಟಿಟಿಡಿ ಸಿಇಒ ಡಾ. ಜವಾಹರ್‌ ರೆಡ್ಡಿ ಮನವಿ ಮಾಡಿದ್ದಾರೆ

ವಿದ್ಯುತ್​ ತಿದ್ದುಪಡಿ ಕಾಯ್ದೆಗೆ ದೀದಿ ವಿರೋಧ
ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ ವಿದ್ಯುತ್​ ತಿದ್ದುಪಡಿ ಕಾಯ್ದೆಗೆ ಪಶ್ವಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿರುವ ದೀದಿ, ಮೋದಿ ಸರ್ಕಾರ ಜನಪರವಾಗಿ ಕೆಲಸ ಮಾಡುತ್ತಿಲ್ಲ. ಬದಲಾಗಿ ಜನ ವಿರೋಧಿ ಕೆಲಸಗಳನ್ನ ಮಾಡುತ್ತಿದೆ ಅಂತ ಹರಿಹಾಯ್ದಿದ್ದಾರೆ. ಜೊತೆಗೆ ವಿದ್ಯುತ್​ ಘಟಕಗಳನ್ನ ಖಾಸಗೀಕರಣಗೊಳಿಸುವುದರಿಂದ ಜನರಿಗೆ ಹಾಗೂ ವಿದ್ಯುತ್​ ನೌಕರರಿಗೆ ಕಷ್ಟ ಆಗುತ್ತೆ ಅಂತ ಪತ್ರದ ಮೂಲಕ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.

‘ಫಾನ್​ ಟಾ’ ನಲ್ಲಿ ತಯಾರಾಯ್ತು ಆಮ್ಲೆಟ್​..!
ಸಾಮಾನ್ಯವಾಗಿ ಬ್ರೆಕ್​ಫಾಸ್ಟ್​ಗೆ ಬ್ರೆಡ್​ ಆಮ್ಲೆಟ್​ ತಿನ್ನೋದನ್ನ ನಾವು ನೋಡಿರ್ತಿವಿ. ಆದ್ರೆ ಫಾನ್​ ಟಾ ಜ್ಯೂಸ್​ನಲ್ಲಿ​ ಆಮ್ಲೆಟ್​ ಮಾಡ್ತಾರೆ ಅಂದ್ರೆ ಅಚ್ಚರಿ ಆಗೋದು ಸಹಜ. ಗುಜರಾತ್​ನ ಸೂರತ್​ನಲ್ಲಿರುವ ಸ್ಟ್ರೀಟ್​ ಫುಡ್​ ಸ್ಟಾಲ್​ ಒಂದರಲ್ಲಿ ಫಾನ್​ ಟಾ ಜ್ಯೂಸ್​ ಉಪಯೋಗಿಸಿ ಆಮ್ಲೆಟ್​ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಸದ್ಯ ಈ ವಿಡಿಯೋ ನೋಡಿದ ನೆಟ್ಟಿಗರು ಊಟ ತನ್ನಿಚ್ಛೆ ನೋಟ ಪರರಿಚ್ಛೆ ಎಂಬ ಗಾದೆ ಮಾತನ್ನ ಕಾಮೆಂಟ್​ ಮಾಡಿದ್ದಾರೆ.

ನೀರಜ್​ ಛೋಪ್ರಾಗೆ XUV700 ಕಾರು ಉಡುಗೊರೆ
ಟೋಕಿಯೊ ಒಲಿಂಪಿಕ್ಸ್ ಜಾವೆಲಿನ್ ಥ್ರೋನಲ್ಲಿ ಚಿನ್ನದ ಪದಕ ಗೆದ್ದಿರುವ ಭಾರತದ ನೀರಜ್ ಚೋಪ್ರಾಗೆ ತಮ್ಮ ಕಂಪನಿಯ ಎಸ್‌ಯುವಿ ಎಕ್ಸ್‌ಯುವಿ 700 ಕಾರನ್ನು ಉಡುಗೊರೆಯಾಗಿ ನೀಡುವುದಾಗಿ ಮಹೀಂದ್ರ ಗ್ರೂಪ್​​ನ ಅಧ್ಯಕ್ಷ ಆನಂದ್ ಮಹೀಂದ್ರಾ ಹೇಳಿದ್ದಾರೆ. ಇನ್ನು ಟ್ವಟರ್​ನಲ್ಲಿ ಆನಂದ್ ಮಹೀಂದ್ರಾ ಫಾಲೋವರ್‌ಗಳು ಚೋಪ್ರಾಗೆ XUV 700 ಅನ್ನು ಉಡುಗೊರೆಯಾಗಿ ನೀಡುವಂತೆ ಕೇಳಿದಾಗ, ಮಹೀಂದ್ರಾ ಅವರು ಪ್ರತಿಕ್ರಿಯಿಸಿದ್ದು ‘ಹೌದು ನಿಜ. ನಮ್ಮ ಬಂಗಾರದ ಕ್ರೀಡಾಪಟುವಿಗೆ XUV700 ಉಡುಗೊರೆಯಾಗಿ ನೀಡುವುದು ನನಗೆ ಅತ್ಯಂತ ಗೌರವದ ವಿಷಯ ಎಂದು ಹೇಳಿದ್ದಾರೆ.

ಟೋಕಿಯೋ ಒಲಿಂಪಿಕ್ಸ್​ಗೆ ಇಂದು ಅದ್ದೂರಿ ತೆರೆ
2020ರ ಒಲಂಪಿಕ್ಸ್​ಗೆ ಇಂದು ಅದ್ಧೂರಿ ತೆರೆ ಬೀಳಲಿದೆ. ಜುಲೈ 23ರಂದು ಆರಂಭವಾದ ಜಾಗತಿಕ ಕ್ರೀಡಾಹಬ್ಬ ಇಂದು ಮುಕ್ತಾಯವಾಗಲಿದೆ. ಇಂದು ನಡೆಯುವ ಯಾವುದೇ ಸ್ಪರ್ಧೆಯಲ್ಲಿ ಭಾರತೀಯರು ಭಾಗವಹಿಸುವುದಿಲ್ಲ. ಆದರೆ ಸಮಾರೋಪ ಸಮಾರಂಭದಲ್ಲಿ ಭಾರತೀಯ ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ. ಕೋವಿಡ್​ ಆತಂಕದ ನಡುವೆಯೂ ಜಪಾನ್​ ಸರ್ಕಾರ ಹಾಗೂ ಅಂತಾರಾಷ್ಟ್ರೀಯ ಒಲಂಪಿಕ್ಸ್​ ಸಮಿತಿ ಕ್ರೀಡಾಕೂಟವನ್ನು ಯಶ್ವಸಿಯಾಗಿ ಆಯೋಜಿಸಿದೆ.

ಭಾರತಕ್ಕೆ 209 ರನ್​ಗಳ ಗುರಿ ನೀಡಿದ ಇಂಗ್ಲೆಂಡ್​
ನಾಟಿಂಗ್‌ಹ್ಯಾಂನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್ ತಂಡ 303 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಭಾರತಕ್ಕೆ 209 ರನ್ ಗುರಿ ನೀಡಿದೆ. ಮೊದಲ ಇನಿಂಗ್ಸ್‌ನಲ್ಲಿ 95 ರನ್‌ಗಳ ಹಿನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ ಆಂಗ್ಲರಿಗೆ ರೋರಿ ಬರ್ನ್ಸ್, ಡಾಮ್ ಸಿಬ್ಲೆ, ಉತ್ತಮ ಆರಂಭ ನೀಡಿದರು. ಭಾರತದ ಬೌಲರ್‌ಗಳ ಪೈಕಿ ಜಸ್‌ಪ್ರೀತ್ ಬೂಮ್ರಾ 64 ರನ್ ನೀಡಿ 5 ವಿಕೆಟ್ ಪಡೆದರೆ, ಮೊಹಮ್ಮದ್ ಸಿರಾಜ್ ಮತ್ತು ಶಾರ್ದೂಲ್ ಠಾಕೂರ್ ತಲಾ 2 ವಿಕೆಟ್ ಕಬಳಿಸಿದ್ದಾರೆ.

Source: newsfirstlive.com Source link