ಪದಕ ಗೆದ್ದವರಿಗೆ ಭಾರೀ ಬಹುಮಾನ ಘೋಷಿಸಿದ BCCI.. ನೀರಜ್​ಗೆ 2 ಕೋಟಿ ಮೀಸಲಿಟ್ಟ ಪಂಜಾಬ್ ಸಿಎಂ

ಪದಕ ಗೆದ್ದವರಿಗೆ ಭಾರೀ ಬಹುಮಾನ ಘೋಷಿಸಿದ BCCI.. ನೀರಜ್​ಗೆ 2 ಕೋಟಿ ಮೀಸಲಿಟ್ಟ ಪಂಜಾಬ್ ಸಿಎಂ

ನವದೆಹಲಿ: ಟೋಕಿಯೋ ಒಲಿಂಪಿಕ್ಸ್​​ನಲ್ಲಿ ಪದಕಗಳನ್ನು ಗೆದ್ದು ಬಂದವರಿಗೆ ಬಿಸಿಸಿಐ ಕಾರ್ಯದರ್ಶಿ, ಗೃಹ ಸಚಿವ ಅಮಿತ್ ಶಾ ಪುತ್ರ ಜೈ ಶಾ ಭಾರೀ ಬಹುಮಾನವನ್ನೇ ಘೋಷಿಸಿದ್ದಾರೆ. ಈಗಾಗಲೇ ಕೇಂದ್ರ ಸರ್ಕಾರ ಸೇರಿದಂತೆ ಹಲವು ರಾಜ್ಯಗಳು ಪದಕ ಗೆದ್ದು ಬಂದವರಿಗೆ ಬಹುಮಾನ ಘೋಷಿಸಿರುವ ನಡುವೆ ಇದೀಗ ಜೈ ಶಾ ಕೂಡ ಬಹುಮಾನ ಘೋಷಿಸುವ ಮೂಲಕ ಗಮನ ಸೆಳೆದಿದ್ದಾರೆ.

ಇದನ್ನೂ ಓದಿ: ಚಿನ್ನ ಗೆದ್ದ ಇಂಡಿಯನ್​​ ಆರ್ಮಿ ಸುಬೇದಾರ್​​​ ನೀರಜ್​​ ಚೋಪ್ರಾಗೆ ₹6 ಕೋಟಿ ಬಹುಮಾನ

ಜೈ ಶಾ ಘೋಷಿಸಿದ ಬಹುಮಾನದ ಮೊತ್ತ

  1. ಚಿನ್ನದ ಪದಕ ಗೆದ್ದು ತಂದ ನೀರಜ್ ಚೋಪ್ರಾಗೆ ₹1 ಕೋಟಿ ಬಹುಮಾನ
  2. ಬೆಳ್ಳಿಪದಕ ಗೆದ್ದು ತಂದ ಮೀರಾಬಾಯಿ ಚಾನು ಮತ್ತು ರವಿ ಕುಮಾರ್ ದಹಿಯಾಗೆ ತಲಾ ₹50 ಲಕ್ಷ
  3. ಕಂಚಿನ ಪದಕ ಗೆದ್ದ ಪಿ.ವಿ. ಸಿಂಧು, ಲೊವ್ಲಿನ ಬೊರ್ಗೊಹೈ ಮತ್ತು ಬಜರಂಗ್​ ಪನಿಯಾಗೆ ತಲಾ 25 ಲಕ್ಷ
  4. ಹಾಕಿ ಟೀಂ (ಮೆನ್ಸ್)ಗೆ 1.25 ಕೋಟಿ

ಇದನ್ನೂ ಓದಿ: ’37 ವರ್ಷಗಳ ನನ್ನ ಕನಸು ನನಸು ಮಾಡಿದೆ.. ಥ್ಯಾಂಕ್ಯೂ ಮಗನೇ’- ನೀರಜ್​ಗೆ ಪಿ.ಟಿ. ಉಷಾ ಶುಭಾಶಯ

ಇತ್ತ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಕೂಡ ಚಿನ್ನ ಗೆದ್ದ ನೀರಜ್ ಚೋಪ್ರಾಗೆ ₹2 ಕೋಟಿ ಬಹುಮಾನ ಘೋಷಣೆ ಮಾಡಿದ್ದಾರೆ.

Source: newsfirstlive.com Source link