ಫ್ಲೈಯಿಂಗ್ ಸಿಖ್ ಮಿಲ್ಖಾ ಸಿಂಗ್ ಕನಸು ನನಸು ಮಾಡಿದ ನೀರಜ್ ಚೋಪ್ರಾ

ಫ್ಲೈಯಿಂಗ್ ಸಿಖ್ ಮಿಲ್ಖಾ ಸಿಂಗ್ ಕನಸು ನನಸು ಮಾಡಿದ ನೀರಜ್ ಚೋಪ್ರಾ

ಟೋಕಿಯೋ ಒಲಿಂಪಿಕ್​​ನಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದ ನೀರಜ್ ಚೋಪ್ರಾಗೆ ಅಭಿನಂದನೆಗಳ ಸುರಿಮಳೆ ಬರುತ್ತಿದೆ. ವಾವೆಲಿನ್ ಎಸೆತದಲ್ಲಿ ಚಿನ್ನದ ಪದಕಕ್ಕೆ ಮುತ್ತಿಡುವ ಮೂಲಕ ಇಂಡಿಯನ್ ಆರ್ಮಿಯ ನೀರಜ್ ಚೋಪ್ರಾ, ಪ್ಲೈಯಿಂಗ್ ಸಿಖ್ ಮಿಲ್ಖಾ ಸಿಂಗ್ ಅವರ ಆಸೆಯನ್ನ ಈಡೇರಿಸಿದ್ದಾರೆ.

ಹೌದು.. ಅಥ್ಲೀಟ್ ಮಿಲ್ಖಾ ಸಿಂಗ್​ಗೆ ಒಲಿಂಪಿಕ್ಸ್​ನಲ್ಲಿ ಚಿನ್ನ ಗೆಲ್ಲುವ ಬಹುದೊಡ್ಡ ಕನಸಿತ್ತು. 1960 ಒಲಿಂಪಿಕ್​​ನಲ್ಲಿ ಕೈತಪ್ಪಿದ ಪದಕ ದೇಶಕ್ಕೆ ಬರಬೇಕು ಅನ್ನೋ ಆಸೆ ಅವರದ್ದಾಗಿತ್ತು. ಇದೀಗ ಅವರ ಕನಸು ನನಸಾಗಿದೆ. ಆದರೆ ಈ ಸಂಭ್ರಮವನ್ನ ಸವಿಯಲು ಮಿಲ್ಖಾ ಸಿಂಗ್ ಅವರು ನಮ್ಮೊಂದಿಗೆ ಇಲ್ಲ. 2021 ಜೂನ್ 18 ರಂದು ಇಹಲೋಕ ತ್ಯಜಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಕೇಂದ್ರ ಸಚಿವ ಕಿರಣ್ ರಿಜಿಜು.. ಮಿಲ್ಖಾ ಸಿಂಗ್ ಜೀ, ನಿಮ್ಮ ಕನಸು ನನಸಾಗಲು ನೀವು ಟೋಕಿಯೊ ಒಲಿಂಪಿಕ್ಸ್ ತನಕ ಬದುಕಿರಬೇಕಿತ್ತು ಎಂದು ಟ್ವೀಟ್ ಮಾಡಿದ್ದಾರೆ. ಇನ್ನು ನೀರಜ್ ಚೋಪ್ರಾ ಅವರು ಜಾವೆಲಿನ್‌ ಫೈನಲ್‌ ಸ್ಪರ್ಧೆಯಲ್ಲಿ ಬರೋಬ್ಬರಿ 87.58 ಮೀಟರ್ ಎಸೆಯುವ ಮೂಲಕ ಪದಕ ಜಯಿಸಿದ್ದಾರೆ. ಇನ್ನು, ಈ ಚಿನ್ನದ ಪದಕವನ್ನ ನೀರಜ್ ಚೋಪ್ರಾ ಅವರು ಮಿಲ್ಖಾ ಸಿಂಗ್ ಅವರಿಗೆ ಅರ್ಪಣೆ ಮಾಡಿದ್ದಾರೆ.

Source: newsfirstlive.com Source link