ಬಿಗ್‍ಬಾಸ್ ಟಾಪ್-4 ಕಂಟೆಸ್ಟೆಂಟ್ ಆಗಿ ವೈಷ್ಣವಿ ಗೌಡ ಔಟ್

ಬಿಗ್‍ಬಾಸ್ ಸೀಸನ್-8 ಗ್ರಾಂಡ್ ಫಿನಾಲೆ ಅದ್ದೂರಿಯಾಗಿ ಜರುಗುತ್ತಿದ್ದು, ಸ್ಪರ್ಧಿಗಳ ನಡುವೆ ಬಿಗ್‍ಬಾಸ್ ಟ್ರೋಫಿಗಾಗಿ ಟಫ್ ಫೈಟ್ ನಡೆಯುತ್ತಿದೆ. ಈ ಮಧ್ಯೆ ಬಿಗ್‍ಬಾಸ್ ಮನೆಯ ಟಾಪ್ 4 ಕಂಟೆಸ್ಟೆಂಟ್ ಆಗಿ ವೈಷ್ಣವಿ ಗೌಡ ದೊಡ್ಮನೆಯಿಂದ ಹೊರಬಂದಿದ್ದಾರೆ.

ಬಿಗ್‍ಬಾಸ್ ಮನೆಯಲ್ಲಿ ಸದಾ ಲವಲವಿಕೆಯಿಂದ ಇರುವುದರ ಜೊತೆಗೆ ಮನೆಯ ಇತರ ಸ್ಪರ್ಧಿಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ವೈಷ್ಣವಿ ಗೌಡ, ತಮ್ಮ ಹಾವ-ಭಾವ ಹಾಗೂ ನಡುವಳಿಕೆ, ಮುಗ್ಧತೆ, ಚಿಕ್ಕ-ಚಿಕ್ಕ ಚೇಷ್ಟೆಗಳ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದರು. ಜೊತೆಗೆ ಸೆಕೆಂಡ್ ಇನ್ನಿಂಗ್ಸ್‍ನಲ್ಲಿ ಮಂಜು ಪಾವಗಡ ಜೊತೆ ಹೆಚ್ಚಾಗಿ ಹಾಸ್ಯ ಮಾಡುವ ಮೂಲಕ ಕ್ಯಾಮೆರಾ ಮುಂದೆ ಕಾಣಿಸಿಕೊಂಡಿದ್ದರು. ಬಿಗ್‍ಬಾಸ್ ಫಸ್ಟ್ ಇನ್ನಿಂಗ್ಸ್‌ನಲ್ಲಿ ಸಖತ್ ಸೈಲೆಂಟ್ ಆಗಿದ್ದ ವೈಷ್ಣವಿ, ಸೆಕೆಂಡ್ ಇನ್ನಿಂಗ್ಸ್‌ನಲ್ಲಿ ಟಾಸ್ಕ್ ಹಾಗೂ ತಮ್ಮ ಹಾಸ್ಯದ ಮೂಲಕವೇ ಪ್ರೇಕ್ಷಕರ ಮನ ಗೆದ್ದಿದ್ದರು. ಆದ್ರೆ ಇದೀಗ 10,21,831 ವೋಟ್‍ಗಳನ್ನು ಪಡೆಯುವ ಮೂಲಕ ವೈಷ್ಣವಿ ಬಿಗ್‍ಬಾಸ್ ಮನೆಯಿಂದ ಔಟ್ ಆಗಿದ್ದಾರೆ.

ಮೊದಲೇ ಕಿಚ್ಚ ಸುದೀಪ್ ಹೇಳಿದಂತೆ ಬಿಗ್‍ಬಾಸ್ ಮನೆಯ ಟಾಪ್-5 ಕಂಟೆಸ್ಟಂಟ್‍ಗಳ್ಯಾರು ಖಾಲಿ ಕೈನಲ್ಲಿ ಹೋಗುವುದಿಲ್ಲ ಎಂದು ತಿಳಿಸಿದ್ದರು. ಅದರಂತೆ ಟಾಪ್-4 ಕಂಟೆಸ್ಟಂಟ್‍ಗೆ ಹೊರಬಂದಿರುವ ಸ್ಪರ್ಧಿ ವೈಷ್ಣವಿ ಗೌಡ 3.5 ಲಕ್ಷ ರೂಪಾಯಿಯನ್ನು ಪಡೆಯಲಿದ್ದಾರೆ. ಇನ್ನೂ ಬಿಗ್‍ಬಾಸ್ ಸೀಸನ್-8ರ ಟಾಪ್-5 ಕಂಟೆಸ್ಟಂಟ್ ಆಗಿ ಪ್ರಶಾಂತ್ ಸಂಬರಗಿ ದೊಡ್ಮನೆಯಿಂದ ಹೊರ ಬಂದಿದ್ದರು.ಇದನ್ನೂ ಓದಿ:ಬಿಗ್‍ಬಾಸ್ ಟಾಪ್ 5 ಕಂಟೆಸ್ಟೆಂಟ್ ಸಂಬರ್ಗಿ ಔಟ್

Source: publictv.in Source link