ಮುಂದೊಂದು ದಿನ ನರೇಂದ್ರ ಮೋದಿ ಸ್ಟೇಡಿಯಂಗೆ ಅಮಿತಾ ಶಾ ಪುತ್ರನ ಹೆಸರಿಡಬಹುದು: ಟಿಎಂಸಿ ಸಂಸದ

ನವದೆಹಲಿ: ಮುಂದೊಂದು ದಿನ ನರೇಂದ್ರ ಮೋದಿ ಸ್ಟೇಡಿಯಂಗೆ ಅಮಿತ್ ಶಾ ಅವರು ತಮ್ಮ ಪುತ್ರನ ಹೆಸರಿಡಬಹುದು ಎಂದು ಟಿಎಂಸಿ ಸಂಸದ ಮದನ್ ಮಿತ್ರ ವ್ಯಂಗ್ಯವಾಡಿದ್ದಾರೆ.

ವಿಷಯಗಳ ವಿಷಯಾಂತರ ಮಾಡೋದು ಅವರ (ಬಿಜೆಪಿ) ಸಂಸ್ಕೃತಿ. ಇಂದು ಪ್ರಧಾನಿ ಮೋದಿ ಅವರು ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯ ಹೆಸರು ಬದಲಿಸಿದ್ದಾರೆ. ಬಹುಶಃ ಮುಂದೊಂದು ದಿನ ಅಮಿತ್ ಶಾ, ನರೇಂದ್ರ ಮೋದಿ ಸ್ಟೇಡಿಯಂ ಹೆಸರು ತೆಗೆದು ಪುತ್ರ ಜಯ್ ಶಾ ಹೆಸರಿಡುತ್ತಾರೆ ಅನ್ನಿಸುತ್ತೆ ಎಂದು ಟೀಕಿಸಿದ್ದಾರೆ. ಟಿಎಂಸಿಯ ಮತ್ತೋರ್ವ ಸಂಸದ ಸುಖೇಂದ್ರ ಕೇಶವ್ ರಾಯ್, ಇದೊಂದು ಕೆಳಮಟ್ಟದ ರಾಜಕೀಯ ಎಂದು ಕಿಡಿಕಾರಿದ್ದಾರೆ.

ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯ ಹೆಸರನ್ನು ಕೇಂದ್ರ ಸರ್ಕಾರ ಮೇಜರ್ ಧ್ಯಾನ್ ಚಂದ್ ಎಂದು ಬದಲಿಸಿದೆ. ಕೇಂದ್ರದ ಈ ನಿರ್ಣಯ ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ. ಮೋದಿ ಸರ್ಕಾರದ ಈ ನಿರ್ಣಯವನ್ನು ಕಾಂಗ್ರೆಸ್ ಸೇರಿದಂತೆ ಹಲವು ವಿಪಕ್ಷಗಳು ಖಂಡಿಸಿವೆ.

1991-92 ರಲ್ಲಿ ಈ ಖೇಲ್ ರತ್ನ ಪ್ರಶಸ್ತಿಯನ್ನು ನೀಡಲು ಆರಂಭಿಸಿದ್ದು, ಕ್ರೀಡಾ ಸಾಧಕರಿಗೆ 25 ಲಕ್ಷ ರೂ. ನಗದು ಹಣವನ್ನು ಬಹುಮಾನವಾಗಿ ನೀಡಲಾಗುತ್ತದೆ. ಇದನ್ನೂ ಓದಿ: ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಹೆಸರು ಬದಲಾವಣೆ ಹಿಂದೆ ಮೋದಿ ಸೇಡಿನ ರಾಜಕಾರಣ: ಎಸ್. ಮನೋಹರ್

Source: publictv.in Source link