ವಿಘ್ನಗಳಿಗೆ ಸಿಕ್ತು ಮುಕ್ತಿ.. IPL ಸೆಕೆಂಡ್ ಇನ್ನಿಂಗ್ಸ್ ಫುಲ್​​ ಕಿಕ್​​ ಕೊಡೋದು ಗ್ಯಾರಂಟಿ..!

ವಿಘ್ನಗಳಿಗೆ ಸಿಕ್ತು ಮುಕ್ತಿ.. IPL ಸೆಕೆಂಡ್ ಇನ್ನಿಂಗ್ಸ್ ಫುಲ್​​ ಕಿಕ್​​ ಕೊಡೋದು ಗ್ಯಾರಂಟಿ..!

ಮಿಲಿಯನ್​ ಡಾಲರ್ ಟೂರ್ನಿ ಐಪಿಎಲ್​ಗೆ ಎದುರಾಗಿದ್ದ ಅಡ್ಡಿ-ಆತಂಕಗಳೂ ದೂರವಾಗಿವೆ. ವಿದೇಶಿ ಆಟಗಾರರ ಅಲಭ್ಯತೆ, ಕಲರ್​​ಫುಲ್ ಟೂರ್ನಿಯನ್ನ ಕಳೆಗುಂದಿಸುವ ನಿರಾಸೆಯಲ್ಲಿದ್ದ ಅಭಿಮಾನಿಗಳಿಗೆ, 2ನೇ ಹಂತದ ಐಪಿಎಲ್​ ಫುಲ್​​ ಕಿಕ್​​ ಕೋಡೋದು ಗ್ಯಾರಂಟಿ!

ಕೊರೊನಾ ಕರಿಛಾಯೆಯಿಂದ ಮೊಟಕಾಗಿದ್ದ 14ನೇ ಆವೃತ್ತಿಯ ಐಪಿಎಲ್, ಸೆಪ್ಟೆಂಬರ್ 19ರಿಂದ ಯುಎಇನಲ್ಲಿ ಮರು ಆರಂಭವಾಗಲಿದೆ. ಇದಕ್ಕಾಗಿ ವಿಶ್ವ ಶ್ರೀಮಂತ ಕ್ರಿಕೆಟ್ ಮಂಡಳಿ, ಭರ್ಜರಿ ಸಿದ್ಧತೆಯಲ್ಲಿ ತೊಡಗಿದೆ. ಅಷ್ಟೇ ಅಲ್ಲ..! ಫೇಸ್​-2 ಐಪಿಎಲ್​ಗೆ ಎದುರಾಗಿದ್ದ ಎಲ್ಲಾ ವಿಘ್ನಗಳನ್ನ ಮೆಟ್ಟಿನಿಂತು, ಯಶಸ್ವಿಯಾಗಿ ಮುಗಿಸಲು ಸಜ್ಜಾಗಿದೆ.. ಅದ್ರಲ್ಲೂ ವಿದೇಶಿ ಆಟಗಾರರ ಗೈರು, ಕಲರ್​ಫುಲ್​ ಟೂರ್ನಿಯನ್ನ ಮಂಕಾಗಿಸುತ್ತಾ ಎಂಬ ಆತಂಕ ಕ್ರಿಕೆಟ್ ಅಭಿಮಾನಿಗಳಲ್ಲಿ ಮೂಡಿತ್ತು. ಆದ್ರೀಗ ಈ ಎಲ್ಲಾ ಆತಂಕ ದೂರವಾಗಿದೆ.

​ಹೌದು..! 14ನೇ ಆವೃತ್ತಿಯ ಐಪಿಎಲ್​​ ಅರ್ಧಕ್ಕೆ ಮೊಟಕುಗೊಳ್ಳುತ್ತಿದ್ದಂತೆ, ಇಂಗ್ಲೆಂಡ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್​​​ ಕ್ರಿಕೆಟ್ ಬೋರ್ಡ್​ಗಳು, 2ನೇ ಹಂತದ ಐಪಿಎಲ್​ಗೆ ಗೈರಾಗ್ತಾರೆ ಅಂತಾ ಬಹಿರಂಗ ಹೇಳಿಕೆಗಳನ್ನೇ ನೀಡಿದ್ದವು. ಆದ್ರೆ ಈಗ ಇದೆಲ್ಲವೂ ಉಲ್ಟಾ ಅಗಿದೆ. ಅಂದು ನಾವಿಲ್ಲ.. ನಾವಿಲ್ಲ ಅಂತಿದ್ದ ಕ್ರಿಕೆಟ್ ಬೋರ್ಡ್​ಗಳು, ಈಗ ಐಪಿಎಲ್​ ಲೀಗ್​ನಲ್ಲಿ ತಮ್ಮ ಆಟಗಾರರ ಲಭ್ಯತೆ ಬಗ್ಗೆ ಮಾಹಿತಿ ನೀಡಿವೆ. ಅದ್ರಲ್ಲೂ ಪ್ರಮುಖವಾಗಿ ಇಂಗ್ಲೆಂಡ್ ಆ್ಯಂಡ್ ವೇಲ್ಸ್​ ಬೋರ್ಡ್ ತನ್ನ ಆಟಗಾರರ ಲಭ್ಯತೆ ಬಗ್ಗೆ ಖಚಿತ ಪಡಿಸಿದೆ.

ಇಷ್ಟೇ ಅಲ್ಲ.. ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್, ಅಫ್ಗಾನ್, ಬಾಂಗ್ಲಾ ಕ್ರಿಕೆಟಿಗರು ಸಹ ಐಪಿಎಲ್​ ಟೂರ್ನಿಯಲ್ಲಿ ಭಾಗವಹಿಸುತ್ತಿದ್ದಾರೆ. ಆದ್ರೆ ಇದುವರೆಗೆ ಕ್ರಿಕೆಟ್ ಆಸ್ಟ್ರೇಲಿಯಾ ಯಾವುದೇ ಗುಟ್ಟು ಬಿಟ್ಟುಕೊಡದಿರುವುದು ಭಾರೀ ಕುತೂಹಲ ಮೂಡಿಸಿದೆ.

ಐಪಿಎಲ್​ಗೆ ಲಭ್ಯ ಇರ್ತಾರೆ ಕಿವೀಸ್ ಪ್ಲೇಯರ್ಸ್..!
ಹೌದು..! ಸದ್ಯ ಬಿಸಿಸಿಐಗೆ ಸೆಡ್ಡು ಹೊಡೆದಿದ್ದ ಪಾಕ್, ಐಪಿಎಲ್​ ಸಮಯದಲ್ಲೇ ನ್ಯೂಜಿಲೆಂಡ್ ವಿರುದ್ಧದ ಚುಟುಕು ಸರಣಿಯನ್ನ ಕನ್ಫರ್ಮ್ ಮಾಡಿದೆ. ಇದಕ್ಕೂ ಮೊದಲೇ ಕಿವೀಸ್ ಆಟಗಾರರ ಲಭ್ಯತೆ ಬಗ್ಗೆ ಖಚಿತ ಪಡಿಸಿದ್ದ ನ್ಯೂಜಿಲೆಂಡ್ ಕ್ರಿಕೆಟ್​ ಬೋರ್ಡ್, ಪಾಕ್ ಸರಣಿಗೆ ಗ್ರೀನ್ ಸಿಗ್ನಲ್ ನೀಡಿತ್ತು. ಹೀಗಾಗಿ ಕಿವೀಸ್ ಆಟಗಾರರು ಲಭ್ಯರಾಗುವರಾ? ಎಂಬ ಪ್ರಶ್ನೆ ಹುಟ್ಟುಹಾಕಿತ್ತು. ಆದ್ರೆ ಪಾಕ್ ಸರಣಿ ನಡುವೆಯೂ ಐಪಿಎಲ್​ ಒಪ್ಪಂದ ಮಾಡಿಕೊಂಡಿರುವ 7 ಕಿವೀಸ್ ಆಟಗಾರರು, ಲಭ್ಯರಾಗಲಿದ್ದಾರೆ. ಇದರ ಜೊತೆಗೆ ಯುಎಇಗೆ ತೆರಳುವ ಬಗ್ಗೆ ಇದ್ದ ಗೊಂದಲಗಳು ಕ್ಲಿಯರ್​ ಆಗಿದೆ. ಮುಂದಿನ ವಾರಂತ್ಯದಲ್ಲಿ ಎಲ್ಲಾ ಫ್ರಾಂಚೈಸಿಗಳು ಯುಎಇಗೆ ತೆರಳಿ ಸಿದ್ಧತೆ ನಡೆಸಲಿವೆ.

ಒಟ್ನಲ್ಲಿ 2ನೇ ಹಂತದ ಐಪಿಎಲ್​ಗೆ ವಿದೇಶಿಗರ ಗೈರು ಕಾಡುತ್ತೆಂಬ ಹತಾಶೆಯಲ್ಲಿದ್ದ ಅಭಿಮಾನಿಗಳಿಗೆ, ಈಗ ವಿದೇಶಿ ಆಟಗಾರರ ಲಭ್ಯತೆಯ ಗುಡ್​ನ್ಯೂಸ್​ ಸಂತಸ ತಂದಿರೋದು ನಿಜಾ.!

Source: newsfirstlive.com Source link