3ನೇ ಅಲೆ ಎದುರಿಸಲು ಬೆಂಗಳೂರು ರೆಡಿ.. ಮತ್ತೊಂದು ಸಿಹಿ ಸುದ್ದಿ ಕೊಟ್ಟ ಸೀರಂ ಸಂಸ್ಥೆ

3ನೇ ಅಲೆ ಎದುರಿಸಲು ಬೆಂಗಳೂರು ರೆಡಿ.. ಮತ್ತೊಂದು ಸಿಹಿ ಸುದ್ದಿ ಕೊಟ್ಟ ಸೀರಂ ಸಂಸ್ಥೆ

ದೇಶದಲ್ಲಿ ಕೊರೊನಾ ಮತ್ತೆ ಅಬ್ಬರಿಸಲು ಶುರುವಾಗಿದೆ. ಇದು ಮೂರನೇ ಅಲೆಯ ಮುನ್ಸೂಚನೆ ಅನ್ನೋ ವಿಶ್ಲೇಷಣೆಯ ಮಾತುಗಳು ವೈದ್ಯಕೀಯ ವಲಯದಲ್ಲಿ ಕೇಳಿ ಬರ್ತಿದೆ. ಇದ್ರ ಬೆನ್ನಲ್ಲೇ ಮತ್ತೊಂದು ಸಂತಸದ ಸುದ್ದಿ ಹೊರಬಿದ್ದಿದ್ದು, ಮುಂದಿನ ವರ್ಷದಲ್ಲಿ ಆರಂಭದಲ್ಲಿ ಮಕ್ಕಳಿಗೂ ಕೂಡ ಕೊರೊನಾ ಲಸಿಕೆ ಸಿಗಲಿದೆ.

ಹೌದು.. ಹೋದ್ಯಾ ಪಿಶಾಚಿ ಅಂದ್ರೆ ಬಂದೆ ಗವಾಕ್ಷಿ ಅಂದಂಗಾಗಿದೆ ಸದ್ಯದ ಪರಿಸ್ಥಿತಿ. 2ನೇ ಅಲೆ ಕಡಿಮೆಯಾಗುತ್ತಿದ್ದಂಗೆ ಎಲ್ಲವೂ ಸರಿದಾರಿಗೆ ಬಂತು ಅನ್ನುವಷ್ಟರಲ್ಲೇ ಹೆಮ್ಮಾರಿ ತಲೆ ಎತ್ತಿ ಮತ್ತೆ ತರ್ಲೆ ಮಾಡಲು ಶುರುಮಾಡ್ಕೊಂಡಿದೆ. ತಗ್ಗಿದ್ದ ಕೊರೊನಾದ ಅಬ್ಬರ ಮತ್ತೆ ಹೆಚ್ಚಿದೆ. ಇದ್ರಿಂದ ಮಹಾಮಾರಿ ದೇಶದಲ್ಲಿ ಮೂರನೇ ಕಣ್ಣು ಬಿಟ್ಟರುವ ಬಗ್ಗೆ ಗುಮಾನಿ ಎದ್ದಿದೆ.

blank

ವಿದೇಶಗಳಲ್ಲಿ ಅಬ್ಬರಿಸುತ್ತಿರುವ ಕೊರೊನಾದ ಮೂರನೇ ಅಲೆ, ದಾಟಿ ಒಳಗಡೆ ಬಂದು ಬಿಟ್ಟಿದ್ಯಾ ಎಂಬ ಅನುಮಾನ ಮೂಡ್ತಿದೆ. ದೇಶದಲ್ಲಿ ದಿನದಿದಂದ ದಿನಕ್ಕೆ ಕೊರೊನಾ ಅಬ್ಬರ ಹೆಜ್ಜಾಗುತ್ತಿದ್ದು, ಮೂರನೇ ಅಲೆಯ ಭೀತಿ ಶುರುವಾಗಿದೆ. ರಕ್ಕಸನ ಓಟ ರಾಜ್ಯ ಸರ್ಕಾರವನ್ನ ಬಡಿದೆಬ್ಬಿಸಿದ್ದು, ಪರಿಣಾಮ ರಾಜ್ಯದಲ್ಲಿ ಮತ್ತೆ ನೈಟ್​​ಕರ್ಪ್ಯೂ, ಗಡಿ ಜಿಲ್ಲೆಗಳಲ್ಲಿ ವಿಕೇಂಡ್​ ಕರ್ಪ್ಯೂ ಘೋಷಣೆ ಮಾಡಲಾಗಿದೆ. ಕೊರೊನಾದ ಮೂರನೇ ಅಲೆ ಮಕ್ಕಳನ್ನೇ ಹೆಚ್ಚು ಟಾರ್ಗೆಟ್​ ಮಾಡಲಿದೆ ಎಂದು ತಜ್ಞರು ಈಗಾಗಲೇ ಎಚ್ಚರಿಕೆ ಕೊಟ್ಟಿದ್ದಾರೆ. ಇದ್ರಿಂದ ಎಚ್ಚೆತ್ತುಕೊಂಡಿರುವ ಬೆಂಗಳೂರು ಮಹಾನಗರ ಪಾಲಿಕೆ, ಹೆಮ್ಮಾರಿಯ ಸಂಹಾರಕ್ಕೆ ಸಿದ್ಧತೆ ಮಾಡ್ಕೊಂಡಿದೆ.

ಮಕ್ಕಳಿಗಾಗಿ ಮೊದಲ ಕೋವಿಡ್ ಕೇರ್ ಸೆಂಟರ್​
ಮಕ್ಕಳ ಗಮನ ಸೆಳೆಯಲು ಗೋಡೆಗೆ 3D ವಾಲ್ ಪೇಪರ್
50ಕ್ಕೂ ಅಧಿಕ ಹಾಸಿಗೆ ಸಾಮರ್ಥ್ಯದ ಕೋವಿಡ್​ ಸೆಂಟರ್​

ರಿಜಿನಲ್ ಇನ್ಸ್ಟಿಟ್ಯೂಟ್ ಮ್ಯಾನೇಜ್ಮೆಂಟ್ ಸಹಯೋಗದಲ್ಲಿ ಮಕ್ಕಳಿಗಾಗಿ ಈ ಮೊದಲ ಕೋವಿಡ್​ ಕೇರ್​ ಸೆಂಟರ್​ ತಯಾರು ಮಾಡಲಾಗಿದೆ. ಈ ಕೋವಿಡ್​ ಕೇಂದ್ರ ಸುಮಾರು 50 ಕ್ಕಿಂತ ಹೆಚ್ಚು ಬೆಡ್ ಗಳ ಸಾಮರ್ಥ್ಯವನ್ನು ಹೊಂದಿದ್ದು, ಎಲ್ಲಾ ಬೆಡ್​ಗಳಿಗೂ ಆಕ್ಸಿಜನ್ ವ್ಯವಸ್ಥೆ ಮಾಡಲಾಗಿದೆ. ಒಂದು ವೇಳೆ ಪುಟ್ಟ ಮಕ್ಕಳಿಗೆ ಸೋಂಕು ತಗುಲಿದ್ರೆ, ಅಂತ ಮಕ್ಕಳನ್ನು ಹೆತ್ತವರ ಮಡಿಲಿನಿಂದ ದೂರ ಇರಿಸಿ ಚಿಕಿತ್ಸೆ ನೀಡುವುದು ಕಷ್ಟದ ಕೆಲ್ಸ. ಇದನ್ನರಿತ ಬಿಬಿಎಂಪಿ ಮಕ್ಕಳ ಆರೈಕೆ ಕೇಂದ್ರದಲ್ಲಿ ಮಕ್ಕಳ ಜೊತೆಗೆ ಹೆತ್ತವರಿಗೂ ತಂಗಲು ವ್ಯವಸ್ಥೆ ಮಾಡಿಕೊಡಲಾಗಿದೆ.

ಸೋಂಕಿತ ಮಕ್ಕಳು ಮೆಂಟಲಿ ಡಿಸ್ಟರ್ಬ್ ಆಗದಿರಲಿ ಅನ್ನೋ ಕಾರಣಕ್ಕೆ, ಮಕ್ಕಳನ್ನು ಆಕರ್ಷಿಸಲು ಕೋವಿಡ್ ಕೇಂದ್ರದಲ್ಲಿ 3 D ವಾಲ್ಸ್ , ಸ್ಟಡಿ ಚಾಟ್ಸ್ ಗಳನ್ನು ಕೂಡ ಒದಗಿಸಲಾಗುತ್ತೆ. ಇಲ್ಲಿ ಮಕ್ಕಳಿಗೆ ಆಟಿಕೆ ಸಾಮಾಗ್ರಿಗಳನ್ನು ಕೂಡ ಕಲ್ಪಿಸಲಾಗುತ್ತೆ. ಇದೇ ಕಾರಣಕ್ಕೆ ಗೋಡೆಗಳಿಗೆ ಪ್ರಾಣಿ ಪಕ್ಷಿಗಳ ಚಿತ್ರವನ್ನ ಅಂಟಿಸುವ ಮೂಲಕ ಮಕ್ಕಳ ಹಾರೈಕೆಗೆ ಸಿದ್ಧತೆ ಮಾಡಿಕೊಂಡಿದೆ.

ಡಿ.ರಂದೀಪ್, ಆರೋಗ್ಯ ವಿಭಾಗದ ವಿಶೇಷ ಆಯುಕ್ತರು, ಬಿಬಿಎಂಪಿ

2ನೇ ಅಲೆಯಲ್ಲಿ ಮಾಡಿದ ತಪ್ಪು ಮತ್ತೆ ಮರುಕಳಿಸಬಾರದು ಅನ್ನೋ ಕಾರಣಕ್ಕೆ ಬಿಬಿಎಂಪಿ ಫುಲ್​ ಅಲೆರ್ಟ್​ ಆಗಿದೆ. 3ನೇ ಅಲೆಯ ವೇಳೆ ಮಕ್ಕಳಿಗೆ ಬೆಡ್​ಗಳ ಸಮಸ್ಯೆಯಾಗದಿರಲಿ ಎಂದು ಈಗಾಗಲೇ ಬೆಡ್​ ವ್ಯವಸ್ಥೇ ಕೂಡ ಮಾಡ್ಕೊಂಡಿದೆ. ಮೂರನೇ ಅಲೆ ಮಕ್ಕಳನ್ನೇ ಹೆಚ್ಚು ಟಾರ್ಗೆಟ್​ ಮಾಡುತ್ತೆ ಎಂಬ ಆತಂಕದ ನಡುವೆ ಮತ್ತೊಂದು ಗುಡ್ ನ್ಯೂಸ್​ ಕೂಡ ಸಿಕ್ಕಿದೆ.

blank

ದೇಶದಲ್ಲಿ ಮಕ್ಕಳಿಗೂ ಸಿಗಲಿದೆ ಕೊರೊನಾ ಲಸಿಕೆ
2022ರ ಆರಂಭದಲ್ಲಿ ಕೋವಾವಾಕ್ಸ್​ ಲಭ್ಯ ಎಂದ ಸೀರಂ ಸಂಸ್ಥೆ

2022ರ ಆರಂಭದಲ್ಲಿ ದೇಶದಲ್ಲಿ ಮಕ್ಕಳಿಗೂ ನೀಡುವ ಪ್ರಕ್ರಿಯೆ ಆರಂಭವಾಗಲಿದೆ ಎಂದು ಕೋವಿಶೀಲ್ಡ್ ಲಸಿಕೆಯನ್ನ ಉತ್ಪಾದಿಸುತ್ತಿರುವ ಭಾರತದ ಸೀರಂ ಇನ್ಸ್​ಟಿಟ್ಯೂಟ್ ಸಂಸ್ಥೆ ಹೇಳಿದೆ. ಅಮೆರಿಕದ ನೋವಾವ್ಯಾಕ್ಸ್ ಸಂಸ್ಥೆ ಅಭಿವೃದ್ಧಿಪಡಿಸಿದ ಕೋವೋವ್ಯಾಕ್ಸ್ ಲಸಿಕೆಯನ್ನ ಸೀರಂ ಸಂಸ್ಥೆ ಉತ್ಪಾದಿಸಲಿದ್ದು, ಇದ್ರಿಂದ 2022ರ ಜನವರಿ ವೇಳೆಯಲ್ಲಿ ಮಕ್ಕಳ ಲಸಿಕೆ ಲಭ್ಯವಾಗುವ ಸಾಧ್ಯತೆ ಇದೆ. ಈ ಕುರಿತು ಸೀರಂ ಇನ್​​ಸ್ಟಿಟ್ಯೂಟ್​ ಆಫ್ ಇಂಡಿಯಾದ ಸಿಇಓ ಅದಾರ್ ಪೂನಾವಾಲ ಮಾಹಿತಿ ನೀಡಿದ್ದಾರೆ.

ಕೋವೋವ್ಯಾಕ್ಸ್​ ಲಸಿಕೆಯನ್ನು ಮುಂದಿನ ವರ್ಷದ ಮೊದಲ ತ್ರೈಮಾಸಿಕದಲ್ಲಿ, ಬಹುತೇಕ ಜನವರಿ ಅಥವಾ ಫೆಬ್ರವರಿ ತಿಂಗಳಲ್ಲಿ ಮಕ್ಕಳಿಗೆ ನೀಡಲು ಅರಂಭಿಸಲಾಗುವುದು
ಅದಾರ್ ಪೂನಾವಾಲ-ಸೀರಂ ಇನ್​​ಸ್ಟಿಟ್ಯೂಟ್​ ಆಫ್ ಇಂಡಿಯಾ

ಅಮೆರಿಕದ ನೋವಾವ್ಯಾಕ್ಸ್ ಸಂಸ್ಥೆ ಅಭಿವೃದ್ಧಿಪಡಿಸಿದ ಕೋವೋವ್ಯಾಕ್ಸ್ ಲಸಿಕೆಯನ್ನು ಸೀರಂ ಸಂಸ್ಥೆ ಉತ್ಪಾದಿಸುತ್ತಿದೆ. ಎಲ್ಲಾ ಅಂದುಕೊಂಡಂತೆ ನಡೆದ್ರೆ 2022 ರ ಜನವರಿ ವೇಳೆಯಲ್ಲಾಗಲೇ ಮಕ್ಕಳಿಗೆ ಲಸಿಕೆ ಸಿಗಲಿದೆ. ಇದೀಗ ಮಕ್ಕಳ ಮೇಲೆ ಲಸಿಕೆ ಪ್ರಯೋಗ ನಡೆಸಲು ಕೂಡ ಸಿದ್ಧತೆ ಮಾಡಲಾಗಿದೆ.

ಇದೇ ತಿಂಗಳಲ್ಲಿ ಮಕ್ಕಳ ಮೇಲೆ ಲಸಿಕೆ ಪ್ರಯೋಗ
ಹತ್ತು ಸ್ಥಳಗಳಲ್ಲಿ 920 ಮಕ್ಕಳಲ್ಲಿ ಇದರ ಪ್ರಯೋಗ

ಅಮೆರಿಕದ ನೋವಾವ್ಯಾಕ್ಸ್ ಸಂಸ್ಥೆ ಅಭಿವೃದ್ಧಿಪಡಿಸಿದ ಕೋವೋವ್ಯಾಕ್ಸ್ ಲಸಿಕೆಯನ್ನು ಸೀರಂ ಸಂಸ್ಥೇ ಉತ್ಪಾದಿಸುತ್ತಿದೆಯಾದ್ರು, ಕೋವಾವ್ಯಾಕ್ಸ್ ಲಸಿಕೆ ದೇಶದಲ್ಲಿ ಇನ್ನೂ ಪ್ರಯೋಗಕ್ಕೆ ಇಳಪಟ್ಟಿಲ್ಲ. ಅದ್ಕೂ ಕೂಡ ಕಾಲ ಸನ್ನಿಹಿತವಾಗಿದ್ದು, ಇದೇ ತಿಂಗಳಲ್ಲಿ ಕೋವಾವ್ಯಾಕ್ಸ್ ಲಸಿಕೆಯ ಪ್ರಯೋಗ ನಡೆಯುವ ಸಾಧ್ಯತೆ ಇದೆ. ಒಟ್ಟು 10 ಸ್ಥಳಗಳಲ್ಲಿ 920 ಮಕ್ಕಳ ಮೇಲೆ ಟ್ರಯಲ್ ನಡೆಸಲು ಸಿದ್ಧತೆ ಮಾಡ್ಕೊಂಡಿದೆ. 2 ರಿಂದ 17 ವರ್ಷದೊಳಗಿನ 920 ಮಕ್ಕಳು ಈ ಪ್ರಯೋಗಕ್ಕೆ ಒಳಪಡಲಿದ್ದಾರೆ.

ಮಕ್ಕಳಿಗೆಂದೆ ತಯಾರಾಗುತ್ತಿರುವ ಕೋವಾವ್ಯಾಕ್ಸ್ ಲಸಿಕೆಯ ತುರ್ತು ಬಳಕೆಗೆ ಭಾರತದ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಗೆ ಸೀರಂ ಸಂಸ್ಥೆ ಅನುಮತಿ ಕೋರಿ ಅರ್ಜಿ ಹಾಕಿದೆ. ಆದ್ರೆ ಭಾರತದ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ ಮಾತ್ರ ಕಾದು ನೋಡುವ ತಂತ್ರಗಾರಿಕೆಗೆ ಮುಂದಾಗಿದೆ. ಲಸಿಕೆಯ ಪ್ರಯೋಗದ ವಿವರಗಳನ್ನು ಪರಿಶೀಲಿಸಿದ ನಂತರವಷ್ಟೇ ಅನುಮತಿ ನೀಡಲು ಮುಂದಾಗಿದೆ. ಮಕ್ಕಳಿಗೂ ಕೊರೊನಾ ಲಸಿಕೆ ಸಿಕ್ಕಿದ್ರೆ, ಮೂರನೇ ಅಲೆ ವಿರುದ್ಧ ಸಮರವನ್ನ ಸುಲಭವಾಗಿ ಗೆಲ್ಲುವ ಸಾಧ್ಯತೆ ಇದೆ.

blank

ಇನ್ನೂ ಕೊರೊನಾದ ಮೊದಲ ಅಲೆಯ ವೇಳೆ ಮಕ್ಕಳ ಮೇಲೆ ಅಷ್ಟು ಪರಿಣಾಮ ಬೀರಿಲ್ಲವಾದ್ರು, ಕೊರೊನ ಎರಡನೇ ಅಲೆ ನೂರಾರು ಕಂದಮ್ಮಗಳನ್ನ ತಮ್ಮ ಬಲೆಗೆ ಬೀಳಿಸಿತ್ತು. 8 ವರ್ಷಕ್ಕೂ ಕೆಳಗಿನ ಹಾಗೂ ನವಜಾತ ಶಿಶುಗಳಿಗೂ ಸೋಂಕು ತಗುಲಿರುವುದು ಕೂಡ ವರದಿಯಾಗಿತ್ತು. ಆದ್ರೆ ಮೂರನೇ ಅಲೆಯ ಮಕ್ಕಳನ್ನೇ ಹೆಚ್ಚು ಗುರಿಯಾಗಿಸಿ ಸವಾರಿ ಮಾಡಲಿದೆ ಎಂದು ತಜ್ಷರು ಕೂಡ ಎಚ್ಚರಿಕೆ ಕೊಟ್ಟಿದ್ದಾರೆ. ಇದ್ರಿಂದ ಸೀರಂ ಸಂಸ್ಥೆ ಮಾತ್ರವಲ್ಲ, ಭಾರತದ ಭಾರತ್ ಬಯೋಟೆಕ್ ಮತ್ತು ಝೈಡಸ್ ಕೆಡಿಲಾ ಸಂಸ್ಥೆಗಳೂ ಕೂಡ ಈಗಾಗಲೇ ತಮ್ಮ ಕೋವ್ಯಾಕ್ಸಿನ್ ಮತ್ತು ಝೈಕೋವ್-ಡಿ ಲಸಿಕೆಗಳನ್ನ ಮಕ್ಕಳ ಮೇಲೆ ಪ್ರಯೋಗ ನಡೆಸುವ ಸಾಧ್ಯತೆ ಇದೆ. ಒಂದು ಪ್ರಯೋಗ ಸಕ್ಸಸ್ ಕಂಡ್ರೆ ಮೂರನೆ ಮುಂದಿನ ವರ್ಷದ ಆರಂಭದ ವೇಳೆ ಮಕ್ಕಳಿಗೂ ಕೊರೊನಾ ಲಸಿಕೆ ಸಿಗಲಿದೆ.

ಒಟ್ಟಿನಲ್ಲಿ ದೇಶಾದ್ಯಂತ ಕೊರೊನಾದ ಮೂರನೇ ಅಲೆಯ ಗಾಳಿ ಬೀಸಿರುವ ಮಾಹಿತಿ ಸಿಕ್ಕಿದ್ದು, ಈಗಾಗಲೆ ಗಡಿ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಮಹಾಮಾರಿಯ ಓಟಕ್ಕೆ ಬ್ರೇಕ್ ಹಾಕಲು ಸಿದ್ಧತೆ ನಡೆಯುತ್ತಿದೆ. ಮಕ್ಕಳಿಗೆ ಲಸಿಕೆ ಬಂದ್​ಮೇಲಷ್ಟೆ ನೆಮ್ಮದಿ. ಲಸಿಕೆ ಬರ್ಲಿ, ಬರದೇ ಇರ್ಲಿ, ನಾವು ಮಾತ್ರ ಸದಾ ಎಚ್ಚರಿಕೆಯಿಂದಲೆ ಇರ್ಬೇಕು. ಇಲ್ಲವಾದ್ರೆ ಅಪಾಯ ಮಾತ್ರ ಕಟ್ಟಿಟ್ಟ ಬುತ್ತಿ.

Source: newsfirstlive.com Source link