‘ಧೋನಿ ರಿಟೈನ್ ಭವಿಷ್ಯ’! ಅಭಿಮಾನಿಗಳಿಗೆ ಕಾದಿದ್ಯಾ ಶಾಕಿಂಗ್ ನ್ಯೂಸ್?

‘ಧೋನಿ ರಿಟೈನ್ ಭವಿಷ್ಯ’! ಅಭಿಮಾನಿಗಳಿಗೆ ಕಾದಿದ್ಯಾ ಶಾಕಿಂಗ್ ನ್ಯೂಸ್?

2ನೇ ಹಂತದ ಐಪಿಎಲ್​ ಆರಂಭಕ್ಕೆ ಒಂದೂವರೆ ತಿಂಗಳು ಮಾತ್ರ ಬಾಕಿ ಇದೆ. ಎಲ್ಲಾ ಫ್ರಾಂಚೈಸಿಗಳು ಈಗಾಗಲೇ ಸಿದ್ಧತೆಯನ್ನೂ ಆರಂಭಿಸಿವೆ. ಇದರ ನಡುವೆಯೇ ಚೆನ್ನೈ ಸೂಪರ್​ ಕಿಂಗ್ಸ್​​ ಅಭಿಮಾನಿಗಳಲ್ಲಿ ನೆಚ್ಚಿನ ತಲಾ ಎಂ.ಎಸ್​​.ಧೋನಿ ಮುಂದಿನ ಆವೃತ್ತಿಯಲ್ಲಿ ಆಡ್ತಾರಾ, ಇಲ್ವೋ ಅನ್ನೋ ಕುತೂಹಲ ಹುಟ್ಟಿದೆ. ಅದ್ಯಾಕೆ..?

ಎಂ.ಎಸ್​​​.ಧೋನಿಗೆ ಇದೇ ಕೊನೆ ಐಪಿಎಲ್?
ಸೆಪ್ಟೆಂಬರ್​​ 19ರಿಂದ 14ನೇ ಆವೃತ್ತಿಯ 2ನೇ ಹಂತ ಆರಂಭವಾಗೋದು ಕನ್​ಫರ್ಮ್​ ಆಗಿದೆ.  ಫ್ರಾಂಚೈಸಿಗಳು ಕೂಡ ಟೂರ್ನಿಗೆ ಭರದ ಸಿದ್ಧತೆಯಲ್ಲಿ ತೊಡಗಿವೆ. ಅತ್ತ ಎಂ.ಎಸ್​.ಧೋನಿ ನೇತೃತ್ವದ ಸಿಎಸ್​​ಕೆ 4ನೇ ಬಾರಿ ಚಾಂಪಿಯನ್​ ಆಗೋಕೆ ಬಿರುಸಿನ ಸಮರಾಭ್ಯಾಸ ನಡೆಸ್ತಿದ್ದು, ಇದೇ ತಿಂಗಳಲ್ಲಿ ಯುಎಇಗೆ ಹಾರೋಕೆ ಪ್ಲಾನ್​ ಹಾಕಿಕೊಂಡಿದೆ. ಆದರೆ ದ್ವಿತಿಯಾರ್ಧದ ಟೂರ್ನಿ ಆರಂಭಕ್ಕೂ ಮುನ್ನ ಧೋನಿಗೆ ಇದು ಕೊನೆಯ ಐಪಿಎಲ್ ಟೂರ್ನಿಯೇ? ಅನ್ನೋ ಪ್ರಶ್ನೆ ಎದುರಾಗಿದೆ.

ಇದನ್ನೂ ಓದಿ: ವಿಘ್ನಗಳಿಗೆ ಸಿಕ್ತು ಮುಕ್ತಿ.. IPL ಸೆಕೆಂಡ್ ಇನ್ನಿಂಗ್ಸ್ ಫುಲ್​​ ಕಿಕ್​​ ಕೊಡೋದು ಗ್ಯಾರಂಟಿ..!

blank

ಯೆಸ್​​.. 14ನೇ ಆವೃತ್ತಿಯ ಐಪಿಎಲ್​ ಬಳಿಕ, ಧೋನಿ ಮುಂದಿನ ನಡೆ ಕುರಿತು ಸಿಕ್ಕಾಪಟ್ಟೆ ಚರ್ಚೆಗಳು ಎದ್ದಿವೆ. ಇದೆಲ್ಲದರ ನಡುವೆಯೇ ಕೂಲ್​ ಕ್ಯಾಪ್ಟನ್​ ಧೋನಿ ದೇಹದ ತೂಕ ಇಳಿಸಿ ಫುಲ್​​ ಫಿಟ್​ ಆ್ಯಂಡ್​ ಸ್ಲಿಮ್ ಆಗಿ ತಯಾರಾಗಿದ್ದಾರೆ. ಫ್ರಾಂಚೈಸಿ ಕೂಡ ಧೋನಿಯೇ ನಾಯಕ ಎಂದು ಹೇಳಿದ್ದು, ಹಲವು ಗೊಂದಲಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದೆ.

ಇದನ್ನೂ ಓದಿ: ಫ್ಲೈಯಿಂಗ್ ಸಿಖ್ ಮಿಲ್ಖಾ ಸಿಂಗ್ ಕನಸು ನನಸು ಮಾಡಿದ ನೀರಜ್ ಚೋಪ್ರಾ

2ನೇ ಹಂತದ IPLಗೆ ಧೋನಿ ತಯಾರಿ ಹೇಗಿದೆ..?
14ನೇ ಆವೃತ್ತಿಯ IPLನ ಮೊದಲ ಹಂತದಲ್ಲಿ CSK ಉತ್ತಮ ಪ್ರದರ್ಶನ ತೋರಿದ್ದು, ಅಂಕ ಪಟ್ಟಿಯಲ್ಲಿ 2ನೇ ಸ್ಥಾನ ಪಡೆದಿದೆ. ಧೋನಿ ಕ್ಯಾಪ್ಟನ್ಸಿಯಲ್ಲೇನೋ ಪಾಸಾಗಿದ್ದಾರೆ, ಆದ್ರೆ ಬ್ಯಾಟ್ಸ್​ಮನ್​ ಆಗಿ ಸಂಪೂರ್ಣ ವೈಫಲ್ಯ ಕಂಡಿದ್ದಾರೆ. ಆಡಿರುವ ಏಳು ಪಂದ್ಯಗಳಲ್ಲಿ 37 ರನ್​ಗಳನ್ನಷ್ಟೇ ಗಳಿಸಿರುವ ಧೋನಿ, ಉಳಿದರ್ಧ ಐಪಿಎಲ್​​​ನಲ್ಲಿ ಮಿಂಚಲೇ ಬೇಕಿದೆ. ಮುಂದಿನ ಪಂದ್ಯಗಳಲ್ಲಿ ಧೋನಿ ನೀಡೋ ಪ್ರದರ್ಶನದ ಆಧಾರದಲ್ಲಿ ರಿಟೈನ್​ ಭವಿಷ್ಯ ನಿಂತಿದೆ.

blank

ಡಿಸೆಂಬರ್​​ನಲ್ಲಿ ನಡೆಯಲಿರುವ ಐಪಿಎಲ್​​​ ಮೆಗಾ ಹರಾಜಿನಲ್ಲಿ ಸಿಎಸ್​ಕೆಯೇನೋ ಧೋನಿಯನ್ನ ರಿಟೈನ್​ ಮಾಡಿಕೊಳ್ಳೋ ಪ್ಲಾನ್​​ನಲ್ಲಿದೆ. ಒಂದು ವೇಳೆ ಧೋನಿ ರಿಟೈನ್​ ಆದ್ರೂ, 3 ವರ್ಷ ತಂಡದ ಪರ ಆಡಬೇಕಾಗುತ್ತೆ. ಅಷ್ಟು ದಿನಗಳ ಕಾಲ ಫಿಟ್​ನೆಸ್​ ಹಾಗೂ ಟೆಂಪರ್​ಮೆಂಟ್​ ಅನ್ನ ಧೋನಿ ಕಾಯ್ದುಕೊಳ್ತಾರಾ ಅನ್ನೋದು ಕುತೂಹಲ ಹುಟ್ಟು ಹಾಕಿದೆ.

ಇದನ್ನೂ ಓದಿ: ಪದಕ ಗೆದ್ದವರಿಗೆ ಭಾರೀ ಬಹುಮಾನ ಘೋಷಿಸಿದ BCCI.. ನೀರಜ್​ಗೆ 2 ಕೋಟಿ ಮೀಸಲಿಟ್ಟ ಪಂಜಾಬ್ ಸಿಎಂ

Source: newsfirstlive.com Source link