ಸಂಬರಗಿ, ವೈಷ್ಣವಿ ಔಟ್​ -ಉಳಿದ ಮೂವರಲ್ಲಿ ಗೆಲುವು ಯಾರ ಮುಡಿಗೆ?

ಸಂಬರಗಿ, ವೈಷ್ಣವಿ ಔಟ್​ -ಉಳಿದ ಮೂವರಲ್ಲಿ ಗೆಲುವು ಯಾರ ಮುಡಿಗೆ?

ಬಿಗ್​​ಬಾಸ್​ ಸೀಸನ್​​ 8ಕ್ಕೆ ಇಂದು ಅಧಿಕೃತಾಗಿ ತೆರೆ ಬೀಳಲಿದ್ದು, ಶೋನ ಟಾಪ್​ 5 ಸ್ಪರ್ಧಿಗಳಾಗಿ ಫಿನಾಲೆ ವೀಕ್​​ಗೆ ಎಂಟ್ರಿ ಕೊಟ್ಟಿದ್ದ ಐದು ಸ್ಪರ್ಧಿಗಳಲ್ಲಿ ಇಬ್ಬರು ಮನೆಯಿಂದ ಹೊರ ಬಿದ್ದಿದ್ದಾರೆ. ಗೆಲುವಿನ ಸನಿಹ ಆಗಮಿಸಿದ್ದ ಪ್ರಶಾಂತ್ ಸಂಬರಗಿ ಹಾಗೂ ವೈಷ್ಣವಿ ಗೌಡ ಮನೆಯಿಂದ ಹೊರ ಬಂದಿದ್ದು, ಸದ್ಯ ಅರವಿಂದ್, ಲ್ಯಾಗ್​ ಮಂಜು ಹಾಗೂ ದೀಪಿಕಾ ಉರುಡುಗ ಸದ್ಯ ಟಾಪ್​​ 3 ಸ್ಪರ್ಧಿಗಳಾಗಿ ಗ್ರ್ಯಾಂಡ್​ ಫಿನಾಲೆ ವೀಕ್​​ಗೆ ತಲುಪಿದ್ದಾರೆ.

blank

ಬಿಗ್​ಬಾಸ್​​ ಮನೆಯಲ್ಲಿ ನಾಲ್ಕೇ ಸ್ಪರ್ಧಿಯಾಗಿ ವೈಷ್ಣವಿ ಗೌಡ ಹಾಗೂ ಐದನೇ ಸ್ಪರ್ಧಿಯಾಗಿ ಸಂಬರಗಿ ತಮ್ಮ ಜರ್ನಿ ಅಂತ್ಯಗೊಳಿಸಿದರು. ಗ್ರ್ಯಾಂಡ್​ ಫಿನಾಲೆ ವೀಕ್​ಗೆ ಮನೆಯಲ್ಲಿ ಉಳಿದುಕೊಂಡಿದ್ದ ವೈಷ್ಣವಿ, ಸಂಬರಗಿ, ಅರವಿಂದ್, ದಿವ್ಯಾ ಹಾಗೂ ಮಂಜು ಪಾವಗಡ ಅವರಲ್ಲಿ ಮೊದಲಿಗೆ ಸಂಬರಗಿ ಮನೆಯಿಂದ ಬಂದರು. ಒಟ್ಟು 6,69,020 ವೋಟ್​ ಪಡೆದುಕೊಂಡಿದ್ದ ಸಂಬರಗಿ ಮೊದಲಿಗೆ ಹೊರ ಬಂದರು. ಇವರಿಗೆ 2.5 ಲಕ್ಷ ರೂಪಾಯಿಗಳ ಬಹುಮಾನ ಲಭ್ಯವಾಗಲಿದೆ. ಆ ಬಳಿಕ 10,21,831 ಅಂಕ ಪಡೆದುಕೊಂಡಿದ್ದ ವೈಷ್ಣವಿ ಅವರು 4ನೇ ಸ್ಥಾನ ಪಡೆದು ತಮ್ಮ ಜರ್ನಿ ಅಂತ್ಯಗೊಳಿಸಿದರು. ಇವರಿಗೆ 3.5 ಲಕ್ಷ ರೂಪಾಯಿ ನಗದು ಬಹುಮಾನ ಲಭ್ಯವಾಗಲಿದೆ.

blank

ಎಲಿಮಿನೇಷನ್​ ಎಂದು ಬಂದ ಸಂದರ್ಭದಲ್ಲಿ ಮನೆಯಲ್ಲಿದ್ದ ನಾಲ್ವರು ಸದಸ್ಯರು ಕೂಡ ದಿವ್ಯಾ ಉರುಡುಗ ಎಲಿಮಿನೇಟ್​ ಆಗಬಹುದು ಎಂದು ಉತ್ತರಿಸಿದ್ದರು. ಇದರಲ್ಲಿ ವಿದ್ಯಾ ಉರುಡುಗ ಕೂಡ ತಾನೇ ಎಲಿಮಿನೇಟ್​ ಆಗಬಹುದು ಎಂದಿದ್ದರು. ಆದರೆ ವೋಟ್​​ಗಳು ಪಡೆದ ಆಧಾರದ ಮೇಲೆ ಮನೆಯಿಂದ ವೈಷ್ಣವಿ ಅವರು ಹೊರಗೆ ಬಂದರು. ಇದಕ್ಕೂ ಮುನ್ನ ಮನೆಯಲ್ಲಿದ್ದ ಸದಸ್ಯರಲ್ಲಿ ಯಾರು ಎಲಿಮಿನೇಟ್​ ಆಗ್ತಾರೆ ಎಂಬ ಪ್ರಶ್ನಗೆ ಸಂಬರಗಿ ಅವರೇ ಅಂತ ಉತ್ತರಿಸಿದ್ದರು. ಎಲ್ಲರ ಊಹೆ ಇಲ್ಲಿ ಸರಿಯಾಗಿತ್ತು. ಐದನೇ ಸ್ಪರ್ಧಿಯಾಗಿ ಸಂಬರಗಿ ಎಲಿಮಿನೇಟ್ ಆಗುತ್ತಿರುವುದು ಗೊತ್ತಾಗುತ್ತಿದಂತೆ ಅವರು ಭಾವುಕರಾದರು. ಆದರೆ ಸ್ಪರ್ಧೆಯಲ್ಲಿ ಭಾಗಿಯಾಗಲು ಅವಕಾಶ ನೀಡಿದಕ್ಕೆ ಬಿಗ್​​ಬಾಸ್​​ಗೆ ಧನ್ಯವಾದ ಹೇಳಿ ಹೊರನಡೆದರು.

blank

Source: newsfirstlive.com Source link