ನೀರಜ್ ಚೋಪ್ರಾಗೆ ₹1 ಕೋಟಿ ಬಹುಮಾನ ಘೋಷಿಸಿದ ಚೆನ್ನೈ ಸೂಪರ್ ಕಿಂಗ್ಸ್​

ನೀರಜ್ ಚೋಪ್ರಾಗೆ ₹1 ಕೋಟಿ ಬಹುಮಾನ ಘೋಷಿಸಿದ ಚೆನ್ನೈ ಸೂಪರ್ ಕಿಂಗ್ಸ್​

ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟ ನೀರಜ್ ಚೋಪ್ರಾ ಅವರಿಗೆ ಇಂಡಿಯನ್ ಪ್ರೀಮಿಯರ್ ಕ್ರಿಕೆಟ್ ಲೀಗ್​ನ ಸಿಎಸ್​ಕೆ ಪ್ರಾಂಚೈಸಿ ಒಂದು ಕೋಟಿ ಬಹುಮಾನವನ್ನ ಘೋಷಣೆ ಮಾಡಿದೆ. ಜೊತೆಗೆ ಗೌರವಾರ್ಥವಾಗಿ ವಿಶೇಷ ಜರ್ಸಿ ಕೂಡ ಮಾಡಿಸುವುದಾಗಿ ತಿಳಿಸಿದೆ.

ಟೋಕಿಯೋ ಒಲಿಂಪಿಕ್ಸ್​ನಲ್ಲಿ ಜಾವೆಲಿನ್‌ ಥ್ರೋ ಫೈನಲ್​​ನಲ್ಲಿ ನೀರಜ್‌ ಚೋಪ್ರಾ ಚಿನ್ನದ ಪದಕ ಗೆದ್ದಿದ್ದಾರೆ. ನಿನ್ನೆ ನಡೆದ ಫೈನಲ್​​​ ಪಂದ್ಯದಲ್ಲಿ 87.58 ಮೀ. ದೂರಕ್ಕೆ ಜಾವೆಲಿನ್‌ ಎಸೆದು ಅಗ್ರಸ್ಥಾನ ಪಡೆದುಕೊಳ್ಳುವ ಮೂಲಕ ನೀರಜ್​​ ಗೆದ್ದು ಬೀಗಿದರು.

ಇನ್ನು ವಿಶೇಷ ಜರ್ಸಿಗೆ ಸಿಎಸ್​ಕೆ 8758 ನಂಬರ್ ನೀಡಲಿದೆ. ಅವರು ಜಾವೆಲಿನ್ ಎಸೆದಿರುವ ದೂರವನ್ನ ಶಾಶ್ವತವಾಗಿ ನೆನಪಿಟ್ಟುಕೊಳ್ಳುವ ಉದ್ದೇಶದಿಂದ ಈ ನಂಬರ್ ನೀಡಲಾಗುತ್ತಿದೆ.

blank

ಪದಕ ಗೆದ್ದವರಿಗೆ ಭಾರೀ ಬಹುಮಾನ ಘೋಷಿಸಿದ BCCI.. ನೀರಜ್​ಗೆ 2 ಕೋಟಿ ಮೀಸಲಿಟ್ಟ ಪಂಜಾಬ್ ಸಿಎಂ

ಅವರ ಗೆಲುವಿನ ಸುದ್ದಿ ಸಿಗುತ್ತಿದ್ದಂತೆ ಚೆನ್ನೈ ಸೂಪರ್​ ಕಿಂಗ್ಸ್​ ತಂಡ ಈ ಬಹುಮಾನವನ್ನ ಘೋಷಣೆ ಮಾಡಿದೆ. ಇನ್ನು ಈ ಬಗ್ಗೆ ಮಾಹಿತಿ ನೀಡಿರುವ ಸಿಎಸ್​ಕೆ ವಕ್ತಾರ.. ಟೊಕಿಯೋ ಒಲಿಂಪಿಕ್​​ನಲ್ಲಿ ನೀಡಿರುವ ಪ್ರದರ್ಶನ ಲಕ್ಷಾಂತರ ಭಾರತೀಯರನ್ನು ಪ್ರೇರೇಪಿಸುತ್ತದೆ. ಈ ಮೂಲಕ ಯಾವುದೇ ಕ್ರೀಡೆಯಲ್ಲಿ ಸ್ಪರ್ಧಿಸಲು ಮತ್ತು ಶ್ರೇಷ್ಠತೆಯನ್ನ ಸಾಧಿಸಲು ಬಲವಾದ ನಂಬಿಕೆಯನ್ನು ಹುಟ್ಟುಹಾಕುವಂತೆ ಮಾಡಿದೆ. ನೀರಜ್ ಚೋಪ್ರಾ ಅವರ ಬಗ್ಗೆ ಭಾರತೀಯರಾದ ನಾವು ಹೆಮ್ಮೆ ಪಡುತ್ತೇವೆ. ಪುರುಷರ ಜಾವೆಲಿನ್​​ನಲ್ಲಿ ಅವರು ಗೆದ್ದಿರೋದು ನಮ್ಮ ರಾಷ್ಟ್ರವನ್ನ ಮತ್ತೆ ಹುರಿದುಂಬಿಸಿದೆ ಅಂತಾ ಹೇಳಿದ್ದಾರೆ.

ಇದನ್ನೂ ಓದಿ: ಫ್ಲೈಯಿಂಗ್ ಸಿಖ್ ಮಿಲ್ಖಾ ಸಿಂಗ್ ಕನಸು ನನಸು ಮಾಡಿದ ನೀರಜ್ ಚೋಪ್ರಾ

ಇದನ್ನೂ ಓದಿ: ‘ಏನೇ ತೊಂದ್ರೆ ಆದ್ರೂ ಆರ್ಮಿಯೇ ಸಹಾಯಕ್ಕೆ ಬೇಕು; ಈಗ ಚಿನ್ನದ ಪದಕ ತಂದಿದ್ದೂ ಆರ್ಮಿನೇ’

ಇದನ್ನೂ ಓದಿ: ನೀರಜ್​ ಚೋಪ್ರಾಗೆ XUV-700 ಕಾರ್ ಕೊಡಿ ಎಂದ ಅಭಿಮಾನಿ; ಕೊಟ್ಟೇ ಬಿಡ್ತೀನಿ ಎಂದ ಆನಂದ್​​​ ಮಹೀಂದ್ರಾ

Source: newsfirstlive.com Source link