ಖಾತೆ ಹಂಚಿಕೆಯಲ್ಲಿ ಅಸಮಾಧಾನ; ಕುಟುಂಬ ಸಮೇತ ಸಿಎಂ ಬೊಮ್ಮಾಯಿ ಭೇಟಿಯಾದ ಆನಂದ್ ಸಿಂಗ್

ಖಾತೆ ಹಂಚಿಕೆಯಲ್ಲಿ ಅಸಮಾಧಾನ; ಕುಟುಂಬ ಸಮೇತ ಸಿಎಂ ಬೊಮ್ಮಾಯಿ ಭೇಟಿಯಾದ ಆನಂದ್ ಸಿಂಗ್

ಬೆಂಗಳೂರು: ನಿನ್ನೆಯಷ್ಟೇ ಖಾತೆ ಹಂಚಿಕೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಸಚಿವ ಆನಂದ್ ಸಿಂಗ್ ಇಂದು ಬೆಳಗ್ಗೆ ಸಿಎಂ ಬಸವರಾಜ ಬೊಮ್ಮಾಯಿ‌ ನಿವಾಸಕ್ಕೆ ಆಗಮಿಸಿದ್ದರು. ವಿಶೇಷ ಅಂದ್ರೆ ಕುಟುಂಬ ಸಮೇತ ಮುಖ್ಯಮಂತ್ರಿಗಳನ್ನ ಭೇಟಿ ಮಾಡಿದ್ದಾರೆ.

ಆನಂದ್ ಸಿಂಗ್ ಅವರಿಗೆ ಬೊಮ್ಮಾಯಿ ಅವರು ಪರಿಸರ ಹಾಗು ಪ್ರವಾಸೋದ್ಯಮ ಇಲಾಖೆಯನ್ನ ನೀಡಿದ್ದಾರೆ. ತಾವು ನಿರೀಕ್ಷೆ ಮಾಡಿದ್ದ ಖಾತೆ ಸಿಗದಿರೋದಕ್ಕೆ ಆನಂದ್ ಸಿಂಗ್ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜೊತೆಗೆ ಖಾತೆ ಬದಲಿಸುವಂತೆ ಸಿಎಂ ಬಸವರಾಜ ಬೊಮ್ಮಾಯಿಗೆ ಮನವಿ ಮಾಡಿದ್ದಾರೆ. ಕೆಲ ಕಾಲ ಸಿಎಂ ಜೊತೆ ಚರ್ಚೆ ನಡೆಸಿದ ಆನಂದ್ ಸಿಂಗ್ ಮಾಧ್ಯಮಗಳ ಜೊತೆ ಯಾವುದೇ ಪ್ರತಿಕ್ರಿಯಿಸದೇ ಹೊರ ನಡೆದಿದ್ದಾರೆ.

ಇದನ್ನೂ ಓದಿ: ಉತ್ತಮ ಖಾತೆಗಾಗಿ ಮನವಿ ಮಾಡ್ತೇನೆ.. ಸಿಗದಿದ್ದರೆ ಮುಂದಿನ ನಿರ್ಧಾರ; ಆನಂದ್ ಸಿಂಗ್ ಅಸಮಾಧಾನ

blank

ಇನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಕೂಡ ಸಿಎಂ ನಿವಾಸಕ್ಕೆ ಆಗಮಿಸಿದ್ದಾರೆ. ಸುಧಾಕರ್ ಮಾತ್ರವಲ್ಲ ಬೊಮ್ಮಾಯಿ‌ ನಿವಾಸಕ್ಕೆ ಸತೀಶ್ ರೆಡ್ಡಿ ಕೂಡ ಆಗಮಿಸಿದ್ದಾರೆ. ಸತೀಶ್ ರೆಡ್ಡಿ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದಾರೆ.

ಇದನ್ನೂ ಓದಿ: ನಮ್ಮ ನಡುವೆಯೇ ಇದ್ದು ಬಾಂಬ್ ಹಾಕುವ ಕಾಲ ಮುಗಿದಿದೆ.. ಇದು ಮೋದಿಯವರ ಜಮಾನ -ಆರಗ ಜ್ಞಾನೇಂದ್ರ

Source: newsfirstlive.com Source link