ನೀರಜ್ ಚೋಪ್ರಾರ ‘ಚಿನ್ನದ ಗುರಿ’ಯ ರೋಚಕ ಕ್ಷಣಗಳು ಹೇಗಿದ್ದವು..?

ನೀರಜ್ ಚೋಪ್ರಾರ ‘ಚಿನ್ನದ ಗುರಿ’ಯ ರೋಚಕ ಕ್ಷಣಗಳು ಹೇಗಿದ್ದವು..?

ನಿನ್ನೆ ಭಾರತಕ್ಕೆ ಒಲಿಂಪಿಕ್ಸ್‌ ಇತಿಹಾಸದಲ್ಲಿ ಎಂದೂ ಮರೆಯಲಾಗದ ಐತಿಹಾಸಿಕ ದಿನ. ಅಂತಹವೊಂದು ಸುಮಧುರ ಕ್ಷಣವನ್ನು ನೀಡಿದವರು ಭಾರತದ ಸ್ಟಾರ್‌ ಜಾವೆಲಿನ್‌ ಎಸೆತಗಾರ ನೀರಜ್‌ ಚೋಪ್ರಾ. ನಿರೀಕ್ಷೆಯಂತೆಗೆ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದು ಭಾರತಕ್ಕೆ ಕೀರ್ತಿ ತಂದಿದ್ದಾರೆ.

blank

ಅದು, 2008 ಬೀಜಿಂಗ್‌ ಒಲಿಂಪಿಕ್ಸ್‌ ಸಮಯ. ಭಾರತ ಒಂದಾದ್ರೂ ಚಿನ್ನ ಗೆದ್ದೇ ಗೆಲ್ಲುತ್ತೆ ಅನ್ನುವ ವಿಶ್ವಾಸದಲ್ಲಿತ್ತು. ಶೂಟರ್‌ ಅಭಿನವ್‌ ಬಿಂದ್ರಾ 10 ಮೀಟರ್‌ ಏರ್‌ ರೈಫಲ್‌ ವಿಭಾಗದಲ್ಲಿ ಮೊದಲ ಸ್ಥಾನ ಪಡೆದು ಚಿನ್ನದ ಪದಕ ಗೆದ್ದರು. ಅದು ಒಲಿಂಪಿಕ್ಸ್‌ನ ವೈಯಕ್ತಿಕ ವಿಭಾಗದಲ್ಲಿ ಭಾರತಕ್ಕೆ ಸಿಕ್ಕ ಮೊದಲ ಚಿನ್ನದ ಪದಕವಾಗಿತ್ತು. ಅನಂತರ 2012 ಲಂಡನ್‌, 2016 ರಿಯೋದಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿಯೂ ಭಾರತಕ್ಕೆ ಚಿನ್ನದ ಪದಕವನ್ನು ನಿರೀಕ್ಷೆ ಮಾಡಲಾಗಿತ್ತು. ಆದ್ರೆ, ಅದು ಸಾಧ್ಯವಾಗಲಿಲ್ಲ. ಹಾಗಾದ್ರೆ ಭಾರತಕ್ಕೆ ಒಲಿಂಪಿಕ್ಸ್‌ನ ವೈಯಕ್ತಿಕ ವಿಭಾಗದಲ್ಲಿ ಚಿನ್ನ ಬರೋದು ಯಾವಾಗ ಅನ್ನೋ ಪ್ರಶ್ನೆ ಇತ್ತು. ಅಂತಹ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ. ನಮ್ಮ ಹೆಮ್ಮೆಯ ಭಾರತೀಯ ನೀಜರ್‌ ಚೋಪ್ರಾ ಆ ಸಾಧನೆ ಮಾಡಿದ್ದಾರೆ.

blank

ಇಂತಹವೊಂದು ಕ್ಷಣಕ್ಕಾಗಿ ಭಾರತ ಅದೆಷ್ಟೋ ವರ್ಷ ಕಾದಿತ್ತು. ದೂರದಿಂದ ಜಾವೆಲಿನ್‌ ಹಿಡಿದು ನೀರಜ್‌ ಚೋಪ್ರಾ ಓಡಿ ಬರ್ತಾರೆ. ಕೈಯಲ್ಲಿ ಇರುವ ಜಾವೆಲಿನ್‌ ಎಸೆಯಲು ತನ್ನೆಲ್ಲಾ ಸಾಮರ್ಥ್ಯವನ್ನು ಪ್ರಯೋಗಿಸುತ್ತಾರೆ. ಹಾಗೇ ಎಸೆದ ಜಾವೆಲಿನ್‌ ಬರೋಬರಿ 87.03 ಮೀಟರ್‌ ದೂರಹೋಗಿ ನೆಲಕ್ಕೆ ಕುಕ್ಕು ಹೊಡೆಯುತ್ತದೆ. ಇದೇ ನೋಡಿ ಟೋಕಿಯ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ತಂದ ಚಿನ್ನದ ಪದಕ.

ಮೊದಲ ಎಸೆತದಲ್ಲಿಯೇ 87.03 ಮೀಟರ್‌ ಸಾಧನೆ
ಗರಿಷ್ಠ ದೂರ ಎಸೆದು ಚಿನ್ನಕ್ಕೆ ಗುರಿ ಇಟ್ಟ ನೀರಜ್‌

blank
ನೀರಜ್‌ ಜೋಪ್ರಾ ವಿಶೇಷವೇ ಅಂತಹದ್ದು. ಪ್ರತಿ ಟೂರ್ನಿಯಲ್ಲಿಯೂ ಅಷ್ಟೇ, ಮೊದಲ ಅವಕಾಶದಲ್ಲಿಯೇ ಶ್ರೇಷ್ಠ ಪ್ರದರ್ಶನ ನೀಡುತ್ತಾರೆ. ಟೋಕಿಯೋ ಒಲಿಂಪಿಕ್ಸ್‌ನ ಗುಂಪು ಹಂತದಲ್ಲಿ ಮತ್ತು ಸೆಮಿಪೈನಲ್‌ಲ್ಲಿ ಕೂಡ ಮೊದಲ ಎಸೆದಲ್ಲಿಯೇ ಗರಿಷ್ಠ ದೂರ ಎಸೆಯುವ ಮೂಲಕ ಶ್ರೇಷ್ಠ ಸಾಧನೆ ಮಾಡಿದ್ದರು. ಆ ಮೂಲಕ ಫೈನಲ್‌ ಪ್ರವೇಶ ಮಾಡಿದ್ದರು. ನೀರಜ್‌ ಚೋಪ್ರಾ ಫೈನಲ್‌ ಪ್ರವೇಶಿಸಿದ್ದಾರೆ ಅಂತ ಗೊತ್ತಾದಾಗಲೇ ಭಾರತಕ್ಕೆ ಚಿನ್ನ ಬರಬಹುದು ಅನ್ನೋ ಭರವಸೆ ಮೂಡಿತ್ತು. ನಿರೀಕ್ಷೆಯಂತೆಯೇ ಫೈನಲ್‌ನ ಮೊದಲ ಸುತ್ತಿನಲ್ಲಿಯೇ 87.03 ಮೀಟರ್‌ ದೂರ ಎಸೆದು ಚಿನ್ನಕ್ಕೆ ಗುರಿ ಇಟ್ಟಿದ್ದರು.

ಎರಡನೇ ಎಸೆತದಲ್ಲಿ 87.58 ಮೀಟರ್‌ ದೂರ ಸಾಗಿದ ಜಾವೆಲಿನ್‌
ಮತ್ತಷ್ಟು ಶ್ರೇಷ್ಠ ಸಾಧನೆ ತೋರಿದ ನೀರಜ್‌ ಚೋಪ್ರಾ

ಒಂದನೇ ಸುತ್ತ ಅಂತ್ಯಗೊಂಡಾಗ ನೀರಜ್‌ ಚೋಪ್ರಾ ಎಸೆದ ದೂರವೇ ಗರಿಷ್ಠವಾಗಿತ್ತು. ಉಳಿದಂತೆ ಯಾವ ಆಟಗಾರರಿಗೂ ಕೂಡ ಅವರ ಹತ್ತಿರವೂ ಬರಲು ಸಾಧ್ಯವಾಗಿರಲಿಲ್ಲ. ಜರ್ಮನಿಯ ಆಟಗಾರನೊಬ್ಬ 85.30 ಮೀಟರ್‌ ದೂರ ಎಸೆದಿರುವುದು ಎರಡನೇ ಗರಿಷ್ಠ ದೂರವಾಗಿತ್ತು. ತಾನು ಮುಂದೆ ಇದ್ದೀನಿ ಅಂತ ಜೋಪ್ರಾ ಮೈಮರೆಯಲಿಲ್ಲ. ಎರಡನೇ ಸುತ್ತಿನಲ್ಲಿ ಮತ್ತಷ್ಟು ಶ್ರೇಷ್ಠ ಸಾಧನೆ ಮಾಡಬೇಕು. ಚಿನ್ನದ ಪದಕವನ್ನು ತೆಗೆದುಕೊಂಡು ಹೋಗಬೇಕು ಅನ್ನೋ ಅಸೆಯಲ್ಲಿಯೇ ಎರಡನೇ ಸುತ್ತಿನಲ್ಲಿ ಜಾವೆಲಿನ್‌ ಎಸೆಯಲು ಟ್ರ್ಯಾಕ್‌ಗೆ ಬರುತ್ತಾರೆ. ನಿರೀಕ್ಷೆಯಂತೆಯೇ ಬರೋಬ್ಬರಿ 87.58 ಮೀಟರ್‌ ಎಸೆದು ಶ್ರೇಷ್ಠ ಸಾಧನೆ ಮಾಡುತ್ತಾರೆ.

blank

ಮೂರನೇ ಸುತ್ತಿನಲ್ಲಿ ಅಲ್ಪ ಹಿನ್ನಡೆ
ನಾಲ್ಕು, ಐದನೇ ಸುತ್ತಿನಲ್ಲಿ ಪೋಲ್‌

ಹೌದು, ಮೊದಲನೇ ಮತ್ತು ಎರಡನೇ ಸುತ್ತಿನಲ್ಲಿ ನೀರಜ್‌ ಚೋಪ್ರಾ ಶ್ರೇಷ್ಠ ಸಾಧನೆ ಮಾಡಿದ್ದರು. ಉಳಿದ ಯಾವುದೇ ಆಟಗಾರರಿಗೆ ಅವರ ಸಮೀಪವೂ ಬರಲು ಸಾಧ್ಯವಾಗಿರಲಿಲ್ಲ. ಆದ್ರೆ, ಮೂರನೇ ಸುತ್ತಿನಲ್ಲಿ ನೀರಜ್‌ 76.79 ಮೀಟರ್‌ ದೂರ ಎಸೆದು ಸ್ವಲ್ಪ ಹಿನ್ನಡೆ ಅನುಭವಿಸಿದ್ದರು. ಅನಂತರ ನಡೆದ ನಾಲ್ಕು ಮತ್ತು 5ನೇ ಸುತ್ತಿನಲ್ಲಿ ಪೋಲ್‌ ಮಾಡುತ್ತಾರೆ. ಆದ್ರೆ, ಮೊದಲ ಎರಡು ಸುತ್ತಿನಲ್ಲಿ ಬರೋಬರಿ 87 ಮೀಟರ್‌ಗಿಂತ ದೂರ ಎಸೆದಿರುವುದರಿಂದ ಚಿಂತೆ ಇರಲಿಲ್ಲ. ಅಷ್ಟು ದೂರ ಬೆರೆಯವರು ಎಸೆಯಲಾರು ಅನ್ನೋ ಭರವಸೆ ಇತ್ತು. ಅನಂತರ ನಡೆದ 6ನೇ ಸುತ್ತಿನಲ್ಲಿ 84.24 ಮೀಟರ್‌ ದೂರ ಎಸೆದಿದ್ದರು. ಒಟ್ಟು ಏಳು ಸುತ್ತು ನಡೆದಿದೆ.

blank

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಬಂತು ಚಿನ್ನದ ಪದಕ
ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ನೀರಜ್‌ ಚೋಪ್ರಾ ಚಿನ್ನದ ಪದಕ ಗೆದ್ದೇ ಗೆಲ್ಲುತ್ತಾರೆ ಅನ್ನೋ ನಿರೀಕ್ಷೆ ಹುಟ್ಟುಹಾಕಿದ್ದರು. ಆದ್ರೆ, ಅಂತಿಮವಾಗಿ ಪಂದ್ಯ ಅಂತ್ಯಗೊಳ್ಳುವವರೆಗೂ ಏನನ್ನು ಹೋಳಲಾಗುವುದಲಿಲ್ಲ. ಅಂಕಣದಲ್ಲಿ ಯಾರು ಶ್ರೇಷ್ಠ ಪ್ರದರ್ಶನ ನೀಡುತ್ತಾರೋ ಅವರು ಚಿನ್ನದ ಪದಕವನ್ನು ಪಡೆಯುತ್ತಾರೆ. ನೀಜರ್‌ ಚೋಪ್ರಾ ಅಂಕಣದಲ್ಲಿ ಶ್ರೇಷ್ಠ ಪ್ರದರ್ಶನ ನೀಡುವ ಮೂಲಕ ನಿರೀಕ್ಷೆಯನ್ನು ಸುಳ್ಳಾಗಿಸಲಿಲ್ಲ. ಚಿನ್ನವನ್ನು ಗೆದ್ದು ಇಡೀ ಭಾರತಕ್ಕೆ ಹೆಮ್ಮೆ ತಂದಿದ್ದಾರೆ. ಇದು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಸಿಕ್ಕ ಮೊದಲ ಚಿನ್ನದ ಪದಕವಾಗಿದೆ. ಒಟ್ಟಾರೆಯಾಗಿ ಇದು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಬಂದ ಏಳನೇ ಪದಕವಾಗಿದೆ.

blank

ಪ್ರಸಕ್ತ ಒಲಿಂಪಿಕ್ಸ್‌ನಲ್ಲಿ ಭಾರತ 7 ಪದಕವನ್ನು ಪಡೆದಿದೆ. ಅದರಲ್ಲಿ ನೀರಜ್‌ ಚೋಪ್ರಾ ಚಿನ್ನದ ಪದಕ ಗೆದ್ದಿದ್ದರೆ, ಬಾಕ್ಸಿಂಗ್‌ನಲ್ಲಿ ಮೀರಾಭಾಯಿ ಚಾನು ಬೆಳ್ಳಿ, ಕುಸ್ತಿಯಲ್ಲಿ ರವಿಕುಮಾರ್‌ ದಾಹಿಯಾ ಬೆಳ್ಳಿ ಪದಕ ಗೆದ್ದಿದ್ದಾರೆ. ಉಳಿದಂತೆ ಬ್ಯಾಡ್ಮಿಂಟನ್‌ ಆಟಗಾರ್ತಿ ಪಿ.ವಿ.ಸಿಂಧು, ಬಾಕ್ಸರ್‌ ಲವ್ಲೀನಾ, ಕುಸ್ತಿ ಪಟು ಭಜರಂಗ್‌ ಪೂನಿಯಾ ಕಂಚಿನ ಪದಕ ಗೆದ್ದ್ದಿದ್ದಾರೆ. ಭಾರತದ ಪುರುಷರ ಹಾಕಿ ತಂಡ ಭರ್ಜರಿ ಪ್ರದರ್ಶನ ನೀಡುವ ಮೂಲಕ ಕಂಚಿನ ಪದಕ ಗೆದ್ದುಕೊಂಡಿದೆ.

blank

ಅಭಿನವ್‌ ಬಿಂದ್ರಾ ನಂತರ ಭಾರತಕ್ಕೆ ಚಿನ್ನ ತಂದ ನೀರಜ್‌
ಒಲಿಂಪಿಕ್ಸ್‌ನ ವೈಯಕ್ತಿಕ ವಿಭಾಗದಲ್ಲಿ ಭಾರತಕ್ಕೆ 2ನೇ ಚಿನ್ನ
ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದ ನೀರಜ್‌ ಚೋಪ್ರಾ

ಹೌದು, 2008ರಲ್ಲಿ ಶೂಟರ್‌ ಅಭಿನವ್‌ ಬಿಂದ್ರಾ ಚಿನ್ನದ ಪದಕ ಗೆದ್ದಿರೋದು ಐತಿಹಾಸಿಕ ಸಾಧನೆಯಾಗಿತ್ತು. ಅಲ್ಲಿಯವರೆಗೂ ಒಲಿಂಪಿಕ್ಸ್‌ನಲ್ಲಿ ನಡೆಯುವ ವೈಯಕ್ತಿಕ ವಿಭಾಗದ ಕ್ರೀಡೆಯಲ್ಲಿ ಭಾರತಕ್ಕೆ ಚಿನ್ನದ ಪದಕ ಬಂದಿರಲಿಲ್ಲ. ಆದ್ರೆ, ಅನಂತರ ನಡೆದ ಲಂಡನ್‌ ಒಲಿಂಪಿಕ್ಸ್‌ ಮತ್ತು ರಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಕಂಚು ಮತ್ತು ಬೆಳ್ಳಿಯ ಪದಕಗಳು ಬಂದಿದ್ದವು. ಆದ್ರೆ, ಚಿನ್ನದ ಪದಕ ಬಂದಿರಲಿಲ್ಲ. ಇದೀಗ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ನೀರಜ್‌ ಚೋಪ್ರಾ ಚಿನ್ನದ ಪದಕವನ್ನು ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಅಭಿನವ್‌ ಬಿಂದ್ರಾ ನಂತರ ಒಲಿಂಪಿಕ್ಸ್‌ ಇತಿಹಾಸದಲ್ಲಿ ಭಾರತದ ಪರ ಚಿನ್ನದ ಪದಕ ಗೆದ್ದ ಆಟಗಾರ ಎಂಬ ಹೆಗ್ಗಳಿಕೆ ಪಡೆದಿದ್ದಾರೆ.
ಪ್ರಧಾನಿ ಮೋದಿ ಸೇರಿದಂತೆ ಗಣ್ಯರಿಂದ ಅಭಿನಂದನೆ

blank

ನೀರಜ್‌ ಚೋಪ್ರಾ ಬಗ್ಗೆ ಟ್ವೀಟ್‌ ಮಾಡಿರೋ ಪ್ರಧಾನಿ ಮೋದಿ ಅವರು, ಟೋಕಿಯೊದಲ್ಲಿ ಇತಿಹಾಸವನ್ನು ನಿರ್ಮಾಣ ಮಾಡಲಾಗಿದೆ. ನೀರಜ್ ಚೋಪ್ರಾ ಇಂದು ಸಾಧಿಸಿದ್ದು ಶಾಶ್ವತವಾಗಿ ನೆನಪಿನಲ್ಲಿ ಉಳಿಯುತ್ತದೆ. ಯುವ ನೀರಜ್ ಅಸಾಧಾರಣವಾಗಿ ಉತ್ತಮವಾಗಿ ಆಡಿದ್ದಾರೆ. ಅವರು ಗಮನಾರ್ಹವಾದ ಉತ್ಸಾಹದಿಂದ ಆಡಿದರು ಮತ್ತು ಅಪ್ರತಿಮ ಕ್ರೀಡಾ ಮನೋಭಾವವನ್ನು ತೋರಿಸಿದರು. ಚಿನ್ನ ಗೆದ್ದಿರುವುದಕ್ಕೆ ಅಭಿನಂದನೆಗಳು ಎಂದು ತಿಳಿಸಿದ್ದಾರೆ. ಇನ್ನು ರಾಷ್ಟ್ರಪತಿ ಸೇರಿದಂತೆ ದೇಶದ ಗಣ್ಯಾತಿ ಗಣ್ಯರು ಚೋಪ್ರಾ ಸಾಧನೆಯನ್ನು ಹಾಡಿ ಹೊಗಲಿ, ಕೊಂಡಾಡಿದ್ದಾರೆ.

Source: newsfirstlive.com Source link