ದೇಶಕ್ಕೆ ಕೇರಳ ಕೊರೊನಾ ಆತಂಕ -ಈ ರಾಜ್ಯದಲ್ಲಿ ಯಾಕೆ ಸೋಂಕು ಕಮ್ಮಿ ಆಗ್ತಿಲ್ಲ..?

ದೇಶಕ್ಕೆ ಕೇರಳ ಕೊರೊನಾ ಆತಂಕ -ಈ ರಾಜ್ಯದಲ್ಲಿ ಯಾಕೆ ಸೋಂಕು ಕಮ್ಮಿ ಆಗ್ತಿಲ್ಲ..?

ದೇಶದಲ್ಲಿ ಕೊರೊನಾ ಮೂರನೇ ಅಲೆಯನ್ನು ತಡೆಯಲು ರಾಜ್ಯ ಸರ್ಕಾರಗಳು ತಯಾರಿ ನಡೆಸಿದ್ದು, ಎರಡನೇ ಅಲೆಯಲ್ಲಿ ನಿರೀಕ್ಷೆಗೂ ಮೀರಿ ಸಂಭವಿಸಿದ ಸಾವು ನೋವುಗಳನ್ನು ಮೂರನೇ ಅಲೆಯಲ್ಲಿ ತಡೆಯಲು ಸಿದ್ಧತೆಗಳನ್ನು ನಡೆಸಲಾಗಿದೆ. ಆದರೆ ದೇಶದಲ್ಲಿ ಸದ್ಯ ವರದಿಯಾಗುತ್ತಿರುವ ಒಟ್ಟು ಪ್ರಕರಣದಲ್ಲಿ 49.85 ಪ್ರಕರಣಗಳು ಕೇರಳ ರಾಜ್ಯವೊಂದರಲ್ಲೇ ವರದಿಯಾಗಿದೆ. ಕಳೆದ 7 ದಿನಗಳಿಂದ ಕೇರಳದಲ್ಲಿ ಸರಾಸರಿ 20 ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿಯಾಗುತ್ತಿದೆ.

blank

ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆ ನೀಡಿರುವ ಮಾಹಿತಿ ಅನ್ವಯ ದೇಶದ ಒಟ್ಟು ಪಾಸಿಟಿವ್ ಪ್ರಕರಣದಲ್ಲಿ ಶೇ.49.85 ಕೇಸ್​​ಗಳು ಕೇರಳವೊಂದರಲ್ಲೇ ವರದಿಯಾಗಿದೆ. ಕೇರಳದ 10 ಜಿಲ್ಲೆ, ಮಹಾರಾಷ್ಟ್ರದ 3, ಮಣಿಪುರದ 2, ಅರುಣಾಚಲ ಮೇಘಾಲಯ ಹಾಗೂ ಮಿಜೋರಾಂ ಜಿಲ್ಲೆಗಳ ಜಿಲ್ಲೆಗಳಲ್ಲಿ ಅತೀ ಹೆಚ್ಚು ಪ್ರಕರಣಗಳು ವರದಿಯಾಗುತ್ತಿದೆ. ಇದರಲ್ಲಿ ಕೇರಳದ 10 ಜಿಲ್ಲೆಗಳಲ್ಲಿ ದೇಶದ ಶೇ.40 ಪಾಸಿಟಿವ್​ ಪ್ರಕರಣಗಳು ಕಂಡು ಬಂದಿವೆ. ಅಗಸ್ಟ್​ 7ರ ಶನಿವಾರವೂ ಕೂಡ ಕೇರಳದಲ್ಲಿ 20,367 ಪಾಸಿಟಿವ್​ ಪ್ರಕರಣಗಳು ವರದಿಯಾಗಿದ್ದು, 139 ಮಂದಿ ಸಾವನ್ನಪ್ಪಿದ್ದಾರೆ. ಪಾಸಿಟಿವಿಟಿ ರೇಟ್​​ 13.35ಕ್ಕೆ ಏರಿಕೆಯಾಗಿದೆ.

ಕೇರಳದಲ್ಲಿ ಪಾಸಿಟಿವ್​ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಿಗೆ ಆತಂಕ ಹೆಚ್ಚಾಗುತ್ತಿದೆ. ಕೇರಳದಲ್ಲಿ ಮಾತ್ರ ಪಾಸಿಟಿವ್​ ಪ್ರಕರಣಗಳ ಸಂಖ್ಯೆ ಹೆಚ್ಚಾಗಲು ಕೇಂದ್ರ ಸರ್ಕಾರ ತಜ್ಞರ ಸಮಿತಿಯನ್ನು ಕೂಡ ಕೇರಳಕ್ಕೆ ಕಳುಹಿಸಿಕೊಟ್ಟಿತ್ತು. ಕೇರಳದ ಮಲ್ಲಪುರಂ ಜಿಲ್ಲೆಯಲ್ಲಿ ಪಾಸಿಟಿವಿ ರೇಟ್ ಶೇ.17.2 ರಷ್ಟು ವರದಿಯಾಗಿದೆ.

blank

ಕೇರಳದಲ್ಲಿ ಸೋಂಕಿನ ನಿಯಂತ್ರಣಕ್ಕೆ ಬಫರ್​ ಝೋನ್​​​​ಗಳನ್ನು ಹೆಚ್ಚಿಸುವ ಅಗತ್ಯವಿದೆ. ಅಲ್ಲದೇ ಸೋಂಕಿತರ ಸಂಪರ್ಕಿತರನ್ನು ಪತ್ತೆ ಮಾಡುವ ಕಾರ್ಯ ಆಗಬೇಕಿದೆ. ಸದ್ಯ ಕೊರೊನಾ ನಿಯಂತ್ರಣಕ್ಕೆ ಈಗ ವಿಧಿಸುವ ನಿರ್ಬಂಧಗಳನ್ನು ಮತ್ತಷ್ಟು ಕಠಿಣವಾಗಿ ಜಾರಿ ಮಾಡುವ ಅಗತ್ಯವಿದೆ. ಕೇರಳದಲ್ಲಿ ಸದ್ಯ ಸೋಂಕಿತ ಸಂಪರ್ಕಿತರ ಪತ್ತೆ ಪ್ರಮಾಣ 1:5 ರಷ್ಟಿದೆ. ಆದರೆ ಇದನ್ನೂ 1:20ಕ್ಕೆ ಹೆಚ್ಚಳ ಮಾಡಬೇಕಿದೆ. ಇದುವೇ ಸೋಂಕು ಪ್ರಮಾಣ ಹೆಚ್ಚಾಗಲು ಪ್ರಮುಖ ಕಾರಣವಾಗಿದೆ. ಹೋಮ್​ ಐಸೋಲೇಷನ್​ ವ್ಯವಸ್ಥೆ ಮತ್ತಷ್ಟು ಪರಿಣಾಮಕಾರಿಯಾಗಬೇಕಿದೆ ಎಂದು ಕೇಂದ್ರ ಸಮಿತಿ ಹೇಳಿದೆ.

ಒಟ್ಟಾರೆ, ಕೊರೊನಾ ನಿಯಮಗಳನ್ನು ಪಾಲನೆ ಮಾಡದಿರುವುದು. ಸಿಮೀತ ನಿರ್ಬಂಧಗಳನ್ನು ವಿಧಿಸಿದ್ದರು ಅವುಗಳನ್ನು ಜಾರಿ ಮಾಡಿರುವುದು. ಜನರು ಸರ್ಕಾರ ಮಾರ್ಗಸೂಚಿಯನ್ನು ಪಾಲನೆ ಮಾಡದೆ ನಿರ್ಲಕ್ಷ್ಯ ವಹಿಸುತ್ತಿರುವುದು. ಸೋಂಕಿತರ ಸಂಪರ್ಕಿತರನ್ನು ಪತ್ತೆ ಮಾಡಿ ಸೂಕ್ತ ಮುನ್ನೆಚ್ಚರಿಕೆ ಕೈಗೊಳ್ಳದಿರುವುದು ಸೇರಿದಂತೆ ಸೋಂಕಿತರಿಗೆ ಉತ್ತಮ ಚಿಕಿತ್ಸೆ ಲಭ್ಯವಿಲ್ಲದಿರುವುದು ಕೇರಳದಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗಲು ಕಾರಣಗಳಾಗಿದೆ ಎಂದು ತಜ್ಞರ ಪರಿಶೀಲನೆ ವೇಳೆ ಬೆಳಕಿಗೆ ಬಂದಿದೆ.

Source: newsfirstlive.com Source link