ಸಿಎಂ ನಿವಾಸ ಎದುರು ಅಚ್ಚರಿ ಬೇಡಿಕೆಯೊಂದಿಗೆ ಮಹಿಳೆಯ ಏಕಾಂಗಿ ಪ್ರತಿಭಟನೆ

ಸಿಎಂ ನಿವಾಸ ಎದುರು ಅಚ್ಚರಿ ಬೇಡಿಕೆಯೊಂದಿಗೆ ಮಹಿಳೆಯ ಏಕಾಂಗಿ ಪ್ರತಿಭಟನೆ

ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ ಅವರ ನಿವಾಸ ಎದುರು ಇಂದು ಮಹಿಳೆಯೊಬ್ಬರು ಏಕಾಂಗಿ ಪ್ರತಿಭಟನೆ ನಡೆಸಿ ಗಮನ ಸೆಳೆದಿದ್ದಾರೆ.

ಡಾ.ಗಿರಿಜಾ ಎಂಬವವರು ಪ್ರತಿಭಟನೆ ನಡೆಸಿದ್ದು, ಮಾಣಿಕ್ ಶಾ ಪರೇಡ್ ಮೈದಾನದ ನಿರೂಪಕರ ಬದಲಾವಣೆ ಮಾಡಲು ಈ ವೇಳೆ ಆಗ್ರಹಿಸಿದ್ದಾರೆ. ಪ್ರತಿ ಸರ್ಕಾರಿ ಕಾರ್ಯಕ್ರಮಕ್ಕೆ ಇಬ್ಬರೇ ನಿರೂಪಕರಿಗೆ ಅವಕಾಶ ನೀಡಲಾಗುತ್ತಿದೆ. ಆದರೆ ಕನ್ನಡದಲ್ಲಿ ಸಾಕಷ್ಟು ಉತ್ತಮವಾದ ನಿರೂಪಕರಿದ್ದಾರೆ. ಈಗಿದ್ದರೂ ಯಾವ ಕಲಾವಿದರಿಗೂ ಅವಕಾಶ ಸಿಗುತ್ತಿಲ್ಲ. ಇದೇ ರೀತಿ ಮುಂದುವರಿದರೆ ಕಲಾವಿದರು, ಸಾಹಿತಿಗಳು ಎಲ್ಲಿ ಹೋಗಬೇಕು. ಇಬ್ಬರಿಂದ ನಮಗೆ ಸಾಕಷ್ಟು ಅನ್ಯಾಯವಾಗಿದೆ. ಹೊಸ ಸರ್ಕಾರ ಬಂದಿದೆ, ಹೊಸಬರಿಗೆ ಅವಕಾಶ ನೀಡಿ ಎಂದು ಮಹಿಳೆ ಪ್ರತಿಭಟನೆ ವೇಳೆ ಕಣ್ಣೀರಿಟ್ಟಿದ್ದಾರೆ.

blank

ಅಕಾಶವಾಣಿ, ದೂರದರ್ಶನದಲ್ಲಿ ತಲಾ 20ಕ್ಕೂ ಹೆಚ್ಚು ನಿರೂಪಕರು ಹೆಚ್ಚಿದ್ದಾರೆ. ಕನ್ನಡ ಸಂಸ್ಕೃತಿ ಇಲಾಖೆಯಲ್ಲಿ ಸಾಕಷ್ಟು ನಿರೂಪಕರು ಇದ್ದಾರೆ. ಕಳೆದ 10-15 ವರ್ಷದಿಂದ ಇವರೇ ನಿರೂಪಣೆ ಮಾಡುತ್ತಿದ್ದಾರೆ. ಕೊರೊನಾ ಕಾರಣದಿಂದ ಈಗ ನಿರೂಪಕರಿಗೆ ಒಂದು ಅವಕಾಶ ಸಿಗೋದು ಕಷ್ಟ ಆಗಿದೆ. ಎಲ್ಲರಿಗೂ ಸಮ ಪಾಲು, ಸಮ ಬಾಳು ಎಂದು ಹೇಳುವ ಸರ್ಕಾರ ಯಾವ ಮನದಂಡದ ಮೇಲೆ ಇಬ್ಬರನ್ನೇ ನಿರೂಪಕರಾಗಿ ನೇಮಕ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.

ಈ ವೇಳೆ ಪ್ರತಿಭಟನೆ ಮಾಡುತ್ತಿದ್ದ ನಿರೂಪಕಿ ಗಿರಿಜಾ ಅವರ ಪ್ರತಿಭಟನೆಯನ್ನು ತಡೆದ ಪೊಲೀಸರು ಅವರನ್ನು ವಶಕ್ಕೆ ಪಡೆದರು. ಸರ್ಕಾರ ಬದಲಾಗುತ್ತೆ? ಸಚಿವರು ಬದಲಾಗುತ್ತಾರೆ! ನಿರೂಪಕರು ಯಾಕೆ ಬದಲಾಗಲ್ಲ? ಎಂದು ನಿರೂಪಕಿ ಗಿರಿಜಾ ಪ್ರಶ್ನೆ ಮಾಡಿದ್ದಾರೆ.

blank

Source: newsfirstlive.com Source link