ಹಬ್ಬದ ದಿನದಂದೇ ಎಣ್ಣೆ ಪ್ರಿಯರಿಗೆ ಕಿಕ್ ಹತ್ತಿಸಲಿದ್ದಾರೆ ಮಂಗ್ಲಿ

ಹಬ್ಬದ ದಿನದಂದೇ ಎಣ್ಣೆ ಪ್ರಿಯರಿಗೆ ಕಿಕ್ ಹತ್ತಿಸಲಿದ್ದಾರೆ ಮಂಗ್ಲಿ

ಜೋಗಿ ಪ್ರೇಮ್ ಅಡ್ಡದಲ್ಲಿ ಜನ್ಯ ಮ್ಯೂಸಿಕ್​ಗೆ ಗಾಯಕಿ ಮಂಗ್ಲಿ ಕಿಕ್​ ಕೊಟ್ಟಿದ್ರು. ಏಕ್​ ಲವ್​ಯಾನ ಎಣ್ಣೆ ಹಾಡಿಗೆ ಮಂಗ್ಲಿ ದನಿಯಾದಗಿಂದ ಯಾವಗಪ್ಪ ಈ ಹಾಡನ್ನ ಕೇಳ್ತಿವೋ ಅಂತ ಚಿತ್ರಪ್ರೇಮಿಗಳು ಕಾಯ್ತಿದ್ದರು. ಈಗ ಆ ಹಾಡನ್ನು ಕೇಳಿ ಆನಂದಿಸುವ ಶುಭಗಳಿಗೆ ಸಂಗೀತ ಪ್ರಿಯರಿಗೆ ಸಿಕ್ಕಿದೆ.

ಸತ್ಯವತಿ ಮಂಗ್ಲಿ.. ಈಕೆಯ ಮಾತು ಅಂದ.. ಈಕೆಯ ಹಾಡು ಅಂದ್ರೆ ಚೆಂದ.. ಆಂಧ್ರ , ತೆಲಂಗಾಣ ಜನ ಈಗಾಗಲೇ ಮಂಗ್ಲಿ ಗಾಯನಕ್ಕೆ ಫಿದಾ ಆಗಿದ್ದಾರೆ.. ಈಗ ಮಂಗ್ಲಿ ಕನ್ನಡದ ಹಾಡನ್ನು ಆನಂದಿಸೋ ಸಮಯ ಕನ್ನಡಿಗರಿಗೂ ಸಿಕ್ಕದೆ. ಜಾನಪದ ಸೋಗಡಿದೆ, ಆ ಸೋಗಡಿನ ಧ್ವನಿಯನ್ನ ಕೇಳಿದ ಪ್ರತಿಯೊಬ್ಬರಿಗೆ ಈಕೆ ನಮ್ಮೂರ ಗಾಯಕಿ ಎಂದು ಒಪ್ಪಿಕೊಳ್ಳೋ ಕ್ರೇಜ್ ಉದ್ಭವಾಗಿದೆ.

blank

ರಾಬರ್ಟ್​ ತೆಲುಗು ವರ್ಸನ್​ನಲ್ಲಿ ಗಾಯಕಿ ಮಂಗ್ಲಿ ಹಾಡಿರುವ ಕಣ್ಣೇ ಅದರಿಂದಿ ಹಾಡು ಇಂದಿಗೂ ಸನಿ ರಸಿಕರ ಕಾಡ್ತಿದೆ.. ಈ ಕಿಕ್​ನಿಂದ ಪ್ರೇಕ್ಷಕ ಪ್ರಭುಗಳು ಆಚೆ ಬರೋಕು ಮುಂಚೇನೆ ಮತ್ತೆ ಮತ್ತೇರಿಸೋಕೆ ಸಿಂಗರ್​ ಮಂಗ್ಲಿ ರೇಡಿಯಾಗಿದ್ದಾರೆ.. ರಾಬರ್ಟ್​ ತೆಲುಗು ಹಾಡಿನ ನಂತ್ರ ಮಂಗ್ಲಿ ಜನ್ಯ ಅವರ ಜೊತೆ ಗೂಡಿ ಏಕ್​ ಲವ್ ಯಾ ಚಿತ್ರದಲ್ಲಿ ಎಣ್ಣೆ ಸಾಗ್ ಹಾಡಿದ್ದಾರೆ. ಈಗ ಈ ಹಾಡನ್ನು ಕೇಳುವ ಸಮಯಕ್ಕೆ ಮುಹೂರ್ತ ಫಿಕ್ಸ್​​ ಮಾಡಿದ್ದಾರೆ ನಿರ್ದೇಶಕ ಪ್ರೇಮ್​.

blank

ನಿರ್ದೇಶಕ ಪ್ರೇಮ್ ಏಕ್​ ಲವ್ ಯಾ ಗಾಗಿ ಮಂಗ್ಲಿ ಕಂಠದಲ್ಲಿ ಹಾಡೊಂದನ್ನ ಹಾಡಿಸಿದ್ದಾರೆ. ಪ್ರೇಮ್​ ಬಳಗವೇ ಹೇಳಿರುವಂತೆ ಎಣ್ಣೆ ಸಾಂಗ್ ಒಂದನ್ನ ಹಾಡಿ ಮಂಗ್ಲಿ ಕಿಕ್​ ಏರಿಸಿ ಹೋಗಿದ್ರು. ಈಗ ಈ ಹಾಡನ್ನು ವರಮಹಾಲಕ್ಷ್ಮಿ ಹಬ್ಬಕ್ಕೆ ಚಿತ್ರಪ್ರೇಮಿಗಳಿಗೆ ಒಪ್ಪಿಸಲು ಸಖಲ ಸಿದ್ಧತೆ ಮಾಡಿಕೊಳ್ತಿದ್ದಾರಂತೆ. ಈಗಾಗಲೇ ಏಕ್​ ಲವ್​ಯಾ ಚಿತ್ರದ 2 ಹಾಡುಗಳ ಬಿಡುಗಡೆ ಮಾಡಿರುವ ಪ್ರೇಮ್ .. ಈಗ ಮಂಗ್ಲಿ ಹಾಡಿರುವ ಹಾಡನ್ನು ಹಬ್ಬಕ್ಕೆ ಉಡುಗೊರೆ ನೀಡಲು ಸಜ್ಜಾಗಿದ್ದಾರಂತೆ. ಇನ್ನು ಈ ವಿಷ್ಯವನ್ನು ಏಕ್​ ಲವ್​ಯಾ ಸಂಗೀತ ನಿರ್ದೇಶಕರೇ ಹೇಳಿದ್ದಾರೆ.

ಒಟ್ಟಿನಲ್ಲಿ ಸತ್ಯವತಿ ಮಂಗ್ಲಿ ಮೇನಿಯಾ ಟಾಲಿವುಡ್​​ ನಿಂದ ಸ್ಯಾಂಡಲ್​ವುಡ್​ಗೆ ಭರ್ಜರಿಯಾಗಿ ಮುಂದುವರೆಯುತ್ತಿದ್ದು, ಕಣ್ಣೆ ಅದಿರಿಂದಿ ಹಾಡಿನಂತೆ ಏಕ್​ ಲವ್ ಯಾನ ಎಣ್ಣೆ ಹಾಡು ಮೋಡಿ ಮಾಡುತ್ತ ಕಾದು ನೋಡ ಬೇಕು.

Source: newsfirstlive.com Source link