ಪುರಾತನ ಕಾಲದ ಗುಹೆ, ಪೂಜಾ ಸಾಮಗ್ರಿಗಳು ಪತ್ತೆ

ಬೆಂಗಳೂರು/ನೆಲಮಂಗಲ: ಜಮೀನಿನಲ್ಲಿ ಜೆಸಿಬಿ ಯಂತ್ರದ ಮೂಲಕ ಕಾಲುವೆ ಕೆಲಸ ಮಾಡುವ ವೇಳೆ ಚಾಲಕನಿಗೆ ಹಾಗೂ ಸ್ಥಳೀಯ ಜನರಿಗೆ ವಿಸ್ಮಯಕಾರಿಯ ಗುಹೆ ಪತ್ತೆಯಾಗಿ ಜನರಲ್ಲಿ ಅಚ್ಚರಿಗೆ ಕಾರಣವಾಗಿದೆ.

ಬೆಂಗಳೂರು ಹೊರವಲಯ ಸೋಲೂರು ಸಮೀಪದ ಕುದೂರಿನ ಮಕ್ಕಳ ದೇವರ ಮಠದ ಜಮೀನಿನಲ್ಲಿ ಈ ವಸ್ತುಗಳು ಪತ್ತೆಯಾಗಿವೆ. ಪುರಾತನ ಕಾಲದ ಗುಹೆ ಹಾಗೂ ಆ ಗುಹೆಯ ಒಳ ಭಾಗದಲ್ಲಿ ಪೂಜಾ ಸಾಮಗ್ರಿಗಳು, ಮಣ್ಣಿನ ಮಡಿಕೆಗಳು ಪತ್ತೆಯಾಗಿವೆ. ಮಣ್ಣಿನ ಮಡಿಕೆಯ ಮೇಲೆ ಬಸವಯ್ಯ ಮಕ್ಕಳ ಕೊಡುಗೆ ಎಂಬ ಬರಹಕೂಡ ಕಂಡುಬಂದಿದೆ.

ಪವಾಡವೆಂಬಂತೆ ಅಲ್ಲಿ ಸಿಕ್ಕ ದೀಪಗಳು ಎಣ್ಣೆ ಮತ್ತು ಬತ್ತಿ ಇಲ್ಲದೆ ಉರಿಯುತ್ತಿತ್ತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿಕೆ ಹೇಳಿದ್ದು, ಈ ಅಪರೂಪದ ವಸ್ತುಗಳ ಆಕರ್ಷಣೆಯ ಕೇಂದ್ರವಾಗಿ ಸ್ಥಳೀಯ ಜನರಲ್ಲಿ ಕುತೂಹಲ ಮೂಡಿಸಿದೆ. ಈ ವಿಷಯ ತಿಳಿಯತ್ತಿದ್ದಂತೆ ಗ್ರಾಮಸ್ಥರು ಪತ್ತೆಯಾದ ವಸ್ತುಗಳನ್ನು ನೋಡಲು ದೌಡಾಯಿಸುತ್ತಿದ್ದಾರೆ. ಇದನ್ನೂ ಓದಿ: ಕೊರೊನಾ 3ನೇ ಅಲೆ ಭೀತಿ – ಆರತಿ ಉಕ್ಕಡ, ಮಹದೇಶ್ವರ ಬೆಟ್ಟಕ್ಕೆ ಭಕ್ತರ ನಿಷೇಧ

Source: publictv.in Source link