ಹಾಫ್​ ಸೆಂಚೂರಿ ಸಂಭ್ರಮದಲ್ಲಿ ಎಸ್.ನಾರಾಯಣ್; ‘5D’ ಚಿತ್ರದ ಗುಟ್ಟು ತಿಳಿಸಿದ ಕಲಾ ಸಾಮ್ರಾಟ್

ಹಾಫ್​ ಸೆಂಚೂರಿ ಸಂಭ್ರಮದಲ್ಲಿ ಎಸ್.ನಾರಾಯಣ್; ‘5D’ ಚಿತ್ರದ ಗುಟ್ಟು ತಿಳಿಸಿದ ಕಲಾ ಸಾಮ್ರಾಟ್

ಕಲಾ ಸಮ್ರಾಟ್​ ಎಸ್​ ನಾರಾಯಣ್​ ಹಾಫ್​ ಸೆಂಚೂರಿ ಬಾರಿಸಿದ್ದಾರೆ. ಅರೆರೆ. ಎಸ್.ನಾರಾಯಣ್ ಸಿನಿಮಾ ಬಿಟ್ಟು ಕ್ರಿಕೆಟ್ ಆಡೊಕೆ ಶುರು ಮಾಡಿದ್ರ ಅನ್ಕೋ ಬೇಡಿ. ಯಾಕಂದ್ರೆ ಕಲಾ ಸಾಮ್ರಾಟ್ ಹಾಫ್​ ಸೆಂಚೂರಿ ಬಾರಿಸಿರೋದು ಕ್ರಿಕೆಟ್​ನಲ್ಲಿ ಅಲ್ಲ ತಮ್ಮ ಸಿನಿ ಜೀವನದಲ್ಲಿ. ಎಸ್.ನಾರಾಯಣ್​ 5 ಡಿ ಚಿತ್ರದ ಮೂಲಕ 50ನೇ ಚಿತ್ರಕ್ಕೆ ನಿರ್ದೆಶನ ಮಾಡಿದ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ಅಲ್ಲದೆ ಸದ್ದಿಲ್ಲದೆ 50ನೇ ಚಿತ್ರಕ್ಕೆ ಸಿದ್ಧರಾಗಿದ್ದಾರೆ.

ಸಿನಿಮಾರಂಗಕ್ಕೆ ಎಂಟ್ರಿಕೊಟ್ಟು 50 ಸಿನಿಮಾಗಳಲನ್ನು ನಿರ್ದೇಶನ ಮಾಡುವುದು ಸಾಮಾನ್ಯದ ವಿಷವೇನೂ ಅಲ್ಲ. ಈ ಸಾಧನೆಯನ್ನು ಮಾಡಿದ ಕನ್ನಡದ ಕೆಲ ನಿರ್ದೇಶಕರಲ್ಲಿ ಕಲಾ ಸಾಮ್ರಾಟ್​ ಎಸ್.ನಾರಾಯಣ್​ ಕೂಡ ಒಬ್ಬರು. ಕನ್ನಡದ ಹಿರಿಯ ಕಲಾವಿದರ ಜೊತೆ ತಮ್ಮ ನಿರ್ದೇಶನದ ತಾಖತ್​ತನ್ನು ಪ್ರೂ ಮಾಡಿಕೊಂಡಿರುವ ಎಸ್​ ನಾರಾಯಣ್​ ಸಾಕಷ್ಟು ಯಶಸ್ವಿ ಸಿನಿಮಾಗಳನ್ನು ಕೊಟ್ಟು ಗೆದ್ದಿದ್ದಾರೆ.

blank

ಆದಿತ್ಯ ಅಭಿನಯದ ಬಹುನಿರೀಕ್ಷಿತ 25 ನೇ ಚಿತ್ರ 5ಡಿ
ಕಳೆದ 4 ವರ್ಷಗಳಿಂದ ವನವಾಸದಲ್ಲಿದ್ದ ಎಸ್​.ನಾರಾಯಣ್​ 5ಡಿ ಚಿತ್ರ ಮೂಲಕ ಮತ್ತೆ ಎದ್ದು ನಿಂತಿದ್ದಾರೆ. ಇನ್ನೇನು ನಾರಾಯಣ್​ ಕತೆ ಮುಗಿತು ಅಂತ ಕಾಲು ಎಳಿಯೋರ ಮಧ್ಯೆ, ಸೈಲೆಂಟ್​ ಆಗಿ ತಮ್ಮ ನಿರ್ದೇಶನದ 50 ಚಿತ್ರ 5ಡಿ ಸಿನಿಮಾ ಶೂಟಿಂಗ್​ ಮುಗಿಸಿ ಕುಂಬಳಕಾಯಿ ಹೊಡಿದಿದ್ದಾರೆ. ಅಲ್ಲದೆ ಆ ಖುಷಿಯನ್ನು ತಮ್ಮ ತಂಡದ ಜೊತೆ ಮಾಧ್ಯಮಗಳ ಮುಂದೆ ಹಂಚಿಕೊಂಡಿದ್ದಾರೆ.

ಸಾಕಷ್ಟು ಸವಾಲುಗಳ ನಂತರ 5ಡಿ ಸಿನಿಮಾದ ಕಥೆಯನ್ನು ರೆಡಿ ಮಾಡ್ಕೊಂಡು ಅಖಾಡಕಿಳಿದ ಎಸ್.ನಾರಾಯಣ್​ ಅವರಿಗೆ ಒಂದು ಹೊಸ ಅನುಭವದ ಜೊತೆಗೆ ಅವಮಾನದ ದರ್ಶನವೂ ಆಗಿದೆ. ಇನ್ನು ಆ ನೋವನ್ನು ಹಿರಿಯ ನಿರ್ದೇಶಕ ಎಸ್​ ನಾರಾಯಣ್​ ನಗುತ್ತಲೇ ಹೇಳಿಕೊಂಡಿದ್ದಾರೆ.

ಇದಿಷ್ಟೇ ಅಲ್ಲಾ 5ಡಿ ಚಿತ್ರದ ಮತ್ತೋಂದು ವಿಶೇಷ ಅಂದ್ರೆ 5ಡಿ ಸಿನಿಮಾ ಎಸ್​ ನಾರಾಯಣ್​ರ 50ನೇ ನಿರ್ದೇಶನ ದ ಸಿನಿಮಾ ಆದ್ರೆ .. ನಾಯಕ ನಟ ಡೆಡ್ಲಿ ಆದಿತ್ಯ ಅಭಿನಯದ 25 ನೇ ಸಿನಿಮಾ 5ಡಿ. ಹೀಗಾಗೀ ನಾಯಕ ಹಾಗು ನಿರ್ದೇಶಕರಿಗೆ 5ಡಿ ಸಿನಿಮಾ ಬಹಳ ಮೂಖ್ಯವಾಗಿದೆ. ಇನ್ನೂ ಅದಿತ್ಯಾಗೆ ನಾಯಕಿಯಾಗಿ ಅದಿತಿ ಪ್ರಭುದೇವ ಕಾಣಿಸಿಕೊಂಡಿದ್ದಾರೆ.. ಸದ್ಯಶೂಟಿಂಗ್​ ಮುಗಿಸಿ ಪೋಸ್ಟ್ ಪ್ರೊಡಕ್ಷನ್​ ಕೆಲಸದಲ್ಲಿರುವ 5ಡಿ ಬಳಗ ಅದಷ್ಟು ಬೇಗ ಎಲ್ಲಾ ಕೆಲಸ ಮುಗಿಸಿ ಈ ವರ್ಷವೇ 5ಡಿ ಮೂಲಕ ಮೋಡಿ ಮಾಡೋಕೆ ತಯಾರಿಯಲ್ಲಿದೆ.

Source: newsfirstlive.com Source link