ರಾಜೀನಾಮೆ ನೀಡಿ ಶಾಸಕನಾಗಿ ಉಳಿಯುವ ಬಗ್ಗೆ ಸಿಎಂಗೆ ಹೇಳಿರುವೆ -ಆನಂದ್ ಸಿಂಗ್

ರಾಜೀನಾಮೆ ನೀಡಿ ಶಾಸಕನಾಗಿ ಉಳಿಯುವ ಬಗ್ಗೆ ಸಿಎಂಗೆ ಹೇಳಿರುವೆ -ಆನಂದ್ ಸಿಂಗ್

ಬೆಂಗಳೂರು: ಖಾತೆ ಹಂಚಿಕೆ ಬೆನ್ನಲ್ಲೆ ಅಸಮಾಧಾನ ಹೊರಹಾಕಿದ್ದ ಸಚಿವ ಆನಂದ ಸಿಂಗ್ ಅವರು ಇಂದು ಸಿಎಂ ಬೊಮ್ಮಾಯಿ ಅವರನ್ನ ಭೇಟಿ ಮಾಡಿದ್ದರು.

ಇದೀಗ ನ್ಯೂಸ್​ಫಸ್ಟ್​ ಜೊತೆ ಮಾತನಾಡಿರುವ ಆನಂದ್ ಸಿಂಗ್.. ನನ್ನ ನಿರ್ಧಾರಗಳ ಬಗ್ಗೆ ಸಿಎಂ ಮುಂದೆ ಹೇಳಿಕೊಂಡಿದ್ದೇನೆ. ನನ್ನ ವಿಚಾರ, ನಡೆ, ತೀರ್ಮಾನದ ಕುರಿತು ಮುಖ್ಯಮಂತ್ರಿಗಳ ಬಗ್ಗೆ ಹೇಳಿದ್ದೇನೆ. ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡದಂತೆ ಸಿಎಂ‌ ಬೊಮ್ಮಾಯಿ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: ಉತ್ತಮ ಖಾತೆಗಾಗಿ ಮನವಿ ಮಾಡ್ತೇನೆ.. ಸಿಗದಿದ್ದರೆ ಮುಂದಿನ ನಿರ್ಧಾರ; ಆನಂದ್ ಸಿಂಗ್ ಅಸಮಾಧಾನ

ಯಾವುದೇ ವಿಚಾರವನ್ನ ಬಹಿರಂಗ ಪಡಿಸದಂತೆ ತಿಳಿಸಿದ್ದಾರೆ. ಆನಂದ ಸಿಂಗ್ ಅವರಿಗೆ ಖಾತೆ ಬಗ್ಗೆ ಮಾಹಿತಿ ಬೇಕಿದ್ದರೆ ಸಿಎಂ ಬಳಿ ಕೇಳಿ. ಮುಂದಿನ ನಿರ್ಧಾರದ ಬಗ್ಗೆ ಸಿಎಂಗೆ ತಿಳಿಸಿರುವೆ. ಸಚಿವ ಸ್ಥಾನದ ಬಗ್ಗೆ ರಾಜೀನಾಮೆ ನೀಡಿ ಶಾಸಕನಾಗಿ ಉಳಿಯುವ ಬಗ್ಗೆಯೂ ಅವರ ಮುಂದೆ ಹೇಳಿರುವೆ. ಎಲ್ಲವನ್ನೂ ಕಾದು ನೋಡಬೇಕು ಎಂದು ಆನಂದ್ ಸಿಂಗ್ ತಿಳಿಸಿದ್ದಾರೆ.

ಇದನ್ನೂ ಓದಿ: ಮುಗಿಯದ ಖಾತೆ ಕ್ಯಾತೆ; ಕುಟುಂಬ ಸಮೇತ ಸಿಎಂ ಬೊಮ್ಮಾಯಿ ಭೇಟಿಯಾದ ಆನಂದ್ ಸಿಂಗ್

Source: newsfirstlive.com Source link