ಕನ್ನಡ ಬಿಗ್​ ಬಾಸ್​ ಇತಿಹಾಸದಲ್ಲಿಯೇ ಮೊದಲ ಬಾರಿ ಸ್ಪರ್ಧಿಗಳ ವೋಟ್​ ರಿವೀಲ್

ಕನ್ನಡ ಬಿಗ್​ ಬಾಸ್​ ಇತಿಹಾಸದಲ್ಲಿಯೇ ಮೊದಲ ಬಾರಿ ಸ್ಪರ್ಧಿಗಳ ವೋಟ್​ ರಿವೀಲ್

ಬಿಗ್​ ಬಾಸ್ ಸೀಸನ್​ 8 ​ ಕೊನೆ ಹಂತ ತಲುಪಿದ್ದು, ಟಾಪ್​ ಫೈ ಇದ್ದ ಕಂಟೆಸ್ಟಂಟ್ಸ್​ ಈಗ ಟಾಪ್​ ಥ್ರೀಗೆ ಬಂದಿದ್ದಾರೆ. ಹೌದು, ಆಟ ಅಂದ್ಮೇಲೆ ಗೆಲವು ಒಬ್ಬರಿಗೆ ಸೀಮಿತ.. ಬಿಗ್​ ಬಾಸ್​ ಇತಿಹಾಸದಲ್ಲಿಯೇ 120 ದಿನಗಳನ್ನ ಪೂರೈಸಿದ ಹೆಗ್ಗಳಿಕೆಗೆ ಮಂಜು, ವೈಷ್ಣವಿ, ಅರವಿಂದ, ದಿವ್ಯಾ ಉರುಡುಗ, ಪ್ರಶಾಂತ್​ ಎಲ್ಲ ಐದು ಜನ ಪಾತ್ರವಾಗಿದ್ದಾರೆ.

ಇದನ್ನೂ ಓದಿ: ಹಾಫ್​ ಸೆಂಚೂರಿ ಸಂಭ್ರಮದಲ್ಲಿ ಎಸ್.ನಾರಾಯಣ್; ‘5D’ ಚಿತ್ರದ ಗುಟ್ಟು ತಿಳಿಸಿದ ಕಲಾ ಸಾಮ್ರಾಟ್

blank

ಇನ್ನೊಂದು ಮೈಲುಗಲ್ಲಿಗೆ ಸಾಕ್ಷಿಯಾಗಿದೆ ಬಿಗ್​ ಬಾಸ್​ ಸೀಸನ್​ 8.. ಅದೆನಂದ್ರೆ ಇದೇ ಮೊದಲ ಬಾರಿಗೆ ಕಂಟೆಸ್ಟೆಂಟ್ಸ್ ಪಡೆದ ವೊಟ್​ಗಳನ್ನ ರೀವಿಲ್​ ಮಾಡಿದ್ದಾರೆ ಕಿಚ್ಚಾ ಸುದೀಪ್​​. ಹೌದು, ಎಲಿಮಿನೇಟ್​ ಆದ ಸ್ಪರ್ಧಿಗಳು ಎಷ್ಟು ವೊಟ್​ ಪಡೆದ್ರು ಅಂತಾ ಮೊದಲು ಹೇಳಿ ನಂತರ ಎಲಿಮಿನೇಶನ್​ ಪ್ರಕ್ರಿಯೆಯೆ ಆಗಿದ್ದು, ಇಷ್ಟು ಸೀಸನ್​ಗಳಲ್ಲಿ ಇದೇ ಮೊದಲ ಬಾರಿಗೆ ವೊಟ್ಸ್​ನ್ನ ಹೇಳಲಾಗಿದೆ.

ಇದನ್ನೂ ಓದಿ: ಲ್ಯಾಗ್​ ಮಂಜು ಆಸೆ ಈಡೇರಿಸಿದ ಶಿವಣ್ಣ.. ಬಿಗ್​ಬಾಸ್ ಸ್ಪರ್ಧಿಗಳಿಗೆ ಸ್ಪೆಷಲ್ ವಿಶ್

ಇನ್ನೂ ಮೊದಲು ಮನೆಯಿಂದ ಹೊರ ಬಂದವರು ಪ್ರಶಾಂತ್​ ಸಂಬರಗಿ.. ಸಾಕಷ್ಟು ಬಾರಿ ಎಲಿಮಿನೇಷನ್​ ಹಂತಕ್ಕೆ ಹೋಗಿ, ಕೂದಲ ಎಳೆಯಲ್ಲಿ ಪರಾಗಿದ್ದರು ಪ್ರಶಾಂತ್​.. ಆದರೆ ಈ ಬಾರಿ 6,69,020 ವೋಟ್​ ಪಡೆದ್ರು ಕೂಡ ಲಕ್​ ಅವರ ಕೈ ಹಿಡಿಯಲಿಲ್ಲ.

blank

ಬಿಗ್​ ಬಾಸ್​ ಮನೆಯಲ್ಲಿ ಲೆಕ್ಕಾಚಾರಗಳು, ಊಹೆಗಳು ನಡೆಯಲ್ಲ ಅನ್ನೋದು ಮತ್ತೆ ಪ್ರೂವ್​ ಆಗಿದ್ದು, ಟಾಪ್​ ಫೂರ್​ ಹಂತದಲ್ಲಿ ವೈಷ್ಣವಿ ಗೌಡ ಬಿಗ್​ ಮನೆಯಿಂದ ಹೊರ ಬಂದಿದ್ದಾರೆ.. ವೈಷ್ಣವಿಗೆ ಮೊದಲ ಇನ್ನಿಂಗ್ಸ್​ ಎಫೆಕ್ಟ್​ ಆಯ್ತು ಅನ್ಸುತ್ತೆ. ಇಲ್ಲಿ ಇನ್ನೊಂದು ಗಮನಿಸಬೇಕಾದ ವಿಷ್ಯ ಅಂದ್ರೆ ಅವರು ಪಡೆದ ವೊಟ್..​ 10,21,831 ವೊಟ್ ಪಡೆದಿದ್ದಾರೆ ವೈಷ್ಣವಿ.

ಬಿಗ್​ ಮನೆಯ ಟಾಪ್​ ಥ್ರೀ ಕಂಟೆಸ್ಟೆಂಟ್ಸ್ ಮಂಜು ಪಾವಗಡ, ಅರವಿಂದ್​ ಕೆ.ಪಿ, ದಿವ್ಯಾ ಉರುಡುಗ, ಇನ್ನೂ ಆಟ ಮುಗಿದಿಲ್ಲ. ಕಾಂಪೀಟೆಷನ್​ ಸಾಕಷ್ಟು ಟಫ್​ ಆಗಿದ್ದು, ಗೆಲುವಿನ ನಗು ಬೀರಲಿರುವವರು ಯಾರು ಎಂಬ ಕೂತಹಲ ಮೂಡಿಸಿದೆ.

ಇದನ್ನೂ ಓದಿ: ಸಂಬರಗಿ, ವೈಷ್ಣವಿ ಔಟ್​ -ಉಳಿದ ಮೂವರಲ್ಲಿ ಗೆಲುವು ಯಾರ ಮುಡಿಗೆ?

Source: newsfirstlive.com Source link