ನಮ್ಮೆಲ್ಲರ, ಇಂದಿರಾಗಾಂಧಿಯವ್ರ ತಾಯಿ ಅನ್ನಪೂರ್ಣೇಶ್ವರಿ.. ಹೆಸರು ಇಡೋದ್ರಲ್ಲಿ ತಪ್ಪೇನಿದೆ -ಡಾ.ಸುಧಾಕರ್

ನಮ್ಮೆಲ್ಲರ, ಇಂದಿರಾಗಾಂಧಿಯವ್ರ ತಾಯಿ ಅನ್ನಪೂರ್ಣೇಶ್ವರಿ.. ಹೆಸರು ಇಡೋದ್ರಲ್ಲಿ ತಪ್ಪೇನಿದೆ -ಡಾ.ಸುಧಾಕರ್

ಚಿಕ್ಕಬಳ್ಳಾಪುರ: ಇಂದಿರಾ ಕ್ಯಾಂಟೀನ್​ಗೆ ಅನ್ನಪೂರ್ಣೇಶ್ವರಿ ಹೆಸರು ಇಡೋದ್ರಲ್ಲಿ ತಪ್ಪೇನಿದೆ ಅಂತಾ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.

ನಿನ್ನೆ ಸಿಟಿ ರವಿ ಅವರು ಇಂದಿರಾ ಕ್ಯಾಂಟೀನ್ ಹೆಸರನ್ನ ಬದಲಾವಣೆ ಮಾಡುವಂತೆ ಸಿಎಂ ಬೊಮ್ಮಾಯಿ ಅವರಿಗೆ ಟ್ವಿಟರ್​ ಮೂಲಕ ಮನವಿ ಮಾಡಿಕೊಂಡಿದ್ದರು. ಈ ವಿಚಾರಕ್ಕೆ ಪ್ರತಿಕ್ರಿಯಿಸಿದ ಡಾ.ಸುಧಾಕರ್.. ನಮ್ಮೆಲ್ಲರ ಹಾಗೂ ಇಂದಿರಾಗಾಂಧಿಯವರ ತಾಯಿ ಅನ್ನಪೂರ್ಣೇಶ್ವರಿ. ಹಾಗಾಗಿ ಅನ್ನಪೂರ್ಣೇಶ್ವರಿ ಹೆಸರು ಇಡುವುದರಲ್ಲಿ ತಪ್ಪೇನಿದೆ? ಎಂದು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ಮೊದಲು ಜೇಟ್ಲಿ, ಮೋದಿ ಹೆಸರು ಚೇಂಜ್ ಮಾಡ್ಲಿ.. ಆಮೇಲೆ ಕ್ಯಾಂಟೀನ್ ಹೆಸರು ಬದಲಿಸಲಿ- ಸಿದ್ದರಾಮಯ್ಯ

ಇನ್ನು ನಿನ್ನೆ ಟ್ವಿಟ್ ಮಾಡಿದ್ದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿಟಿ ರವಿ.. ಕನ್ನಡಿಗರು ಊಟ ಮಾಡುವಾಗ ಇಂದಿರಾ ಗಾಂಧಿಯ ಕರಾಳ ದಿನ ನೆನಪು ಮಾಡಿಕೊಳ್ಳುವುದು ಬೇಡ. ಹಾಗಾಗಿ ಇಂದಿರಾ ಕ್ಯಾಂಟೀನ್​​ ಹೆಸರು ಬದಲಿಸಲು ಯಾವುದೇ ಯೋಚನೆ ಮಾಡಬೇಡಿ ಎಂದಿದ್ದರು.

ಇದನ್ನೂ ಓದಿ: ಇಂದಿರಾ ಕ್ಯಾಂಟೀನ್​​​ಗೆ ‘ಅನ್ನಪೂರ್ಣೇಶ್ವರಿ ಕ್ಯಾಂಟೀನ್’ ಎಂದು ಹೆಸರಿಡಿ; ಸಿಎಂಗೆ ಸಿ.ಟಿ ರವಿ ಮನವಿ

Source: newsfirstlive.com Source link