ಕೋವಿಶೀಲ್ಡ್​-ಕೋವ್ಯಾಕ್ಸಿನ್ ಮಿಕ್ಸಿಂಗ್ ಪ್ರಯೋಗ ಯಶಸ್ವಿ -ಗುಡ್ ರಿಸಲ್ಟ್​ ಎಂದ ICMR

ಕೋವಿಶೀಲ್ಡ್​-ಕೋವ್ಯಾಕ್ಸಿನ್ ಮಿಕ್ಸಿಂಗ್ ಪ್ರಯೋಗ ಯಶಸ್ವಿ -ಗುಡ್ ರಿಸಲ್ಟ್​ ಎಂದ ICMR

ಕೊರೊನಾ ವಿರುದ್ಧ ಹೋರಾಟ ಮಾಡಲು ವ್ಯಾಕ್ಸಿನ್​​ ಪಡೆಯುವುದೇ ಏಕೈಕ ಮಾರ್ಗ ಎಂದು ವಿಶ್ವ ಸಂಸ್ಥೆ ಸ್ಪಷ್ಟಪಡಿಸಿದೆ. ಈ ನಡುವೆ ಕೊರೊನಾ ವ್ಯಾಕ್ಸಿನ್​​ ಮಿಕ್ಸಿಂಗ್​​ ಹಾಗೂ ಮ್ಯಾಚಿಂಗ್​​ ಸಂಬಂಧ ಪ್ರಮುಖ ಪ್ರಯೋಗಗಳು ಆರಂಭವಾಗಿವೆ. ಭಾರತದಲ್ಲಿ ಸದ್ಯ ಕೋವಿಶೀಲ್ಡ್​​ ಹಾಗೂ ಕೋವ್ಯಾಕ್ಸಿನ್​ ಲಸಿಕೆ ನೀಡಲಾಗುತ್ತಿದ್ದು, ಸದ್ಯ ಈ ಎರಡು ಲಸಿಕೆಗಳ ಮಿಕ್ಸಿಂಗ್​ ಪ್ರಯೋಗದ ಕುರಿತು ಮಾಹಿತಿ ಹಂಚಿಕೊಂಡಿರುವ ಐಸಿಎಂಆರ್​, ಪ್ರಯೋಗದಲ್ಲಿ ಉತ್ತಮ ಫಲಿತಾಂಶ ಲಭಿಸಿದೆ ಎಂದು ಹೇಳಿದೆ.

ಲಸಿಕೆಗಳ ಮಿಶ್ರಣದಿಂದ ಉತ್ತಮ ಪ್ರತಿರೋಧ ಶಕ್ತಿ ಸೃಷ್ಟಿಯಾಗಿರವುದು ಅಧ್ಯಯನದಲ್ಲಿ ದೃಢಪಟ್ಟಿದೆ. ಪ್ರಯೋಗದಿಂದ ಉತ್ತಮ ಫಲಿತಾಂಶ ದೊರೆತಿದೆ. ಕಳೆದ ವಾರ ಇಂಡಿಯಾನ್​ ಡ್ರಗ್​​ ರೆಗ್ಯುಲರ್​​ ಸಂಸ್ಥೆ, ಲಸಿಕೆ ಮಿಶ್ರಣದ ಮಾಡಲು ಶಿಫಾರಸು ಮಾಡಿತ್ತು. ವೆಲ್ಲೂರಿನ ಕ್ರಿಶ್ಚಿಯನ್ ವೈದ್ಯಕೀಯ ಕಾಲೇಜು (ಸಿಎಂಸಿ) ವ್ಯಾಕ್ಸಿನ್ ಮಿಕ್ಸಿಂಗ್ ಅಧ್ಯಯನ ನಡೆಸಲು ಅನುಮತಿ ಕೋರಿ ಶಿಫಾರಸು ನೀಡಿದ ನಂತರ ಇಂಡಿಯಾನ್​ ಡ್ರಗ್​​ ರೆಗ್ಯುಲರ್​​ ಸಂಸ್ಥೆ ಶಿಫಾರಸು ಮಾಡಿತ್ತು.

Source: newsfirstlive.com Source link