ಅಮೆರಿಕ ‘ಅಣ್ವಸ್ತ್ರ ಪ್ರಯೋಗ ನಿಲ್ಲಿಸಿ’ ಅಂದ್ರೆ ‘ಕುಡಿಯಲು ಎಣ್ಣೆ ಕಳುಹಿಸಿ’ ಎಂದ ಕಿಮ್!

ಅಮೆರಿಕ ‘ಅಣ್ವಸ್ತ್ರ ಪ್ರಯೋಗ ನಿಲ್ಲಿಸಿ’ ಅಂದ್ರೆ ‘ಕುಡಿಯಲು ಎಣ್ಣೆ ಕಳುಹಿಸಿ’ ಎಂದ ಕಿಮ್!

ಈ ಅಣುಬಾಂಬ್ ಯಾವ ರಾಷ್ಟ್ರದ ಬಳಿ ಇರುತ್ತೋ ಅವರು ಬಲಿಷ್ಟರು ಎಂದು ವ್ಯಾಖ್ಯಾನಿಸಲಾಗುತ್ತದೆ. ಈ ಸಾಲಿನಲ್ಲಿ ಉತ್ತರ ಕೊರಿಯಾದ ಕಿಮ್ ಜಾಂಗ್ ಉನ್ ಬಳಿ ಅತ್ಯಂತ ಶಕ್ತಿಶಾಲಿ ಅಣುಬಾಂಬ್ ಇದೆ. ಈ ಅಣುಬಾಂಬ್ ತಯಾರಿಕೆ ನಿಲ್ಲಿಸಲು ದೊಡ್ಡಣ್ಣ ಕೇಳಿದರೆ, ಕಿಮ್ ಪ್ರತಿಯಾಗಿ ತನ್ನ ದೇಶಕ್ಕೆ ಹೆಂಡವನ್ನು ಹಂಚುವಂತೆ ಕೇಳ್ತಾ ಇದ್ದಾರೆ!

ಒಮ್ಮೆ ಆ ಒಂದು ಬಾಂಬ್ ಸಿಡಿಸಿದರೆ, ಅರ್ಧಕ್ಕೆ ಅರ್ಧ ರಾಷ್ಟ್ರ ಧ್ವಂಸವಾಗಿ ಬಿಡುತ್ತೆ. ಅಣುಬಾಂಬ್ ಸ್ಫೋಟಿಸಿದ ಪ್ರದೇಶ ಚೇತರಿಸಿಕೊಳ್ಳಲು ಸಾಧ್ಯವೇ ಇಲ್ಲ. ಆ ಶಕ್ತಿ ಆಣುಬಾಂಬ್​ಗೆ ಇದೆ. ಎರಡನೇ ವಿಶ್ವ ಯುದ್ಧ, ಇಡೀ ಜಗತ್ತು ತುರ್ತು ಪರಿಸ್ಥಿತಿಯಲ್ಲಿತ್ತು. ಯುದ್ಧಕ್ಕೆ ಅಂತ್ಯವೇ ಇಲ್ಲ ಎನ್ನುವಂತ ಸಂದರ್ಭವದು. ಒಂದು ದೇಶ ಮತ್ತೊಂದು ದೇಶದ ವಿರುದ್ಧ ಪದೇ ಪದೆ ದಾಳಿ ಮಾಡುತ್ತಲಿತ್ತು. ಈ ಯುದ್ಧ ಕೊನೆಗೊಂಡಿದ್ದೆ ಅಮೆರಿಕ ಜಪಾನ್​ನ ಹಿರೋಶಿಮಾ ಮತ್ತು ನಾಗಸಾಕಿಯ ಮೇಲೆ ಅಣು ಬಾಂಬ್ ಹಾಕಿದಾಗ. ಆ ಘಟನೆ ಎಷ್ಟು ಭಯಾನಕವಾಗಿತ್ತು ಎಂದರೆ ಒಂದೇ ಸ್ಫೋಟಟದಲ್ಲಿ ಅಲ್ಲಿನ 2 ಲಕ್ಷಕ್ಕೂ ಹೆಚ್ಚು ಜನ ಸ್ಥಳದಲ್ಲೇ ಮೃತರಾದರು. ಅಷ್ಟೆ ಅಲ್ಲ, ಈಗಲೂ ಕೂಡ ಅಲ್ಲಿನ ಮಕ್ಕಳು ಅಂಗವಿಕಲತೆಯಿಂದ ಬಳಲುತ್ತಿದ್ದಾರೆ. ಅಷ್ಟು ಕ್ರೂರ ಈ ಅಣು ಬಾಂಬ್.

blank

ಆ ಕಾಲಕ್ಕೆ ಅಣುಬಾಂಬ್ ಕೇವಲ ಬಲಿಷ್ಟ ರಾಷ್ಟ್ರಗಳ ಹತ್ತಿರ ಮಾತ್ರ ಇತ್ತು. ಆದರೆ ಈಗ ಬಹುತೇಕ ಎಲ್ಲ ರಾಷ್ಟ್ರಗಳು ಅಣುಬಾಂಬ್ ಸಿದ್ಧಪಡಿಸಿಕೊಂಡಿದೆ. ಆದರೆ ಯಾವ ರಾಷ್ಟ್ರಗಳು ಪ್ರಯೋಗ ಮಾಡಲು ಮುಂದಾಗುವುದಿಲ್ಲ. ಇದಕ್ಕೆ ವಿಶ್ವ ಸಂಸ್ಥೆ ನಿರ್ಭಂದವನ್ನು ಹೇರಿದೆ. ಅಣು ಬಾಂಬ್ ಇದ್ದರು ಪ್ರಯೋಗ ಮಾಡದೇ ಇರುವುದು ಜಗತ್ತಿನ ಶಾಂತಿಯ ಸಂಕೇತವಾಗಿದೆ. ಪರಮಾಣು ಶಸ್ತ್ರಾಸ್ತ್ರಗಳ ಪ್ರಸರಣ ತಡೆ ಒಪ್ಪಂದ ಮೆರೆಗೆ ಎಲ್ಲ ದೇಶಗಳು ತಣ್ಣಾಗಾಗಿದ್ದವು. ಆದರೆ 2003 ರಲ್ಲಿ ಕಿಮ್ ಈ ಒಪ್ಪಂದದಿಂದ ಹೊರ ಉಳಿದರು. ಅದಾದ ನಂತರ 2006ರಲ್ಲಿ 6 ಅಣುಬಾಂಬ್ ಗಳ ಪ್ರಯೋಗ ನಡೆಸಿ, ವಿಶ್ವದ ದೊಡ್ಡಣ್ಣ ತಿರುಗಿ ನೋಡುವಂತೆ ಮಾಡಿಕೊಂಡಿತು. ಇಷ್ಟರ ಮದ್ಯೆ 2017ರಲ್ಲಿ ಉತ್ತರ ಕೊರಿಯಾ ಕಿಮ್ ಜಾಂಗ್ ಉನ್ ರವರ ಸಾರಥ್ಯದಲ್ಲಿ ಮತ್ತೆ ವಿಶ್ವದ ಅತ್ಯಂತ ಶಕ್ತಿಯುತ ಅಣುಬಾಂಬ್ ಸಿದ್ದ ಪಡಿಸಿಕೊಂಡು, ಪ್ರಯೋಗ ನಡೆಸಿಬಿಡ್ತು.

ಸಿಂಗಾಪುರ್ ಶೃಂಗಸಭೆಯಲ್ಲಿ ಟ್ರಂಪ್ ಜೊತೆ ಕಿಮ್ ಮಾತುಕತೆ
ಅಣ್ವಸ್ತ್ರ ಪ್ರಯೋಗವನ್ನು ನಿಲ್ಲಿಸಲು ಟ್ರಂಪ್, ಕಿಮ್​ಗೆ ಕೋರಿಕೆ

ಇದನ್ನೂ ಓದಿ: ಒಲಿಂಪಿಕ್ಸ್​ಗಿಂತಲೂ ಟ್ರೆಂಡಿಂಗ್! ನೋಡುಗರ ಕಂಗಳ ತಂಪು ಮಾಡ್ತಿರೋ ಈ ಬ್ಯೂಟಿ ಯಾರು ಗೊತ್ತಾ?

ಒಪ್ಪಂದದಿಂದ ಹೊರಗುಳಿದಿದ್ದ ಸರ್ವಾಧಿಕಾರಿ ಕಿಮ್, ಒಂದಾದರ ಮೇಲೊಂದು ಅಣು ಸ್ಫೋಟಗಳ ಪ್ರಯೋಗದಲ್ಲಿ ತೊಡಗಿದ್ದರು. ಇದನ್ನು ನಿಲ್ಲಿಸಿ, ಒಪ್ಪಂದಕ್ಕೆ ಮರು ಸೇರ್ಪಡೆಯಾಗಲು ಸ್ವತಃ ಡೋನಾಲ್ಡ್ ಟ್ರಂಪ್ ಕಿಮ್ ರವರನ್ನು ಸಿಂಗಾಪುರ್ ಶೃಂಗದಲ್ಲಿ ಭೇಟಿಯಾಗಿ ಕೋರಿಕೆ ಇಟ್ಟಿದ್ದರು. ಅದು ಹಾಗೂ ಹೀಗೂ ಪುಟ್ಟ ಪುಟ್ಟ ಹೆಜ್ಜೆ ಇಡುವಾಗಲೇ ಟ್ರಂಪ್ ಪಟ್ಟದಿಂದ ಕೆಳಗಿಳಿದಿದ್ದರು. ಆದರೆ ಕಿಮ್ ನ ಅಣು ಪ್ರಯೋಗ ಮಾತ್ರ ನಿಲ್ಲಲೇ ಇಲ್ಲ. ಎಷ್ಟೇ ಆದರೂ ಆ ಸರ್ವಾಧಿಕಾರಿಯನ್ನು ಕೇಳೋರು ಯಾರು ? ಅವನಾಡಿದ್ದೆ ಆಟ ಎನ್ನುವ ಮನಸ್ಥಿತಿಯಲ್ಲಿ ಹೆಚ್ಚೆಚ್ಚು ಪ್ರಯೋಗಗಳನ್ನು ಕೈಗೊಂಡಿದ್ದರು. ಇದನ್ನು ನಿಲ್ಲಿಸಲು ಸಕಲ ಪ್ರಯತ್ನಗಳು ನಡೆದಿದೆ. ಈಗ ಮತ್ತೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಇದರ ಮಾತು ಕತೆಗೆ ಮುಂದಾಗಿದ್ದಾರೆ. ಆದರೆ ಸರ್ವಾಧಿಕಾರಿ ಕಿಮ್ ಮಾತು ಕತೆಗೆ ಕೂರಲೂ ಹಲವು ಬೇಡಿಕೆಯನ್ನಿಟ್ಟಿದ್ದಾರೆ. ಆ ಬೇಡಿಕೆಯೇ ವಿಶೇಷವಾಗಿದೆ. ಅದೇನು ಗೊತ್ತಾ ?

ಒಪ್ಪಂದದ ಮಾತುಕತೆಗೆ ಮದ್ಯ ಸರಬರಾಜು ಮಾಡಬೇಕಂತೆ
ಉತ್ತರ ಕೊರಿಯಾದ ಗಣ್ಯರಿಗೆ ಉತ್ಕೃಷ್ಟ ಎಣ್ಣೆ ಕೊಡಬೇಕಂತೆ

ಇದು ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅಣ್ವಾಸ್ತ್ರ ಪ್ರಯೋಗ ಕೈಬಿಡುವುದಾಗಿ ಚರ್ಚೆಗೆ ಕೂರಲು ಅಮೆರಿಕ ಮುಂದೆ ಇಟ್ಟಿರುವ ಬೇಡಿಕೆ. ಹೌದು. ಕಿಮ್ ಒಪ್ಪಂದ ಸಹಿ ಹಾಕುವುದಕ್ಕಲ್ಲ, ಕೇವಲ ಬೈಡನ್ ಜೊತೆ ಮಾತುಕತೆಗೆ ಕೂರಲು ಕೆಲವು ಬೇಡಕೆಗಳನ್ನು ಇಟ್ಟಿದ್ದಾರೆ. ಅದರಲ್ಲಿ ಪ್ರಮುಖವಾಗಿ ಅಮೆರಿಕದ ಉತ್ಕೃಷ್ಟ ಬ್ರಾಂಡ್ ಮಧ್ಯವನ್ನು ಕಿಮ್ ಸೇರಿ ಆ ದೇಶದ ಗಣ್ಯಾತಿ ಗಣ್ಯರಿಗೆ ಸರಬರಾಜು ಮಾಡುವುದಾಗಿ ಒಪ್ಪಂದ ಮಾಡಿಕೊಂಡು ನಂತರ ಮಾತುಕತೆಗೆ ಬರಲು ಹೇಳುತ್ತಿದ್ದಾನೆ ಕಿಮ್. ಹಲವು ವರ್ಷಗಳಿಂದ ಉತ್ತರ ಕೊರಿಯಾಗೆ ಆಮದು ಆಗಬೇಕಿದ್ದ ಕೆಲವು ಐಷಾರಾಮಿ ವಸ್ತುಗಳು ಬಾನ್ ಆಗಿದ್ದವು. ಈ ವಸ್ತುಗಳಲ್ಲಿ ಮದ್ಯ ಸೇರಿ ಕೆಲವೊಂದು ಪೂರೈಕೆಗಳನ್ನು ಉತ್ತರ ಕೊರಿಯಾಗೆ ತಲುಪುವುದನ್ನ ಬ್ಯಾನ್ ಮಾಡಲಾಗಿತ್ತು. ಈ ವಸ್ತುಗಳನ್ನೆಲ್ಲ ಮರುಸರಬರಾಜು ಮಾಡಿದರೆ ಒಪ್ಪಂದದ ಮಾತುಕತೆಗೆ ಕೂರಲು ಕಿಮ್ ರೆಡಿಯಾಗಿದ್ದಾರಂತೆ.
ಈ ಬೇಡಿಕೆಯ ಜೊತೆಗೆ ಕಿಮ್ ರವರ ಇನ್ನು ಹತ್ತು ಹಲವು ಬೇಡಿಕೆಗಳಿವೆ. ಈ ಬೇಡಿಕೆಗಳನ್ನೆಲ್ಲ ಪೂರೈಕೆ ಮಾಡಿದರಷ್ಟೆ ಕಿಮ್ ಒಪ್ಪಂದಕ್ಕೆ ಕೂರುವುದು ಎಂದು ಕಡಾಖಂಡಿತವಾಗಿ ಹೇಳಿ ಬಿಟ್ಟಿದ್ದಾರೆ. ಅದರಲ್ಲಿ ಕೆಲವು ಬೇಡಿಕೆ ವಿಶೇಷವಾಗಿದೆ.

ಐಷಾರಾಮಿ ವಸ್ತುಗಳು ಉತ್ತರ ಕೊರಿಯಾಗೆ ಬರಬೇಕು
ಸೂಟ್ ಆಮದುಗೆ ಮಂಜೂರಾತಿ ಕೋರಿಕೆ ಇಟ್ಟ ಕಿಮ್

ಈಗಾಗಲೇ ಉತ್ತರ ಕೊರಿಯಾ ನಷ್ಟದಲ್ಲಿ ನಡೆಯುತ್ತಿದೆ. ಪ್ರಕೃತಿ ವಿಕೋಪದಿಂದಾಗಿ ಕಿಮ್‌ನ ದೇಶದಲ್ಲಿ ಜಲ ಪ್ರಳಯ ಉಂಟಾಗಿತ್ತು. ಅದಲ್ಲದೆ ಕೊರೊನಾ ಕಿಮ್ ನಾಡಿನ ಜನತೆಗೂ ಸುಮ್ಮನೆ ಬಿಟ್ಟಿಲ್ಲ. ಈ ಎಲ್ಲ ಬಿಕ್ಕಟ್ಟುಗಳ ನಡುವೆ ಉತ್ತರ ಕೊರಿಯಾ ಜನತೆ ಆಹಾರದ ಒತ್ತಡದಲ್ಲಿದ್ದಾರೆ. ಸರ್ವಾಧಿಕಾರಿ ಹೆಚ್ಚು ಮಾತನಾಡಿದರೆ ಎಲ್ಲಿ ಶೂಟ್ ಮಾಡಿ ಬಿಡ್ತಾನೋ ಎನ್ನುವ ಭಯದಲ್ಲಿ ಬಾಯಿಗೆ ಬೀಗ ಹಾಕಿಕೊಂಡಿದ್ದಾರೆ. ಈ ನಡುವೆ ಕಿಮ್ ಅಮೆರಿಕದ ಮುಂದೆ ಮದ್ಯದ ಬೇಡಿಕೆ ಇಡುವುದಲ್ಲದೆ, ವಿಶ್ವ ಸಂಸ್ಥೆಯ ಸಲಹೆಯೊಂದಿಗೆ ಇಷ್ಟು ವರ್ಷ ಬ್ಯಾನ್ ಮಾಡಲಾಗಿದ್ದ ಐಷಾರಾಮಿ ವಸ್ತುಗಳು ತನ್ನ ದೇಶಕ್ಕೆ ಬರಬೇಕು, ಐಷಾರಾಮಿ ಸೂಟ್ ಗಳ ಆಮದುಗೆ ಮಂಜೂರು ಮಾಡಬೇಕು ಎನ್ನುವ ಕೋರಿಕೆ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.

ಕಚ್ಚಾ ತೈಲಾ ಆಮದುಗೆ ಮಂಜೂರಾತಿ ಬೇಡಿಕೆ
ಮೆಟಲ್ ವಸ್ತುಗಳ ಆಮದು ಮತ್ತು ರಫ್ತುಗೂ ಅನುಮತಿ

ಇದನ್ನೂ ಓದಿ: 3ನೇ ಅಲೆ ಎದುರಿಸಲು ಬೆಂಗಳೂರು ರೆಡಿ.. ಮತ್ತೊಂದು ಸಿಹಿ ಸುದ್ದಿ ಕೊಟ್ಟ ಸೀರಂ ಸಂಸ್ಥೆ
ಇಷ್ಟೆ ಅಲ್ಲ, ಸೌತ್ ಕೊರಿಯಾ ಹಾಗೂ ಜಪಾನ್ ನಿಂದ ಆಮದು ಆಗುತ್ತಿದ್ದ ಕಚ್ಚಾ ತೈಲಾ, ಕಿಮ್ ದೇಶಕ್ಕೆ ತಲುಪುವುದನ್ನು ನಿಷೇಧಿಸಲಾಗಿತ್ತು. ಅಲ್ಲದೆ ಮೆಟಲ್ ವಸ್ತುಗಳು ಉತ್ತರ ಕೊರಿಯಾಗೆ ಹೋಗುವ ಹಾಗಿರಲಿಲ್ಲ. ಅಲ್ಲದೆ ವಿಶ್ವಾದ್ಯಂತ ಅದೆಷ್ಟೋ ವಸ್ತುಗಳು ನಾರ್ತ್ ಕೊರಿಯಾಗೆ ಪೂರೈಕೆಯಾಗೋದು ಬ್ಯಾನ್ ಆಗಿತ್ತು. ಈ ಎಲ್ಲ ವಸ್ತುವನ್ನು ಮತ್ತೆ ಸರಬರಾಜಿಗೆ ಅನುಮತಿ ನೀಡಿದರೆ ಮಾತ್ರ ಕಿಮ್ ಜೋ ಬೈಡನ್ ಎದುರು ಕೂತು ಅಣ್ವಾಸ್ತ್ರ ತಯಾರಿಕೆ ಹಾಗೂ ಪ್ರಯೋಗವನ್ನು ನಿಲ್ಲಿಸುವ ಬಗ್ಗೆ ಚರ್ಚೆ ಮಾಡುತ್ತೇನೆ ಎನ್ನುತ್ತಿದ್ದಾರೆ.

2018ರಲ್ಲಿ ಟ್ರಂಪ್ ಜೊತೆಗಿನ ಕಿಮ್ ಒಪ್ಪಂದವೂ ಹೀಗೆ ಇತ್ತು
ಬೇಡಿಕೆ ಪೂರೈಕೆ ಮಾಡಿದರಷ್ಟೆ ಮುಂದಿನ ಮಾತು ಎಂದಿದ್ದ ಕಿಮ್

ಕಿಮ್ ಇಡುತ್ತಿರುವ ಬೇಡಿಕೆ ಹೊಸದೇನಲ್ಲ. ವಿಶ್ವ ಸಂಸ್ಥೆಯಿಂದ ಹೊರಗುಳಿದ್ದಿದ್ದ ಉತ್ತರ ಕೊರಿಯ, ತನ್ನಿಚ್ಚೆಯಂತೆ ಎಲ್ಲವನ್ನು ನಡೆಸಿಕೊಂಡು ಹೋಗುತ್ತಿತ್ತು. ಇದನ್ನು ಹೇಗಾದರೂ ಮಾಡಿ ತಡೆಯಲೇ ಬೇಕು ಎಂದು ಟ್ರಂಪ್ ಸರ್ಕಾರ ಮಧ್ಯಸ್ತಿಕೆ ನಡೆಸಿತ್ತು. ಆಗಲೂ ಕಿಮ್ ಟ್ರಂಪ್ ಎದುರು ಹಲವು ಬೇಡಿಕೆಗಳನ್ನಿಟ್ಟು ಅಣ್ವಸ್ತ್ರದ ಪ್ಲಾಂಟ್ ಅನ್ನು ಭಾಗಶಃ ನಿಷ್ಕ್ರಿಯಗೊಳಿಸುವುದಾಗಿ ಹೇಳಿದ್ದರು ಕಿಮ್. ಇದೆ ಮಾತುಕತೆಗೆ ಸಿಂಗಾಪುರ್ ನಲ್ಲಿ ಒಮ್ಮೆ, ವಿಯೇಟ್ನಾಮ್ ನಲ್ಲಿ ಒಮ್ಮೆ ಟ್ರಂಪ್ ಹಾಗೂ ಕಿಮ್ ಮಾತುಕತೆ ನಡೆಸಿದ್ದರು. ಆದರೆ ಈ ಒಪ್ಪಂದಗಳಿಗೆ ಹಲವು ವಿರೋಧಗಳು ಬಂದಿತ್ತು. ಆದರೆ ಈಗ ಜೋ ಬೈಡನ್ ಮುಂದೆ ಇನ್ನಷ್ಟು ಬೇಡಿಕೆಗಳನ್ನು ಮುಂದಿಟ್ಟಿರುವ ಕಿಮ್, ಬೇಡಿಕೆಗಳಿಗೆ ಒಪ್ಪಿಗೆ ಇದ್ದರೆ ಮಾತ್ರ ಮಾತುಕತೆಗೆ ಬರುವುದಾಗಿ ಹೇಳಿದ್ದಾರೆ. ಇದು ಸರ್ವಾಧೀಕಾರಿಯ ಎಚ್ಚರಿಕೆಯ ನಡೆ ಎಂದರೆ ತಪ್ಪಾಗಲಾರದು.

ಕಿಮ್ ಬೇಡಿಕೆ ಒಂದಾದರೆ, ತಂಗಿ ಕಿಮ್ ಯೋ ದು ಇನ್ನೊಂದು
ಸೌತ್ ಕೊರಿಯ ಮೇಲೆ ಹಗೆ ಸಾಧಿಸಲು ಕಿಮ್ ತಂಗಿ ಪ್ಲಾನ್

ಸರ್ವಾಧಿಕಾರಿಯ ಬೇಡಿಕೆಗಳು ಒಂದೆಡೆಯಾದರೆ, ಇನ್ನೊಂದೆಡೆ ಕಿಮ್ ಯೋ ಜಂಗ್, ಕಿಮ್ ಜಂಗ್ ಉನ್ ನ ತಂಗಿ ಇನ್ನೊಂದು ರೀತಿಯಲ್ಲಿ ಸೌತ್ ಕೊರಿಯಾಗೆ ಬೆದರಿಕೆ ಹಾಕುತ್ತಿದ್ದಾಳೆ. ಅಮೆರಿಕ ಸೌತ್ ಕೊರಿಯದಲ್ಲಿ 30000 ಯೋಧರ ಪಡೆಯನ್ನು ಇರಿಸಿತ್ತು. ಆ ಯೋಧರನ್ನು ಹಿಂತೆಗೆಯಲು ಅಮೆರಿಕಗೆ ಕೇಳಿಕೊಂಡಿದ್ದಾಳೆ. ಅಲ್ಲದೆ ಸೌತ್ ಕೊರಿಯ, ತಮ್ಮ ದೇಶದ ಮೇಲೆ ಹಗೆ ಸಾಧಿಸಿದರೆ, ಮುಂದೆ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡುತ್ತಿದ್ದಾಳೆ.

ಉತ್ತರ ಕೊರಿಯದಲ್ಲಿ ಊಟಕ್ಕೂ ಕೊರತೆ ಎದುರಾಗಿದೆ, ಅಲ್ಲಿನ ಜನ ಸಂಕಷ್ಟದಲ್ಲಿದ್ದಾರೆ. ಕೋವಿಡ್ ಹೆಚ್ಚಾದ ಕಾರಣ, ಅಲ್ಲಿಯ ಜನರು ಸಹ ಹಸಿವಿನಲ್ಲಿದ್ದಾರೆ. ಐಷಾರಾಮಿ ಜೀವನವನ್ನು ತೋರಿ ಪ್ರತಿಷ್ಟೆ ಹೆಚ್ಚಿಸಿಕೊಳ್ಳಲು ಕಿಮ್ ಪ್ಲಾನ್. ಆದರೆ ಹಗೆ ಸಾಧಿಸುವ ಯೋಚನೆ ಅವನ ತಂಗಿ ಕಿಮ್ ಯೋ ದು. ಇವರ ಜಂಜಾಟದಲ್ಲಿ ಬಳಲಿ ಬೆಂಡಾಗಿ ಹೋಗುತ್ತಿರುವುದು ಮಾತ್ರ ಉತ್ತರ ಕೊರಿಯ ಜನತೆ.

ಇದನ್ನೂ ಓದಿ: ನೀರಜ್ ಚೋಪ್ರಾರ ‘ಚಿನ್ನದ ಗುರಿ’ಯ ರೋಚಕ ಕ್ಷಣಗಳು ಹೇಗಿದ್ದವು..?

Source: newsfirstlive.com Source link