ನನ್ನ ‘ಎ’ ಗ್ರೇಡ್​ನಿಂದ ‘ಬಿ’ ಗ್ರೇಡ್​ಗೆ ತಂದಿದ್ದಾರೆ -ಖಾತೆ ಹಂಚಿಕೆ ವಿರುದ್ಧ ಎಂಟಿಬಿ ಕಿಡಿ

ನನ್ನ ‘ಎ’ ಗ್ರೇಡ್​ನಿಂದ ‘ಬಿ’ ಗ್ರೇಡ್​ಗೆ ತಂದಿದ್ದಾರೆ -ಖಾತೆ ಹಂಚಿಕೆ ವಿರುದ್ಧ ಎಂಟಿಬಿ ಕಿಡಿ

ಬೆಂಗಳೂರು: ನೂತನ ಸಿಎಂ ಬಸವರಾಜ್ ಬೊಮ್ಮಾಯಿ ಸಂಪುಟದಲ್ಲಿ ನಿರೀಕ್ಷಿತ ಖಾತೆ ಸಿಗದ ಕಾರಣ ಅಸಮಾಧಾನಗೊಂಡಿರುವ ಸಚಿವ ಎಂಟಿಬಿ ನಾಗರಾಜ್​ ಅವರು, ಇಂದು ಸಿಎಂ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ಸಿಎಂ ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಎಂಟಿಬಿ ನಾಗರಾಜ್, ಈಗ ಕೊಟ್ಟಿರುವ ಖಾತೆ ಡಿ-ಪ್ರಮೋಟ್ ಆದಂತಾಗಿದೆ. ಎ-ಗ್ರೇಡ್ ನಿಂದ ಬಿ-ಗ್ರೇಡ್ ಗೆ ತಂದಿದ್ದಾರೆ. ಈ ಬಗ್ಗೆ ಸಿಎಂ ಗಮನಕ್ಕೆ ತಂದಿದ್ದೇನೆ. ಮುಂದಿನ ದಿನಗಳಲ್ಲಿ ಸರಿಪಡಿಸುವ ಭರವಸೆ ನೀಡಿದ್ದಾರೆ. ವರಿಷ್ಠರ ಜೊತೆ ನಿಮ್ಮ ಖಾತೆ ಬಗ್ಗೆ ಚರ್ಚಿಸುತ್ತೇನೆ. ಸದ್ಯಕ್ಕೆ ಸಿಎಂ ಭರವಸೆ ಮಾತನ್ನ ಒಪ್ಪಿಕೊಂಡು ಬಂದಿದ್ದೇನೆ. ಮುಂದಿನ ದಿನಗಳಲ್ಲಿ ಖಾತೆ ಬದಲಾಯಿಸುವ ವಿಶ್ವಾಸ ಇದೆ ಎಂದರು.

ನನಗೆ ಜನರ ಜೊತೆ ಸೇರಿ ಕೆಲಸ ಮಾಡುವ ಖಾತೆಯ ಅಗತ್ಯವಿದೆ. ಅದೇ ಕಾರಣಕ್ಕೆ ಖಾತೆ ಬದಲಾವಣೆಗೆ ಮನವಿ ಮಾಡಿದ್ದೇನೆ. ಈ ಹಿಂದೆ ನಾನು ವಸತಿ ಖಾತೆಯನ್ನ ಕೇಳಿದ್ದ. ಅದಕ್ಕಿಂತಲೂ ಒಳ್ಳೆಯ ಖಾತೆ ನೀಡಲಿದ್ದಾರೆ ಎಂದುಕೊಂಡಿದ್ದೆ. ಇಂಧನ, ಸಮಾಜ ಕಲ್ಯಾಣ, ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ, ಸಾರಿಗೆ ಇಲಾಖೆಗಳಲ್ಲಿ ಯಾವುದಾದ್ರು ಒಂದನ್ನ ಕೊಡಲಿ ಎಂದು ಹೇಳಿದರು.

Source: newsfirstlive.com Source link