ಇಂದಿರಾ ಕ್ಯಾಂಟೀನ್‍ಗೆ ಅನ್ನಪೂರ್ಣೇಶ್ವರಿ ಹೆಸರಿಟ್ರೇ ತಪ್ಪೇನು?- ಸುಧಾಕರ್ ಪ್ರಶ್ನೆ

ಚಿಕ್ಕಬಳ್ಳಾಪುರ: ಇಂದಿರಾ ಕ್ಯಾಂಟೀನ್‍ಗೆ ಅನ್ನಪೂರ್ಣೇಶ್ವರಿ ಹೆಸರಿಟ್ಟರೆ ತಪ್ಪೇನಿದೆ ಎಂದು ಚಿಕ್ಕಬಳ್ಳಾಪುರ ತಾಲೂಕಿನ ನಂದಿಗಿರಿಧಾಮದಲ್ಲಿ ಸಚಿವ ಸುಧಾಕರ್ ಹೇಳಿದ್ದಾರೆ.

ಸಿ.ಟಿ.ರವಿಯವರು ಈ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಆದರೆ ಸರ್ಕಾರ ಈ ವಿಚಾರದಲ್ಲಿ ಯಾವುದೇ ನಿರ್ಧಾರ ಮಾಡಿಲ್ಲ. ಅನ್ನಪೂರ್ಣೇಶ್ವರಿ ನಮಗೆಲ್ಲರಿಗೂ ಇಂದಿರಾ ಗಾಂಧಿಯವರಿಗೆ ತಾಯಿ ಇದ್ದಂತೆ. ಅನ್ನಪೂರ್ಣೇಶ್ವರಿ ಹೆಸರಿಟ್ಟರೆ ತಪ್ಪೇನು ಎಂದು ಪ್ರಶ್ನಿಸಿದ್ದಾರೆ.

ಆನಂದ್ ಸಿಂಗ್ ಹಾಗೂ ಎಂಟಿಬಿ ನಾಗರಾಜ್ ಖಾತೆ ಸಂಬಂಧ ಅಸಮಾಧಾನ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ ಬೆಳಗ್ಗೆ ಆನಂದ್ ಸಿಂಗ್ ಜೊತೆ ಸಿಎಂ ಚರ್ಚೆ ಮಾಡಿದ್ದು, ಎಂಟಿಬಿ ನಾಗರಾಜ್‍ರವರು ಸಹ ಸಿಎಂ ಭೇಟಿ ಮಾಡಿದ್ದಾರೆ. ಇನ್ನೂ ಯಾರೇ ಅಸಮಾಧಾನಿತರಿದ್ದರೂ ಅವರ ಜೊತೆ ಸಿಎಂ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಲಿದ್ದಾರೆ ಎಂದಿದ್ದಾರೆ. ಮತ್ತೊಂದೆಡೆ ಗಿಡ ನೆಡುವ ಕಾರ್ಯದಲ್ಲಿ ಸುಧಾಕರ್ ರವರನ್ನು ಕಾರ್ಯಕರ್ತರು ಸುತ್ತುವರಿದಿದ್ದು, ಸಚಿವರ ಸಮ್ಮುಖದಲ್ಲಿಯೇ ಕೊರೊನಾ ನಿಯಮಗಳ ಉಲ್ಲಂಘನೆಯಾಗಿತ್ತು. ಇದನ್ನೂ ಓದಿ: ಮಂತ್ರಿ ಆಗದೇ ಇರುವದಕ್ಕೆ ಬೇಜಾರಿಲ್ಲ: ಲಕ್ಷ್ಮಣ ಸವದಿ

Source: publictv.in Source link