ಬಜಾರ್​ ಪಾರಿ ‘ಹಳ್ಳಿ ಹುಡುಗಿ’ಯಾದ ಇಂಟರೆಸ್ಟಿಂಗ್ ಕಹಾನಿ..!

ಬಜಾರ್​ ಪಾರಿ ‘ಹಳ್ಳಿ ಹುಡುಗಿ’ಯಾದ ಇಂಟರೆಸ್ಟಿಂಗ್ ಕಹಾನಿ..!

ಲಾಕ್​​ಡೌನ್​ನಲ್ಲಿ ಅಜ್ಜಿ ಮನೆ ಸೇರಿದ್ದ ಬಜಾರ್​ ಬೆಡಗಿ ಬೆಳಗ್ಗೆ ಬೇಗ ಎದ್ದು ಕೊಟ್ಟಿಗೆ ಕ್ಲೀನ್ ಮಾಡಿ, ದನ ಕರುಗಳನ್ನ ಹಾರೈಕೆ ಮಾಡಿ, ರೊಟ್ಟಿ ತಟ್ಟಿ ಪಕ್ಕಾ ಹಳ್ಳಿ ಹುಡ್ಗಿ ಆಗಿದ್ದಾರೆ. ಅರೆರೆ.. ಇದಿಷ್ಟೇ ಅಲ್ಲಾ ಗಂಡೈಕ್ಳೂ ನಾಚುವಂತೆ ಟ್ರಾಕ್ಟರ್​ ಓಡಿಸಿ ಸೈ ಅನಿಸಿಕೊಂಡಿದ್ದಾರೆ ಅದಿತಿ.. ಇನ್ನು ಬಜಾರ್​ ಪಾರಿಯ ಹಳ್ಳಿ ಲೈಫ್​ಗೆ ಅವ್ರ ಅಭಿಮಾನಿಗಳು ಕಳ್ದೋಗಿದ್ದಾರೆ.

blank

ಸಿನಿಮಾದಲ್ಲಿ ಬಣ್ಣ ಹಚ್ಚಿದ್ರು ಅಂದ್ರೆ ಸಾಕು ಕೆಲವು ನಟ ನಟಿಯರ ಲೈಫ್ ಸ್ಟೈಲೇ ಬದಲಾಗುತ್ತೆ. ಹೈಫೈ ಲೈಪು, ಐಷಾರಾಮಿ ಕಾರಿನಲ್ಲೇ ಸುತ್ತಾಟ. ಪಾರ್ಟಿ ಗೀರ್ಟಿ ಅನ್ಕೋಂಡೆ ಟೈಂ ಪಾಸ್​ ಮಾಡ್ತಾರೆ. ಅದ್ರೆ ಬಜಾರ್​ ನ ಬೆಡಗಿ ಅದಿತಿ ಪ್ರಭುದೇವ ಇದಕ್ಕೆ ತದ್ವಿರುದ್ಧವಾಗಿದ್ದಾರೆ.

ಸಿಂಪಲ್ ಬ್ಯೂಟಿ

ಸ್ಯಾಂಡಲ್​ವುಡ್​ನ ಫರ್ಫೆಕ್ಟ್ ಗರ್ಲ್ ಶ್ಯಾನೆ ಟಾಪ್​ಗೌಳೆ ಖ್ಯಾತಿಯ ಅದಿತಿ ಪ್ರಭುದೇವ ಸ್ಕ್ರೀನ್​​ ಮೇಲೆ ಎಷ್ಟು ಸಂಭ್ರಮದಿಂದ ಕಾಣ್ತಾರೋ ಅಷ್ಟೇ ಸರಳವಾಗಿ ತನ್ನ ನಿಜ ಜೀವನದಲ್ಲಿ ಬದ್ಕೋ ಸಿಂಪಲ್ ಬ್ಯೂಟಿ.. ಶೂಟಿಂಗ್ ಇಲ್ದಾಗ ಮನೆ ಕೆಲಸ ಮಾಡ್ಕೊಂಡು ಸಾಮಾನ್ಯ ಹೆಣ್ಣು ಮಗಳಂತೆ ಇರ್ತಾರೆ. ಅಲ್ಲದೇ ಅದಿತಿ ಪ್ರಭುದೇವ ಸಿಟಿ ಲೈಫ್​ಗೂ ಸೈ, ಹಳ್ಳಿ ಲೈಫ್​​ಗೂ ಜೈ ಅಂದು ಅಜ್ಜಿ ಮನೆ ಸೇರಿ ಹಳ್ಳಿ ಹುಡುಗಿ ಅವತಾರದ, ಚೆಂದದ ವಿಡಿಯೋವನ್ನ ಬಿಟ್ಟಿದ್ರು ಅದಿತಿ.

blank

ಅದಿತಿ ಬೆಳಗ್ಗೆದ್ದು ಕೊಟ್ಟಿಗೆ ಮನೆ ಗುಡಿಸಿ, ಸಗಣಿ ಬಾಚಿ, ದನಕರುಗಳಿಗೆ ಮೇವು ಹಾಕಿ, ಹಾಲು ಕರೆದು, ಸೌದೆ ಒಲೆಯ ಮುಂದೆ ರೊಟ್ಟಿ ತಟ್ಟಿದ್ರು. ಅದಿತಿ ರೊಟ್ಟಿ ಸುಟ್ಟಿದ್ದ ನೋಡಿ ನಮಗೂ ಇಂತ ಮಗಳು ಹುಟ್ಟಿದ್ರೆ ಚೆಂದ ಅಂತಾ ನಮ್ಮ ಹಳ್ಳಿ ಜನ ಮಾತಾಡ್ಕೊಂಡಿದ್ರು. ಅಷ್ಟೇ ಅಲ್ಲ ಈಗ ಹಳ್ಳಿ ಹುಡುಗರು ನಾಚುವಂತೆ ಅದಿತಿ ಟ್ರಾಕ್ಟರ್ ಏರಿ ಉಳುಮೆ ಮಾಡಿ ಹಳ್ಳಿಯ ರೈತಾಪಿ ಹೆಣ್ಣುಮಗಳಾಗಿ ಮಿರ ಮಿರ ಮಿಂಚಿದ್ದಾರೆ.

blank

ಹಳ್ಳಿ ಹುಡುಗಿಯ ಹೊಸ ಅವತಾರದ ಬಗ್ಗೆ ಅದಿತಿ ಚಿತ್ರಪ್ರೇಮಿಗಳ ತಂಡದ ಜೊತೆ ಮಾತನಾಡಿ, ನಾನು ಸಿನಿಮಾಗೂ ಹಳ್ಳಿ ಜೀವನಕ್ಕೂ ಜೈ ಅಂದಿದ್ದಾರೆ.. ಅಲ್ಲದೆ ಹಳ್ಳಿ ಜೀವನದ ಬಗ್ಗೆ ಒಂದಷ್ಟು ವಿಚಾರಗಳನ್ನು ನಮ್ಮ ಜೊತೆ ಹಂಚಿಕೊಂಡಿದ್ದಾರೆ.

blank

ಇದಿಷ್ಟೇ ಅಲ್ಲ ಮುಂದಿನ ದಿನಗಳಲ್ಲಿ ಜಮೀನು ಖರೀದಿ ಮಾಡಿ, ಆ ಜಮೀನಿನಲ್ಲಿ ಕೃಷಿ, ಹೈನುಗಾರಿಕೆ ಮಾಡುವ ಕನಸು ಕಂಡಿದ್ದಾರೆ ಅದಿತಿ. ಅದೇನೆ ಇರಲಿ ಸಿನಿಮಾ ಜೊತೆ ಕೃಷಿ ಕಾಯಕದ ಅದಿತಿ ಕನಸು ಅದಷ್ಟು ಬೇಗ ನನಸಾಗಲಿ ಎಂದು ಹಾರೈಸೋಣ.

Source: newsfirstlive.com Source link