ಓ.. ಬಿಎಸ್​ವೈ ಸಂಪುಟ ದರ್ಜೆ ಸ್ಥಾನಮಾನ ತಿರಸ್ಕರಿಸಿದ್ದಾರಾ..? ನಾನೇ ಹೇಳ್ಬೇಕು ಅಂತಿದ್ದೆ – ಸಿದ್ದರಾಮಯ್ಯ

ಓ.. ಬಿಎಸ್​ವೈ ಸಂಪುಟ ದರ್ಜೆ ಸ್ಥಾನಮಾನ ತಿರಸ್ಕರಿಸಿದ್ದಾರಾ..? ನಾನೇ ಹೇಳ್ಬೇಕು ಅಂತಿದ್ದೆ – ಸಿದ್ದರಾಮಯ್ಯ

ಬೆಂಗಳೂರು: ಬಿ.ಎಸ್. ಯಡಿಯೂರಪ್ಪ ಸಂಂಪುಟ ದರ್ಜೆಯ ಸ್ಥಾನಮಾನ ತಿರಸ್ಕರಿಸಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ.. ಓ ಯಡಿಯೂರಪ್ಪ ಸಂಪುಟ ದರ್ಜೆ ಸ್ಥಾನಮಾನ ತಿರಸ್ಕರಿಸಿದ್ದಾರಾ..? ಒಳ್ಳೆಯದಾಯ್ತು.. ಯಡಿಯೂರಪ್ಪ ಒಳ್ಳೆಯ ಕೆಲಸ ಮಾಡಿದ್ದಾರೆ ನಾನೇ ಯಡಿಯೂರಪ್ಪಂಗೆ ಹೇಳ್ಬೇಕು ಅಂತ ಇದ್ದೆ ಎಂದು ಹೇಳಿದ್ದಾರೆ.

ಮುಂದುವರೆದು.. ಬಿಜೆಪಿ ಸರ್ಕಾರದಲ್ಲಿ ಎಲ್ಲವೂ ಸರಿ ಇಲ್ಲ.. ಮುಖ್ಯಮಂತ್ರಿ ಆಯ್ಕೆ ಬಗ್ಗೆಯೇ ಅಸಮಾಧಾನ ಇದೆ. ನೀಡಿರೋ ಖಾತೆಗಳ ಬಗ್ಗೆಯೂ ಅತೃಪ್ತಿ ಇದೆ ಎಂದಿದ್ದಾರೆ. ಇನ್ನು ಖಾತೆ ಹಂಚಿಕೆ ವಿಷಯ ಅವರು ಆಂತರಿಕ ವಿಚಾರ.. ಆದರೆ ಇಷ್ಟು ಮಾತ್ರ ನಿಜ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ.. ಯಾವಾಗ ಏನು ಆಗುತ್ತದೆ ಎಂದು ಹೇಳಲು ಆಗುವುದಿಲ್ಲ. ಯಾವತ್ತಾದರೂ ಒಂದು ದಿನ ಸ್ಫೋಟವಾಗಬಹುದು ಎಂದು ಹೇಳಿದ್ದಾರೆ.

Source: newsfirstlive.com Source link