ಕ್ಯಾಮ್ಸ್​ ಶಶಿಕುಮಾರ್​ ಮೇಲೆ ಅಟ್ಯಾಕ್: ಐವರ ಬಂಧನ; 6 ತಿಂಗಳ ಹಿಂದೆಯೇ ನಡೆದಿತ್ತು ಕೊಲೆಗೆ ಸ್ಕೆಚ್..?

ಕ್ಯಾಮ್ಸ್​ ಶಶಿಕುಮಾರ್​ ಮೇಲೆ ಅಟ್ಯಾಕ್: ಐವರ ಬಂಧನ; 6 ತಿಂಗಳ ಹಿಂದೆಯೇ ನಡೆದಿತ್ತು ಕೊಲೆಗೆ ಸ್ಕೆಚ್..?

ಬೆಂಗಳೂರು: ಕ್ಯಾಮ್ಸ್ (ಖಾಸಗಿ ಪ್ರಾಥಮಿಕ, ಪ್ರೌಢ ಶಾಲೆಗಳ ಆಡಳಿತ ಮಂಡಳಿಯ ಒಕ್ಕೂಟ)​ನ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಕೊಲೆಗೆ ಯತ್ನ ಪ್ರಕರಣದ ಐವರು ಆರೋಪಿಗಳನ್ನ ಜಾಲಹಳ್ಳಿ ಪೊಲೀಸರು ಬಂಧಿಸಿದ್ದಾರೆ. ದಿಲೀಪ್, ಅಭಿ @ ಅಭಿಷೇಕ್, ಕಾರ್ತಿಕ್, ಪವನ್, ಭರತ್, ಬಂಧಿತ ಅರೋಪಿಗಳು.

6 ತಿಂಗಳ ಹಿಂದೆಯೇ ನಡೆದಿತ್ತು ಸ್ಕೆಚ್
ಬಂಧಿಸಿ ಪ್ರಾಥಮಿಕ ತನಿಖೆಯನ್ನ ನಡೆಸಿರುವ ಪೊಲೀಸ್ ಅಧಿಕಾರಿಗಳು, ಮಹತ್ವದ ಮಾಹಿತಿಗಳನ್ನ ಸಂಗ್ರಹಿಸಿದ್ದಾರೆ. ಮೂಲಗಳ ಪ್ರಕಾರ ಕೊಲೆ ಮಾಡೋಕೆ 6 ತಿಂಗಳ ಮೊದಲೇ ಆರೋಪಿಗಳು ಪ್ಲಾನ್‌ ಮಾಡಿದ್ದರು ಎನ್ನಲಾಗಿದೆ.

ಶಶಿಕುಮಾರ್ ಮನೆ ಬಳಿಯೇ ಆರೋಪಿಗಳು ಮನೆಯನ್ನ 6 ತಿಂಗಳ ಹಿಂದೆ ಬಾಡಿಗೆಯನ್ನ ಪಡೆದುಕೊಂಡಿದ್ದರು. ಜಾಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮುತ್ಸಾಲ ನಗರದ ಬಳಿ ಮನೆ ಮಾಡಿದ್ದರು. ಕೊಲೆಗೆ ಸ್ಕೆಚ್ ಹಾಕಿದ್ದ ಆರೋಪಿಗಳು ಶಿಕುಮಾರ್ ಮನೆ ಬಳಿ ಹೊಂಚು ಹಾಕಿ ಚಲನವಲನಗಳನ್ನ ಗಮನಿಸುತ್ತಿದ್ದರು ಅಂತಾ ಹೇಳಲಾಗಿದೆ.

ಅದರಂತೆ ಕಳೆದ ಜುಲೈ 29ರ ರಾತ್ರಿ ಮುತ್ಯಾಲನಗರದ ಮನೆ ಬಳಿ ಶಶಿಕುಮಾರ್ ಕೊಲೆಗೆ ಅಟ್ಯಾಕ್ ಮಾಡಿದ್ದರು. ಮಾರಕಾಸ್ತ್ರಗಳ ಸಹಾಯದಿಂದ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ್ದರು. ಈ ವೇಳೆ ತಮ್ಮ ಬಳಿಯಿದ್ದ ಗನ್ ಮ್ಯಾನ್ ಸಹಾಯದಿಂದ ಶಶಿಕುಮಾರ್ ಪ್ರಾಣಾಪಾಯದಿಂದ ಪಾರಾಗಿದ್ರು. ಈ ಸಂಬಂಧ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

blank

ಪಿಸ್ತೂಲ್ ವಶಕ್ಕೆ 
ಇನ್ನು ಬಂಧಿತರಿಂದ ಕೃತ್ಯಕ್ಕೆ ಬಳಿಸಿದ ಸ್ಟಾರ್ ಮಾಡೆಲ್ 81 ಎಂದು ಬರೆದಿರುವ ಒಂದು ಪಿಸ್ತೂಲ್, ಮೂರು ಜೀವಂತ ಗುಂಡುಗಳು ಹಾಗೂ ಒಂದು ಮಚ್ಚು, ಎರಡು ಲಾಂಗ್, ಒಂದು ಡ್ರ್ಯಾಗರ್, ಎರಡು ದ್ವಿಚಕ್ರ ವಾಹನಗಳು ಮತ್ತು ಮೊಬೈಲ್ ಫೋನ್​​ಗಳನ್ನ ವಶಕ್ಕೆ ಪಡೆಯಲಾಗಿದೆ.

ಕೊಲೆಗೆ ಸುಪಾರಿ..?
ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಸ್ಥಾನದ ಜಿದ್ದಿಗೆ ಬಿದ್ದು ಶಶಿಕುಮಾರ್ ಅವರನ್ನ ಕೊಲೆಗೆ ಸಂಚು ಅನ್ನೋ ಶಂಕೆಯನ್ನ ಪೊಲೀಸ್ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಶಶಿಕುಮಾರ್ ಅವರನ್ನ ಕೊಲೆ ಮಾಡಿದ್ರೆ ಆ ಸ್ಥಾನ ನಮಗೆ ಸಿಗುತ್ತೆ ಅಂದುಕೊಂಡು ಸುಪಾರಿ ಕೊಟ್ಟಿದ್ದರು. ಈ ಘಟನೆ ಬಳಿಕ ಎ1 ಆರೋಪಿ ತಲೆಮರೆಸಿಕೊಂಡಿದ್ದಾನೆ.

ಇದನ್ನೂ ಓದಿ: ಕ್ಯಾಮ್ಸ್ ಕಾರ್ಯದರ್ಶಿ ಶಶಿಕುಮಾರ್ ಮೇಲೆ ದುಷ್ಕರ್ಮಿಗಳಿಂದ ಕೊಲೆಗೆ ಯತ್ನ

Source: newsfirstlive.com Source link