ಕಂಗನಾ ರಾಣಾವತ್ ಫೋಟೋಗೆ ಸಮಂತಾ ‘ಬೆಂಕಿ’ ರಿಯಾಕ್ಷನ್.. ಏನೀ ಫೋಟೋದ ವಿಶೇಷತೆ..?

ಕಂಗನಾ ರಾಣಾವತ್ ಫೋಟೋಗೆ ಸಮಂತಾ ‘ಬೆಂಕಿ’ ರಿಯಾಕ್ಷನ್.. ಏನೀ ಫೋಟೋದ ವಿಶೇಷತೆ..?

ಮುಂಬೈ: ಬಾಲಿವುಡ್ ನಟಿ ಕಂಗನಾ ರಾಣಾವತ್ ಸದ್ಯ ಮೋಸ್ಟ್ ಎಕ್ಸ್​ಪೆಕ್ಟೆಡ್ ಸಿನಿಮಾ ಧಾಕಡ್ ಸಿನಿಮಾದಲ್ಲಿ ಮುಖ್ಯಪಾತ್ರದಲ್ಲಿ ನಟಿಸುತ್ತಿದ್ದಾರೆ. ಧಾಕಡ್ ಸಿನಿಮಾದಲ್ಲಿ ಅಗ್ನಿ ಹೆಸರಿನ ಪಾತ್ರದಲ್ಲಿ ಕಂಗನಾ ರಾಣಾವತ್ ಮಿಂಚಲಿದ್ದಾರೆ ಎನ್ನಲಾಗಿದೆ.

blank

ಸಿನಿಮಾದ ಶೂಟಿಂಗ್ ಬಹುತೇಕ ಮುಗಿದಿದ್ದು ಇತ್ತೀಚೆಗೆ ಕಂಗನಾ ರಾಣಾವತ್ ಇನ್​ಸ್ಟಾಗ್ರಾಂನಲ್ಲಿ ತನ್ನ ಪಾತ್ರದ ಫೋಟೋವೊಂದನ್ನ ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ಕುತ್ತಿಗೆಯ ಮೇಲೆ ವಿಶೇಷ ಟ್ಯಾಟೂ ಇರುವುದನ್ನೂ ಗಮನಿಸಬಹುದು.. ಇನ್ನು ಫೋಟೋದ ಜೊತೆಗೆ ಒಳಗಿನ ಕೆಡುಕುಗಳನ್ನ ಗೆದ್ದು ಬರ್ತೇನೆ ಎಂಬಂತೆ ಕ್ಯಾಪ್ಷನ್​ನ್ನೂ ಕೊಟ್ಟಿದ್ದಾರೆ.

ಕಂಗನಾ ರಾಣಾವತ್ ಫೋಟೋಗೆ ತೆಲುಗು ನಟಿ ಸಮಂತಾ ಅಕ್ಕಿನೇನಿ ಕೂಡ ರಿಯಾಕ್ಟ್ ಮಾಡಿದ್ದು ಎರಡು ಬೆಂಕಿ ಎಮೋಜಿಗಳನ್ನ ಕಮೆಂಟ್ ಮಾಡಿದ್ದಾರೆ.

blank

ಇನ್ನು ತಲೈವಿ ಸಿನಿಮಾಗಾಗಿ ಕಂಗನಾ ರಾಣಾವತ್ ತೂಕ ಹೆಚ್ಚಿಸಿಕೊಂಡಿದ್ದರು. ಇದೀಗ ಧಾಕಡ್ ಸಿನಿಮಾಗಾಗಿ ತೂಕ ಇಳಿಸಿಕೊಂಡಿದ್ದರು. ತಾವು ತೂಕ ಇಳಿಸಿಕೊಂಡಿರುವ ಫೋಟೋ ಮತ್ತು ತಲೈವಿ ಶೂಟಿಂಗ್ ಸಮಯದ ಫೋಟೋವನ್ನೂ ರಾಣಾವತ್ ಹಂಚಿಕೊಂಡಿದ್ದಾರೆ.

Source: newsfirstlive.com Source link