ಸೋಶಿಯಲ್ ಮೀಡಿಯಾದಲ್ಲಿ ಧೂಳ್ ಎಬ್ಬಿಸುತ್ತಿದೆ ಪೊಲೀಸ್ ಡ್ಯಾನ್ಸ್

ಮುಂಬೈ: ಮುಂಬೈ ಪೊಲೀಸ್ ಸಿಬ್ಬಂದಿಯೊಬ್ಬರ ಡ್ಯಾನ್ಸ್ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಧೂಳ್ ಎಬ್ಬಿಸುತ್ತಿದೆ.

ಇತ್ತೀಚೆಗಷ್ಟೇ ಅವರು ಡ್ಯಾನ್ಸ್ ಮಾಡಿರುವ ಕೆಲವು ವೀಡಿಯೋಗಳನ್ನು ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಈ ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ಸಾವಿರಾರು ಲೈಕ್ಸ್ ಹಾಗೂ ಕಾಮೆಂಟ್‍ಗಳು ಹರಿದು ಬರುತ್ತಿದೆ.

38 ವರ್ಷದ ಅಮೋಲ್ ಯಶವಂತ್ ಕಾಂಬ್ಳೆ ನೈಗಾಂವ್ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಮ್ಮ ಆಫೀಸ್ ಕೆಲಸ ಮುಗಿದ ಬಳಿಕ ಅಥವಾ ರಜಾದಿನಗಳಲ್ಲಿ ಚಲನಚಿತ್ರ ಗೀತೆಗಳಿಗೆ ನೃತ್ಯ ಅಭ್ಯಾಸ ಮಾಡುತ್ತಾರೆ ಮತ್ತು ಅವುಗಳನ್ನು ವೀಡಿಯೋ ಮಾಡುತ್ತಾರೆ. ಸದ್ಯ ಅಪ್ಪು ರಾಜ ಚಿತ್ರದ ‘ಆಯಾ ಹೈ ರಾಜಾ’ ಸಾಂಗ್‍ಗೆ ಅಮೋಲ್ ಯಶವಂತ್ ಕಾಂಬ್ಳೆಯವರು ಮಾಡಿರುವ ನೃತ್ಯ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಗಮನ ಸೆಳೆಯುತ್ತಿದೆ.

ವೀಡಿಯೋವೊಂದರಲ್ಲಿ ದ್ವಿಚಕ್ರ ವಾಹನ ಸವಾರನೊಬ್ಬನಿಗೆ ಮಾಸ್ಕ್ ಸರಿಯಾಗಿ ಧರಿಸುವಂತೆ ತಿಳಿಸುವ ಥೀಮ್‍ನನ್ನು ಆಧರಿಸಿ ನೃತ್ಯ ಮಾಡಲಾಗಿದ್ದು, ಈ ವೀಡಿಯೋಗೆ ಸೋಶಿಯಲ್ ಮೀಡಿಯಾದಲ್ಲಿ ಲಕ್ಷಗಟ್ಟಲೆ ಲೈಕ್ ಬಂದಿದೆ. ಕುಂಬ್ಳೆಯವರು 2004ರಲ್ಲಿ ಪೊಲೀಸ್ ಕೆಲಸಕ್ಕೆ ಸೇರಿಕೊಂಡಿದ್ದು, ಬಾಲ್ಯದಿಂದಲೂ ನೃತ್ಯ ಕುರಿತಂತೆ ಆಸಕ್ತಿ ಹೊಂದಿರುವುದಾಗಿ ತಿಳಿಸಿದ್ದಾರೆ.  ಇದನ್ನೂ ಓದಿ:ಹರಿಯಾಣ ಸರ್ಕಾರ 6 ಕೋಟಿ, ಆನಂದ್ ಮಹೀಂದ್ರ ಕಾರ್ ಗಿಫ್ಟ್- ಚಿನ್ನದ ನೀರಜ್‍ಗೆ ಭರ್ಜರಿ ಉಡುಗೊರೆ

Source: publictv.in Source link