‘ನಾನು ಟ್ಯಾಕ್ಸ್ ಕದ್ದಿದ್ದೆ.. ಅದಕ್ಕೇ ನನ್ನ ಮೇಲೆ ಐಟಿ ದಾಳಿ ಮಾಡಿದ್ದರು’- ಬಿಜೆಪಿ ಸಂಸದ

‘ನಾನು ಟ್ಯಾಕ್ಸ್ ಕದ್ದಿದ್ದೆ.. ಅದಕ್ಕೇ ನನ್ನ ಮೇಲೆ ಐಟಿ ದಾಳಿ ಮಾಡಿದ್ದರು’- ಬಿಜೆಪಿ ಸಂಸದ

ದಾವಣಗೆರೆ: ನಾನು ಟ್ಯಾಕ್ಸ್ ಕದ್ದಿದ್ದೆ ಅದಕ್ಕೆ ನನ್ನ ಮೇಲೆ ಐಟಿ ದಾಳಿ ಮಾಡಿದ್ರು ಎಂದು ದಾವಣಗೆರೆಯಲ್ಲಿ ಸುದ್ದಿಗೋಷ್ಟಿಯಲ್ಲಿ ಸಂಸದ ಜಿಎಂ ಸಿದ್ದೇಶ್ವರ್ ಹೇಳಿಕೆ ನೀಡುವ ಮೂಲಕ ತಾವು ಮಾಡಿದ ತಪ್ಪನ್ನ ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ: ಇಂಧನ ಬೆಲೆ ಏರಿಕೆ; ಸೈಕಲ್​ನಲ್ಲಿ ಓಡಾಡಿದ್ರೆ ವ್ಯಾಯಾಮ ಆಗುತ್ತೆ ಎಂದ ಸಂಸದ

ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಮೇಲೆ ಇಡಿ ದಾಳಿ ವಿಚಾರವಾಗಿ ಮಾತನಾಡಿದ ಅವರು.. ಐಟಿ-ಇಡಿ ಸ್ವತಂತ್ರ್ಯ ಸಂಸ್ಥೆಗಳು.. ನನ್ನ ಮೇಲೂ ಐಟಿ ರೆಡ್ ಆಗಿತ್ತು.. ಯಾರು ಭ್ರಷ್ಟರು ಇರ್ತಾರೆ ಹಾಗೂ ಯಾರು ಟ್ಯಾಕ್ಸ್ ಕದಿತಾರೆ ಅವರ ಮೇಲೆ ರೇಡ್ ಮಾಡ್ತಾರೆ.. ನಾನು ಟ್ಯಾಕ್ಸ್ ಕದ್ದಿದ್ದೆ ಹೀಗಾಗಿ ನನ್ನ ಮೇಲು ರೇಡ್ ಆಗಿದೆ ಎಂದಿದ್ದಾರೆ.

ಇನ್ನು ಮೇಕೆದಾಟು ವಿಚಾರವಾಗಿ ಅಣ್ಣಾ ಮಲೈ ಉಪವಾಸ ಸತ್ಯಾಗ್ರಹ ಹಿನ್ನಲೆ ಮಾತನಾಡಿ.. ಸುಪ್ರೀಂ ಕೋರ್ಟ್​ನ ಆದೇಶದಂತೆ ಮೇಕೆದಾಟು ಕಟ್ಟೇ ಕಟ್ಟುತ್ತೇವೆ.. ಯಾರೇ ವಿರೋಧ ಮಾಡಿದ್ರೂ ಬಿಡಲ್ಲ. ಯಾರಿಗೂ ಸೊಪ್ಪು ಹಾಕಲ್ಲ..  ಮೇಕೆದಾಟನಲ್ಲಿ ಡ್ಯಾಂ ಕಟ್ಟೋದು ನಮ್ಮ ಹಕ್ಕು ನಾವು ಕಟ್ಟೇ ಕಟ್ಟುತ್ತೇವೆ ಎಂದಿದ್ದಾರೆ.

Source: newsfirstlive.com Source link