ಚಿಕ್ಕಮಗಳೂರು: ಪ್ರವಾಸಿಗರಿಗೆ RTPCR ವರದಿ ಕಡ್ಡಾಯ ಮಾಡುವಂತೆ ರಸ್ತೆ ತಡೆ -ಟ್ರಾಫಿಕ್​​ ಜಾಮ್

ಚಿಕ್ಕಮಗಳೂರು: ಪ್ರವಾಸಿಗರಿಗೆ RTPCR ವರದಿ ಕಡ್ಡಾಯ ಮಾಡುವಂತೆ ರಸ್ತೆ ತಡೆ -ಟ್ರಾಫಿಕ್​​ ಜಾಮ್

ಚಿಕ್ಕಮಗಳೂರು: ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಆರ್​ಟಿಪಿಸಿಆರ್ ನೆಗೆಟಿವ್​ ವರದಿ ಕಡ್ಡಾಯ ಮಾಡುವಂತೆ ಆಗ್ರಹಿಸಿ ಚಿಕ್ಕಮಗಳೂರು ತಾಲೂಕಿನ ಕೈಮರ ಚೆಕ್ ಪೋಸ್ಟ್ ಬಳಿ ಕಾಂಗ್ರೆಸ್ ಕಾರ್ಯಕರ್ತರು, ಪ್ರಗತಿಪರರಿಂದ ಪ್ರತಿಭಟನೆ ನಡೆಸಿದರು. ಈ ಹಿನ್ನೆಲೆಯಲ್ಲಿ ಕೈಮರ ಚೆಕ್ ಪೋಸ್ಟ್ ಟ್ರಾಫಿಕ್ ಜಾಮ್ ಉಂಟಾಗಿತ್ತು.

ಮುಳ್ಳಯ್ಯನಗಿರಿ, ದತ್ತಪೀಠ ಪ್ರದೇಶಗಳಿಗೆ ಹೋಗದಂತೆ ಕಾಂಗ್ರೆಸ್ ಕಾರ್ಯಕರ್ತರು, ಪ್ರಗತಿ ಪರರಿಂದ ಕೈಮರ ಚೆಕ್ ಪೋಸ್ಟ್ ಬಳಿ ಪ್ರತಿಭಟನೆ ನಡೆಸಿದರು. ಪ್ರವಾಸಿಗರಿಗೆ 72 ಗಂಟೆಯೊಳಗಿನ ಕೋವಿಡ್ ನೆಗೆಟಿವ್ ರಿಪೋರ್ಟ್ ಕಡ್ಡಾಯ ಹಾಗೂ ಎಲ್ಲಾ ಪ್ರವಾಸಿಗರ ಕೋವಿಡ್ ರಿಪೋರ್ಟ್ ನೋಡಿ ಬಿಡುವಂತೆ ಆಗ್ರಹ ಮಾಡಿದರು. ರಸ್ತೆ ತಡೆ ಹಿನ್ನೆಲೆ ಎರಡು ಕಿಲೋ ಮೀಟರ್ ಹೆಚ್ಚು ದೂರ ಟ್ರಾಫಿಕ್ ಜಾಮ್ ಉಂಟಾಗಿತ್ತು. ಇದರಿಂದ ವೀಕೆಂಡ್ ಮಸ್ತಿ ಮಾಡಲು ಬಂದ ಪ್ರವಾಸಿಗರಿಗೆ ನಿರಾಸೆ ಎದುರಾಗಿತ್ತು.

Source: newsfirstlive.com Source link