ರಸ್ತೆ ಮಧ್ಯೆ ಕೂತು ಸ್ನಾನ ಮಾಡಿದ ಬಾಲಿವುಡ್​​​ ಸ್ಟಾರ್​​​​​ ನಟ

ರಸ್ತೆ ಮಧ್ಯೆ ಕೂತು ಸ್ನಾನ ಮಾಡಿದ ಬಾಲಿವುಡ್​​​ ಸ್ಟಾರ್​​​​​ ನಟ

ರಸ್ತೆ ಮಧ್ಯೆ ಕೂತು ಸ್ನಾನ ಮಾಡಿದ ಬಾಲಿವುಡ್​​​ ನಟ ಮಿಲಿಂದ್​ ಸೋಮನ್ ವಿಡಿಯೋ ಭಾರೀ ವೈರಲ್​​ ಆಗಿದೆ. ನಟ ಮಿಲಿಂದ್ ಸೋಮನ್ ಅವರೇ ಖುದ್ದು​​​​ ರಸ್ತೆ ಮಧ್ಯೆ ಕುಳಿತು ಬಕೆಟ್​ನಿಂದ ನೀರು ತೆಗೆದುಕೊಂಡು ಮೈಮೇಲೆ ಸುರಿದುಕೊಳ್ಳುತ್ತಿರುವ ವಿಡಿಯೋ ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈಗ ಮಿಲಿಂದ್​​ ಸೋಮನ್​​ ಹಂಚಿಕೊಂಡಿರುವ ವಿಡಿಯೋ ಸೋಷಿಯಲ್​​ ಮೀಡಿಯಾದಲ್ಲಿ ಭಾರೀ ವೈರಲ್​​ ಆಗಿದ್ದು, ಸಾರ್ವಜನಿಕರು ಫುಲ್​​ ಫಿದಾ ಆಗಿದ್ದಾರೆ.

ಇದನ್ನೂ ಓದಿ: ‘ಮೊದಲು ಗ್ಲಾಮರಸ್-ನಂತರ ಬೋಲ್ಡ್-ಅಮೇಲೆ ನಗ್ನವಾಗಬೇಕಾಯ್ತು’ ಕುಂದ್ರಾ ವಿರುದ್ಧ ನಟಿ ಆರೋಪ

ವಿಡಿಯೋದಲ್ಲಿ ಮಿಲಿಂದ್​​ ‘ಥಂಡೆ ಥಂಡೆ ಪಾನಿ ಸೇ ನಹಾನಾ ಚಾಹಿಯೆ’ ಎಂಬ ಹಿಂದಿ ಸಾಂಗ್​​ ಹಾಡುತ್ತಾ ಭರ್ಜರಿ ಸ್ನಾನ ಮಾಡಿದ್ದಾರೆ. ಇದಕ್ಕೊಂದು ಕ್ಯಾಪ್ಷನ್​​ ಕೊಟ್ಟಿರುವ ಮಿಲಿಂದ್​​, ಹಾಟ್​​ ವಾಟರ್​​, ಕೋಲ್ಡ್ ರೈನ್ಸ್, ಮಿಡ್​​ನೈಟ್​​ ಮಾನ್ಸೂನ್. ಹೀಗೆ ಶೂಟಿಂಗ್ ನಿಜವಾಗಲೂ ಖುಷಿಕೊಡುತ್ತದೆ. ಜತೆಗೆ ಕೇವಲ ಪುಶಪ್ಸ್ ಮಾತ್ರವಲ್ಲ, ಸಿನಿಮಾ ಕೂಡ ಮಾಡ್ತೀನಿ. ಸದ್ಯದಲ್ಲೇ ನನ್ನ ಹೊಸ ಚಿತ್ರ ಬರಲಿದೆ’’ ಎಂದು ಬರೆದುಕೊಂಡಿದ್ದಾರೆ. ಬಾಜಿರಾವ್ ಮಸ್ತಾನಿ, 16 ಡಿಸೆಂಬರ್ ಸೇರಿದಂತೆ ಕೆಲವು ಖ್ಯಾತ ಹಿಂದಿ ಚಿತ್ರಗಳಲ್ಲಿ ಮಿಲಿಂದ್​ ನಟಿಸಿದ್ದಾರೆ.

 

View this post on Instagram

 

A post shared by Milind Usha Soman (@milindrunning)

Source: newsfirstlive.com Source link