ರೋಗಗ್ರಸ್ಥ ಸರ್ಕಾರಿ ಕೈಗಾರಿಕೆಗಳಿಗೆ ಮರುಚಾಲನೆ.. ಇಲ್ಲವೇ ಸೇಲ್ ಮಾಡಿ ಕಾರ್ಯಾರಂಭ- ನಿರಾಣಿ

ರೋಗಗ್ರಸ್ಥ ಸರ್ಕಾರಿ ಕೈಗಾರಿಕೆಗಳಿಗೆ ಮರುಚಾಲನೆ.. ಇಲ್ಲವೇ ಸೇಲ್ ಮಾಡಿ ಕಾರ್ಯಾರಂಭ- ನಿರಾಣಿ

ಬಾಗಲಕೋಟೆ: ಬೀಳಗಿಯಲ್ಲಿ ನೂತನ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ ಹೇಳಿಕೆ ನೀಡಿ ರಾಜ್ಯದಲ್ಲಿ ಇರುವ ಸರ್ಕಾರಿ ಸ್ವಾಮ್ಯದ ರೋಗಗ್ರಸ್ತ ಕೈಗಾರಿಕೆಗಳಿಗೆ ಮರುಚಾಲನೆ ಇಲ್ಲವೇ ಸೇಲ್ ಮಾಡಿ ಕಾರ್ಯರಂಭಕ್ಕೆ ಕ್ರಮ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ.

ಕೈಗಾರಿಕೆ ಕ್ಷೇತ್ರ ಅಭಿವೃದ್ದಿ ಪಡಿಸುವ ಹಿನ್ನಲೆ ಇಂದು ಬೆಳಗ್ಗೆಯಿಂದಲೇ ಮೂರ್ನಾಲ್ಕು ರಾಜ್ಯಗಳ ಕೈಗಾರಿಕೋದ್ಯಮಿಗಳು ಹಾಗೂ ಕಾರ್ಯದರ್ಶಿಗಳ ಜೊತೆ ಮಾತಾಡಿದ್ದೇನೆ. ಯುಪಿ, ಮಹಾರಾಷ್ಟ್ರ,  ಜಾರ್ಖಂಡ್ ರಾಜ್ಯಗಳ ಜೊತೆ ಬೆಳಗ್ಗೆ ಮಾತಾಡಿದ್ದೇನೆ. ಎರಡ್ಮೂರು ದಿನಗಳಲ್ಲಿ ರಾಜ್ಯದ ಹಿರಿಯ ಅಧಿಕಾರಿಗಳ ಜೊತೆ ದೆಹಲಿಗೆ ತೆರಳಲಿದ್ದೇನೆ. ಕೈಗಾರಿಕೆ ಸಚಿವನಾಗಿ ಐದು ವರ್ಷದ ಅನುಭವ ಇದೆ. ಅನೇಕ ಕಾರ್ಖಾನೆ ನಡೆಸುತ್ತಿರುವ ಅನುಭವ ಇದೆ. ನಮಗೆ ಇರುವ ಎರಡು ವರ್ಷದ  ಅವಧಿಯಲ್ಲಿ ಐದು ವರ್ಷದಲ್ಲಿ ಆಗುವ ಕೆಲಸ ಮಾಡುತ್ತೇವೆ. 24/7 ಕೆಲಸ ಮಾಡುವ ಗುರಿ ಹಾಕಿಕೊಂಡಿದ್ದೇನೆ. ನಿರುದ್ಯೋಗ ಸಮಸ್ಯೆ ನಿವಾರಿಸಲು ನಿರುದ್ಯೋಗಿ ಪದವವೀಧರರಿಗೆ ಉದ್ಯೋಗ, ಕೈಗಾರಿಕಾ ನೀತಿ ಸರಳಿಕರಣ ಮಾಡುತ್ತೇವೆ.. ಹೆಚ್ಚು ಜನರನ್ನು ಉದ್ಯಮಿಗಳನ್ನಾಗಿಸುವ ಗುರಿ ಇದೆ ಎಂದು ಇದೇ ವೇಳೆ ಹೇಳಿದ್ದಾರೆ.

Source: newsfirstlive.com Source link