ಗಗನಕ್ಕೇರಿದ ಪೆಟ್ರೋಲ್ ಬೆಲೆ; ಇತ್ತ ಬಂಕ್​ನಲ್ಲಿ ಮೋಸಕ್ಕಾಗಿ ಲಂಚದ ಬೇಡಿಕೆ ಇಟ್ಟ ಅಧಿಕಾರಿ

ಗಗನಕ್ಕೇರಿದ ಪೆಟ್ರೋಲ್ ಬೆಲೆ; ಇತ್ತ ಬಂಕ್​ನಲ್ಲಿ ಮೋಸಕ್ಕಾಗಿ ಲಂಚದ ಬೇಡಿಕೆ ಇಟ್ಟ ಅಧಿಕಾರಿ

ಬೆಂಗಳೂರು: ಒಂದೆಡೆ ಪೆಟ್ರೋಲ್ ಡೀಸೆಲ್ ಬೆಲೆ ಗಗನಕ್ಕೇರಿದೆ.. ಇತ್ತ ಪೆಟ್ರೋಲ್ ಬಂಕ್​ಗಳಲ್ಲೂ ಸಹ ಪೆಟ್ರೋಲ್​ ಹಾಕುವಾಗ ಮೋಸವಾಗ್ತಿದೆ. ಇಂಥ ಮೋಸಕ್ಕೆ ಅಧಿಕಾರಿಗಳೇ ಶಾಮೀಲಾಗಿರೋದು ಇದೀಗ ಬಯಲಾಗಿದೆ. ಸ್ವತಃ ಕಾನೂನು ಮಾಪನ ಶಾಸ್ತ್ರ ಇಲಾಖೆಯ ಅಧಿಕಾರಿ ಸೀಮಾ ಕೆ. ಮ್ಯಾಗಿ ಹಾಗೂ ಏಜೆಂಟ್ ಶಿವಕುಮಾರ್ ಹಫ್ತಾ ವಸೂಲಿ ಮಾಡಿ ವಿಡಿಯೋದಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ಇದನ್ನು ಗಮನಿಸಿದ್ದ ಸಾಮಾಜಿಕ ಕಾರ್ಯಕರ್ತ ಪಿಳ್ಳಪ್ಪ ಅದನ್ನು ರಹಸ್ಯ ಕ್ಯಾಮೆರಾದಲ್ಲಿ ಸೆರೆ ಹಿಡಿದು ಸಿಡಿ ಸಮೇತ ಎಸಿಬಿಗೆ ದೂರು ನೀಡಿದ್ದಾರೆ.

ಕೇಂದ್ರ ಸರ್ಕಾರ ಪೆಟ್ರೋಲ್ ಬಂಕ್ ನಲ್ಲಿ ಗ್ರಾಹಕರಿಗೆ ಮೋಸ ಆಗಬಾರದು ಅಂತಾ ಪ್ರತಿ ಪೆಟ್ರೋಲ್ ಕಂಪನಿಗಳ ಟೆಂಪರಿಂಗ್ ಚೆಕ್ ಮಾಡಲು ಸೇಲ್ಸ್ ಆಫೀಸರ್​ ನ ನೇಮಕ ಮಾಡಿರುತ್ತೆ. ಇಲ್ಲಿ ಆತನ ಪ್ರಮಾಣಿಕ ಕೆಲಸವನ್ನು, ಪೆಟ್ರೋಲ್ ಕಳ್ಳತನ ಮಾಡಲು ಬಿಡದೇ ಇದ್ದದ್ದಕ್ಕೆ ಅಧಿಕಾರಿಗಳು ಸೇಲ್ಸ್ ಆಫೀಸರ್ ವಿರುದ್ಧವೇ ಕಿಡಿಕಾರಿದ್ದಾರೆ.

ಲಂಚಬಾಕ ಅಧಿಕಾರಿ?

ಪೆಟ್ರೋಲ್ ಬಂಕ್ ನಲ್ಲಿ ನಡೆಯುವ ಮೋಸವನ್ನು ತಡೆದು ಪ್ರಶ್ನಿಸಲು ರಾಜ್ಯ ಸರ್ಕಾರ ಇವರಿಗೆ ಅಧಿಕಾರಿ ಮಾಡಿದ್ರೆ, ಈ ಕೆಎಎಸ್ ಅಧಿಕಾರಿ ಸೀಮಾ ಎಂಬುವವರು, ಕೇಂದ್ರದಿಂದ ಬಂದಿರುವ ಪ್ರಮಾಣಿಕ ಅಧಿಕಾರಿಯ ಸಮರ್ಥಿಸಿಕೊಳ್ಳುವ ಕೆಲಸ ಮಾಡುವ ಬದಲಿಗೆ ತನ್ನ ಲಂಚಬಾಕತನವನ್ನ ಪ್ರದರ್ಶನ ಮಾಡಿದ್ದಾರೆ ಎನ್ನಲಾಗಿದೆ.

ಇಷ್ಟೇ ಅಲ್ಲದೆ ಎಸಿ ಸೀಮಾ ಮೇಡಮ್ ಒಬ್ಬ ಪ್ರಮಾಣಿಕ ಅಧಿಕಾರಿಯ ವಿರುದ್ದ ಪೆಟ್ರೊಲ್ ಬಂಕ್​ನವರನ್ನೇ ಎತ್ತಿ ಕಟ್ತಾರೆ. ಜೊತೆಗೆ ತಾನು ಬಂದ್ರೆ ಪೆಟ್ರೋಲ್ ಹಾಕುವುದರಲ್ಲಿ ಟೆಂಪರಿಂಗ್ ಮಾಡಲು ಸಹಾಯ ಮಾಡುವುದಾಗಿ ಹೇಳ್ತಾರೆ. ಹೀಗೆ ಮಾಡಿದ್ರೆ, ಈ ದುಬಾರಿ ಪೆಟ್ರೋಲ್ ರೇಟ್ ನಲ್ಲಿ ಜನ ಸಾಮಾನ್ಯರು ಏನಾಗಬೇಕು ಹೇಳಿ.

ಇದನ್ನೆಲ್ಲ ಪಿಳ್ಳಪ್ಪ ಎಂಬುವವರು ಸಿಡಿ ಮಾಡಿದ್ದು ನಂದಿ ಕಿಸಾನ್ ಏಜೆನ್ಸಿ ಪೆಟ್ರೋಲ್ ಬಂಕ್ ಸೇರಿದಂತೆ ಅನೇಕ ಕಡೆ ಲಂಚ ಪಡೆದು ಹೋಗ್ತಾರೆ ಅಂತಾ ದೂರುದಾರ ಪಿಳ್ಳಪ್ಪ ಉಲ್ಲೇಖಿಸಿದ್ದಾರೆ. ಇನ್ನು ಸೀಮಾ ಕೆ. ಮ್ಯಾಗಿಗೆ ಇಲಾಖೆಯೂ ನೋಟಿಸ್ ಜಾರಿ ಮಾಡಿದೆ. ಆದರೆ, ಸೀಮಾ ತನ್ನ ಮೇಲೆ ಕ್ರಮ ಆಗದಂತೆ ತಡೆಯಲು ಶಾಸಕರ ಕಡೆಯಿಂದ ಒತ್ತಡ ಹಾಕಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಸದ್ಯ ಎಸಿಬಿ ಸೀಮಾ ವಿರುದ್ದ ಕೇಸ್ ದಾಖಲಿಸಿಕೊಂಡು ತನಿಖೆ ಆರಂಭಿಸಿದೆ.

Source: newsfirstlive.com Source link