ಲಗೇಜ್​ ಕಳೆದ್ಕೊಂಡಿದ್ದ ಪ್ರಯಾಣಿಕನಿಗೆ ₹17.5 ಲಕ್ಷ ಪಾವತಿಸುವಂತೆ ರೈಲ್ವೇಗೆ ಆದೇಶ

ಲಗೇಜ್​ ಕಳೆದ್ಕೊಂಡಿದ್ದ ಪ್ರಯಾಣಿಕನಿಗೆ ₹17.5 ಲಕ್ಷ ಪಾವತಿಸುವಂತೆ ರೈಲ್ವೇಗೆ ಆದೇಶ

ಹೈದರಾಬಾದ್​​ ಜಿಲ್ಲಾ ಗ್ರಾಹಕ ಆಯೋಗ ಪ್ರಯಾಣಿಕರೊಬ್ಬರಿಗೆ 17.5 ಲಕ್ಷ ರೂಪಾಯಿ ಪಾವತಿ ಮಾಡುವಂತೆ ದಕ್ಷಿಣ ಕೇಂದ್ರ ರೈಲ್ವೇಗೆ ಆದೇಶ ನೀಡಿದೆ. ಹೈದರಾಬಾದ್​​ನ ನಿವಾಸಿಯಾಗಿದ್ದ ಪ್ರಯಾಣಿಕ 15 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ಪ್ರಯಾಣದ ವೇಳೆ ಕಳೆದುಕೊಂಡಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಗ್ರಾಹಕ ಆಯೋಗ ಪ್ರಯಾಣಿಕ ಕಳೆದುಕೊಂಡಿದ್ದ 14,01,078 ರೂಪಾಯಿ, ಬೆಳ್ಳಿ ವಸ್ತುಗಳಿಗಾಗಿ 50,000 ಸಾವಿರ ರೂಪಾಯಿ ಹಾಗೂ ನಗದು 3 ಲಕ್ಷ ರೂಪಾಯಿ (9% ಬಡ್ಡಿಯೊಂದಿಗೆ), ಲೀಗಲ್​​ ಚಾರ್ಜ್​​ 5 ಸಾವಿರ ಸೇರಿದಂತೆ ಗ್ರಾಹಕರಿಗೆ ಉಂಟಾದ ಮಾನಸಿಕ ಒತ್ತಡಕ್ಕೆ ಹೆಚ್ಚುವರಿಯಾಗಿ 50 ಸಾವಿರ ರೂಪಾಯಿ, ನೀಡುವಂತೆ ದೇಶ ನೀಡಿದೆ.

ಏನಿದು ಪ್ರಕರಣ..?
ಹೈದರಾಬಾದ್ ನಿವಾಸಿಯಾಗಿದ್ದ ಶೀತಲ್​​ ಎನ್ನುವವರು ತಮ್ಮ ಕುಟುಂಬದೊಂದಿಗೆ ಬೆಂಗಳೂರಿನ ಕಾಚಿಗೂಡ-ಯಶವಂತಪುರ ಎಕ್ಸ್​ಪ್ರೆಸ್​​ ರೈಲಿನಲ್ಲಿ 2017ರ ಆಗಸ್ಟ್​ 12 ರಂದು ಪ್ರಯಾಣ ಬೆಳೆಸಿದ್ದರು. ಸಮಾರಂಭವೊಂದಕ್ಕೆ ತೆರಳುತ್ತಿದ್ದ ಹಣ ಚಿನ್ನ, ಬೆಳ್ಳಿ ವಸ್ತುಗಳು ಸೇರಿದಂತೆ ನಗದು ಹಣದೊಂದಿಗೆ ರಿಸರ್ವ್ಡ್​​ ಕೋಚ್​​ನಲ್ಲಿ ಪ್ರಯಾಣ ಬೆಳೆಸಿದ್ದರು. ಆದರೆ ಮಾರ್ಗ ಮಧ್ಯೆ ಲಗೇಜ್​ ಕಳ್ಳತನವಾಗಿತ್ತು. ಮನೆಗೆ ತೆರಳಿದ ಬಳಿಕ ಕಳ್ಳತನ ಅರಿವಾಗಿದ್ದ ಕುಟುಂಬಸ್ಥರು ಯಶವಂಪುರ ರೂರಲ್​ ರೈಲ್ವೇ ಪೊಲೀಸ್​ ಠಾಣೆಗೆ ದೂರು ದಾಖಲಿಸಿದ್ದರು. ಆದರೆ ಅವರಿಂದ ಯಾವುದೇ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ಈ ಹಿನ್ನೆಲೆಯಲ್ಲಿ ಹೈದರಾಬಾದ್​ ಗ್ರಾಹಕ ವೇದಿಕೆಯಲ್ಲಿ ದೂರು ದಾಖಲಿಸಿದ್ದರು.

ಪ್ರರಕಣದ ವಿಚಾರಣೆ ನಡೆಸಿದ ಆಯೋಗ, ಅನಧಿಕೃತ ವ್ಯಕ್ತಿಗಳು ರೈಲ್ವೇ ಕೋಚ್​ ಒಳಗೆ ಪ್ರವೇಶ ಮಾಡಲು ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಅಭಿಪ್ರಾಯಪಟ್ಟಿದೆ. ಅಲ್ಲದೇ ರಿಸರ್ವ್ಡ್ ಕೋಚ್​​ನಲ್ಲಿ ಬಂದಿದ್ದ ವ್ಯಕ್ತಿಗಳನ್ನು ಗುರುತಿಸಲು ಕರ್ತವ್ಯದಲ್ಲಿದ್ದ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ತಿಳಿಸಿ ಆದೇಶ ನೀಡಿದೆ.

Source: newsfirstlive.com Source link